ಉಡುಪಿ : ಮಹಿಳೆಯೊಬ್ಬಳು ತನ್ನ ಗಂಡನನ್ನೆ ಕೊಲೆ ಮಾಡಿರುವ ಘಟನೆ ಕಾರ್ಕಳದ ಅಜೆಕಾರು ದೆಪ್ಪುತ್ತೆಯಲ್ಲಿ ನಡೆದಿದೆ. ಪ್ರಿಯಕರನ ಜೊತೆ ಸೇರಿ ಗಂಡನಿಗೆ ವಿಷ ಉಣಿಸಿ ಕೊಲೆ ಮಾಡಿಸಿರುವ ಶಂಕೆ ವ್ಯಕ್ತವಾಗಿದೆ.
ಬಾಲಕೃಷ್ಣ ಅವರು ಏಕಾಏಕಿ ಆರೋಗ್ಯ ಕೆಟ್ಟು ಬೆಂಗಳೂರು ಆಸ್ಪತ್ರೆ ಸೇರಿದ್ದರು. ಚೇತರಿಸಿಕೊಂಡು ಮನೆಗೆ ಬಂದ ಬಳಿಕ ದಿಢೀರ್ ಸಾವನ್ನಪ್ಪಿದ್ದಾರೆ. ಅಸಹಜ ಸಾವಿನ ಬಗ್ಗೆ ಮನೆಯವರು ಸಂಶಯ ವ್ಯಕ್ತಪಡಿಸಿದ್ದರು.
ಬಳಿಕ ಅಜೆಕಾರು ಪೊಲೀಸರು ಬಾಲಕೃಷ್ಣ ಪತ್ನಿಯನ್ನು ವಿಚಾರಣೆ ನಡೆಸಿದ್ದಾರೆ. ವಿಚಾರಣೆಯ ವೇಳೆ ಪೊಲೀಸರ ಮುಂದೆ ವಿಷ ನೀಡಿ ಕೊಲೆ ಮಾಡಿರೋದಾಗಿ ಪತ್ನಿ ತಪ್ಪೊಪ್ಪಿಕೊಂಡಿದ್ದಾರೆ. ಇನ್ನು ಪೊಲೀಸರು ಕಾರ್ಕಳದ ಅಜೆಕಾರು ದೆಪ್ಪುತ್ತೆಯಲ್ಲಿ ಪ್ರಿಯಕರ ಮತ್ತು ಬಾಲಕೃಷ್ಣ ಪತ್ನಿ ಪೊಲೀಸ್ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
Post Views: 727