Download Our App

Follow us

Home » ಸಿನಿಮಾ » ಬಿಗ್​ಬಾಸ್​ ಮನೆಗೆ ನನ್ನ ಕಿಡ್ನಾಪ್​ ಮಾಡಿ ಕರ್ಕೊಂಡು ಹೋದ್ರು.. ಜಗದೀಶ್​​​ ಹಿಂಗ್ಯಾಕಂದ್ರು?

ಬಿಗ್​ಬಾಸ್​ ಮನೆಗೆ ನನ್ನ ಕಿಡ್ನಾಪ್​ ಮಾಡಿ ಕರ್ಕೊಂಡು ಹೋದ್ರು.. ಜಗದೀಶ್​​​ ಹಿಂಗ್ಯಾಕಂದ್ರು?

ಲಾಯರ್ ಜಗದೀಶ್ ಬಿಗ್ ಬಾಸ್ ಮನೆಯಲ್ಲಿ ಸಖತ್ ಆಟ ಆಡಿದ್ದಾರೆ. ಮೊದಲ ವಾರದಿಂದ ಹಿಡಿದು, ಇರೋ ಮೂರು ವಾರ ಸಾಕಷ್ಟು ಎಂಟರಟೈನ್ ಮಾಡಿದ್ದಾರೆ. ಆದರೆ ಮೂರು ವಾರ ಕಳೆಯುವುದರೊಳಗೆ ಅವರೇ ಮನೆಯಿಂದ ಎಲಿಮಿನೇಟ್ ಆಗಿಬಿಟ್ಟರು. ಬಿಗ್​ಬಾಸ್​ ಮನೆಯಲ್ಲಿ ಮಹಿಳೆಯರ ಬಗ್ಗೆ ಅವಾಚ್ಯ ಶಬ್ದ ಬಳಕೆ ಮಾಡಿದ ಹಿನ್ನಲೆ ಬಿಗ್​ಬಾಸ್​ ಲಾಯರ್ ಜಗದೀಶ್​​ರನ್ನು ದೊಡ್ಮನೆಯಿಂದ ಹೊರ ಕಳಿಸಿತ್ತು.

ಇದೀಗ ‘ಬಿಗ್ ಬಾಸ್‌’ ಮನೆಯಿಂದ ಆಚೆ ಬಂದಿರುವ ವಕೀಲ ಜಗದೀಶ್ ಅವರು ಬಿಟಿವಿಗೆ ನೀಡಿದ ಸಂದರ್ಶನದಲ್ಲಿ ಬಿಗ್​​ ಮನೆಗೆ ಹೋಗಲು ಕಾರಣ ಏನೆಂಬುದನ್ನು ತಿಳಿಸಿದ್ದಾರೆ. ನನಗೆ  ಫಿಲ್ಮ್​​ ಇಂಡಸ್ಟ್ರಿಯಲ್ಲಿ ತುಂಬಾ ಜನ ಫ್ರೆಂಡ್ಸ್​​​​ ಇದ್ದಾರೆ. ಒಂದಷ್ಟು ಜನರು ಫೋರ್ಸ್ ಮಾಡಿದ್ರು. ​ಅದರಲ್ಲೂ ನನ್ನ ತುಂಬಾ ಆತ್ಮೀಯ ಗೆಳೆಯ, ನೀನು ಬಿಗ್​​ ಬಾಸ್​​ ಮೆನೆಗೆ ಹೋಗು ಮಾರಾಯ ಅಂತ ಹೇಳಿದ್ರು. ಆದ್ರೆ ಯಾವುದನ್ನು ನಾನು ರೀವಿಲ್​​ ಮಾಡಿರ್ಲಿಲ್ಲ.

