ಬಿಗ್ಬಾಸ್ ಕನ್ನಡ ಸೀಸನ್ 11 ರಲ್ಲಿ ಪ್ರತಿ ದಿನ ಹೊಸ ಹೊಸ ಬೆಳವಣಿಗೆಗಳು ನಡೆಯುತ್ತಿವೆ. ಭಾರಿ ಜಗಳಗಳು ನಡೆದು ಇಬ್ಬರು ಸ್ಪರ್ಧಿಗಳು ಮನೆಯಿಂದ ಹೊರಗೆ ಹೋಗಿದ್ದಾರೆ. ಇದೀಗ ದೊಡ್ಮನೆಗೆ ಹೊಸ ಸ್ಪರ್ಧಿಯೊಬ್ಬರು ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಪಡೆದುಕೊಂಡಿದ್ದಾರೆ.
ಸಂಗೀತದ ಮೂಲಕ ರಂಜಿಸಿದ್ದ ಗಾಯಕ ಹನುಮಂತ ಈಗ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಇದರ ಪ್ರೋಮೋವೊಂದನ್ನು ವಾಹಿನಿ ಹಂಚಿಕೊಂಡಿದೆ. ಹದಿನಾಲ್ಕು ಮಂದಿ ಇರುವ ಆಟದಲ್ಲಿ 15ನೇ ಸ್ಪರ್ಧಿಯ ಆಗಮನವಾಗಿದೆ. ಸಿಂಗರ್ ಆಗಿ ಗೆದ್ದು ಬೀಗಿದ್ದ ಜವಾರಿ ಹುಡುಗ ಹನುಮಂತ ಬೆಳ್ಳಿ ಮೂಡಿತೋ ಕೋಳಿ ಕೂಗಿತೋ ಎಂಬ ಹಾಡಿನ ಮೂಲಕ ಎಂಟ್ರಿ ಕೊಟ್ಟಿದ್ದಾರೆ. ಅವರ ಆಗಮನ ಕೆಲವರಿಗೆ ಖುಷಿ ಕೊಟ್ಟಿದ್ದರೆ, ಇನ್ನೂ ಕೆಲವರಿಗೆ ಅಚ್ಚರಿ ಮೂಡಿಸಿದೆ.
ದೊಡ್ಮನೆಗೆ ಬಂದ ಮೊದಲ ದಿನವೇ ಹನುಮಂತ ಕ್ಯಾಪ್ಟನ್ ಎಂದು ಬಿಗ್ ಬಾಸ್ ಘೋಷಿಸಿದೆ. ಸಾಮಾನ್ಯವಾಗಿ ಬಿಗ್ ಬಾಸ್ ಶುರುವಾಗಿ ತಿಂಗಳ ಬಳಿಕ ವೈಲ್ಡ್ ಕಾರ್ಡ್ ಎಂಟ್ರಿಯನ್ನು ಕೊಡಿಸಲಾಗುತ್ತದೆ. ಆದರೆ, ಈ ಬಾರಿ ಆ ರೀತಿ ಮಾಡಿಲ್ಲ. ವಾರದ ಮಧ್ಯದಲ್ಲೇ ಇಬ್ಬರು ಹೋಗಿದ್ದರಿಂದ ಮೂರೇ ವಾರಕ್ಕೆ ವೈಲ್ಡ್ ಕಾರ್ಡ್ ಎಂಟ್ರಿಯ ಆಗಮನ ಆಗಿದೆ ಅನ್ನೋದು ವಿಶೇಷ.
ಇದನ್ನೂ ಓದಿ : ನಟ ಸುದೀಪ್ ತಾಯಿ ಸರೋಜಾ ವಿಧಿವಶ..!
Post Views: 121