ಯಾಕಂದ್ರೆ ನನ್ಗೆ ಬಿಗ್​ ಬಾಸ್​​ಗೆ ಹೋಗ್ತೀನಿ ಅಂತ ಕನ್ಫರ್ಮ್ ಇರ್ಲಿಲ್ಲ. ಅದ್ರೆ ಅವರು ನನನ್ನು ಕರ್ಕೊಂಡು ಹೋಗಲು ರೆಡಿ ಇದ್ರು. ಲಾಸ್ಟ್​​ ಮೊಮೆಂಟ್​​ನಲ್ಲಿ ಬೆಳಿಗ್ಗೆ, ಬಿಗ್​​ ಬಾಸ್​​ ಮನೆಗೆ ಹೋದ್ರೆ ಒಂದು ತಿಂಗಳು ಬರಲ್ಲ ಅಂತ ಹೆಂಡ್ತಿ ಜೊತೆ ಹೊರಗೆ ಹೋಗಿದ್ದೆ.

ಎಲ್ಲೋ ಹೋಗಿ ನಿಂತು ಇಡ್ಲಿ ತಿಂದ್ಕೊಂಡು ನನ್​ ಹೇಳಿದೆ, ನನ್ಗೆ ಬಿಗ್​​ ಬಿಗ್​​ ಮನೆಗೆ ಹೋಗೋಕೆ ಆಗ್ತಿಲ್ಲ, ಅದಿಕ್ಕೆ ಮನೆಯಿಂದ ಬಂದಿದ್ದೀನಿ ಅಂತ ಹೇಳಿದೆ. ಆಗ ನನ್ನ ವೈಫ್​​ ಹೇಳಿದ್ರು, ಹಾಗೆಲ್ಲ ಮಾಡ್ಬೇಡ, ಇಡ್ಲಿ ತಿಂದು ಮನೆಗೆ ಹೋಗುವ ಹೇಳಿದ್ರು.

ನನ್ಗೆ ಗೊತ್ತಿತ್ತು ಮನೆಗೆ ಹೋದ್ರೆ ಕರ್ಕೊಂಡು ಹೋಗ್ತಾರೆ ಅಂತ. ಮನೆಗೆ ತಲುಪಿದಾಗ ಕಾರು ಕೂಡ ಬಂದು ನಿಂತಿತ್ತು. ಅವರೂ ಕೂಡ ಬನ್ನಿ ಸರ್​​ ಅಂತ ಕರ್ಕೊಂಡು ಹೋದ್ರು. ಆವತ್ತು ಅದ್ಕೊಂಡಿದ್ದೆ ಕೈ ಕೊಡ್ಬೇಕು ಅಂತ. ಆದ್ರೆ ಬಿಗ್​ ಬಾಸ್​​ ಅವರು ಬಿಟ್ಟಿಲ್ಲ, ಕಿಡ್ನಾಪ್​ ಮಾಡ್ಬಿಟ್ರು ನನ್ನನ್ನ ಎಂದು ವಕೀಲ ಜಗದೀಶ್ ಬಿಟಿವಿಯಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಇದನ್ನೂ ಓದಿ : ಬೆಂಗಳೂರಲ್ಲಿ ಮುಂದುವರಿದ ವರುಣಾರ್ಭಟ – ಮಳೆ ಅಬ್ಬರಕ್ಕೆ ಹಲವೆಡೆ ಧರೆಗುರುಳಿದ ಬೃಹತ್​ ಮರಗಳು..!

Leave a Comment

DG Ad

RELATED LATEST NEWS

Top Headlines

ಕಟೀಲು ದುರ್ಗಾಪರಮೇಶ್ವರಿ ದೇವಿಯ ಆಶೀರ್ವಾದ ಪಡೆದ ನಟ ಉಪೇಂದ್ರ..!

ಸ್ಯಾಂಡಲ್​ವುಡ್​ನ ರಿಯಲ್ ಸ್ಟಾರ್, ನಟ ಉಪೇಂದ್ರ ಅಭಿನಯದ ‘ಯುಐ’ ಸಿನಿಮಾ ರಿಲೀಸ್‌ಗೆ ಸಜ್ಜಾಗಿದೆ. ಈ ಹಿನ್ನೆಲೆ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ‘ಯುಐ’ ಟೀಮ್ ಜೊತೆ ನಟ ಉಪೇಂದ್ರ

Live Cricket

Add Your Heading Text Here