Download Our App

Follow us

Home » ರಾಜಕೀಯ » ಮೈಸೂರಿನಲ್ಲಿ ಮುಂದುವರೆದ ED ಶೋಧ – ಮೂರನೇ ದಿನವೂ ದಾಖಲೆಗಳನ್ನು ಜಾಲಾಡುತ್ತಿರುವ ಅಧಿಕಾರಿಗಳು..!

ಮೈಸೂರಿನಲ್ಲಿ ಮುಂದುವರೆದ ED ಶೋಧ – ಮೂರನೇ ದಿನವೂ ದಾಖಲೆಗಳನ್ನು ಜಾಲಾಡುತ್ತಿರುವ ಅಧಿಕಾರಿಗಳು..!

ಮೈಸೂರು : ಮುಡಾ ಹಗರಣ ಸಿಎಂ ಸಿದ್ದರಾಮಯ್ಯರನ್ನು ಬಿಟ್ಟು ಬಿಡದಂತೆ ಕಾಡುತ್ತಿದೆ. ಸಿಆರ್‌ಪಿಎಫ್‌ ಭದ್ರತೆಯೊಂದಿಗೆ ಶುಕ್ರವಾರ ಮುಡಾ ಕಚೇರಿ ಮೇಲೆ ದಾಳಿ ಮಾಡಿರುವ ED ಅಧಿಕಾರಿಗಳು ಮೂರನೇ ದಿನವೂ ಕೂಡ ದಾಖಲೆಗಳ ಶೋಧ ಕಾರ್ಯ ನಡೆಸುತ್ತಿದ್ದಾರೆ.

ನಿನ್ನೆ ರಾತ್ರಿ 10.30 ಗಂಟೆ ಕಳೆದರೂ ದಾಖಲೆಗಳ ಶೋಧ ಕಾರ್ಯ ಮುಗಿದಿಲ್ಲ, ಹಾಗಾಗಿ ಇಂದು ಬೆಳಗ್ಗಿನಿಂದಲೇ ಇಡಿ ಅಧಿಕಾರಿಗಳು ನಿರಂತರ ಶೋಧ ಕಾರ್ಯದಲ್ಲಿ ತಲ್ಲೀನರಾಗಿದ್ದಾರೆ. ಅಗತ್ಯ ದಾಖಲೆ ಸಿಗದೆ ಅಧಿಕಾರಿಗಳು ಪರದಾಡುತ್ತಿದ್ದಾರೆ. ಅಸಹಕಾರ, ಅಸಮಂಜಸ ಉತ್ತರದಿಂದ ಅಧಿಕಾರಿಗಳು ಬೇಸರಗೊಂಡಿದ್ದು, ಇಡಿ ಅಧಿಕಾರಿಗಳ ಪ್ರಶ್ನೆಗಳಿಗೆ ಅರ್ಧದಷ್ಟೂ ಉತ್ತರ ಸಿಗಲಿಲ್ಲ.
ಮುಡಾದ ಅಧಿಕಾರಿಗಳ ಮೇಲೂ ಇಡಿ ಅಧಿಕಾರಿಗಳು ಬೇಸರಗೊಂಡಿದ್ದಾರೆ.

ಮೊನ್ನೆಯಿಂದ ದಾಳಿ ವೇಳೆ ಪತ್ತೆಯಾದ ದಾಖಲೆಗಳನ್ನ ಅಧಿಕಾರಿಗಳು ಡಿಜಿಟಲ್ ರೂಪಕ್ಕೆ ಬದಲಿಸುತ್ತಿದ್ದಾರೆ. ED ಟೀಂ ಕಂಪ್ಯೂಟರ್ ಮೂಲಕ ಹಾರ್ಡ್​ಡಿಸ್ಕ್​ಗೆ ಹಾಕಿಕೊಂಡಿದೆ. ಇಡಿ ಅಧಿಕಾರಿಗಳಿಗೆ ಮುಡಾ ಅಧಿಕಾರಿಗಳು ದಾಖಲೆ ಒದಗಿಸುತ್ತಿದ್ದಾರೆ. ಮುಡಾ ಆಯುಕ್ತ ರಘುನಂದನ್, ಕಾರ್ಯದರ್ಶಿ ಪ್ರಸನ್ನ ಕುಮಾರ್ ಉಪಸ್ಥಿತಿಯಲ್ಲಿದ್ದು, ಮುಡಾದ ಮೀಟಿಂಗ್ ಹಾಲ್​​ನಲ್ಲಿ ಅಧಿಕಾರಿಗಳು ಜೆರಾಕ್ಸ್ ಪ್ರತಿ ತೆಗೆಯುತ್ತಿದ್ದಾರೆ.

ವೈಟ್ನರ್​ ಹಾಕಿ ಅಳಿಸಿದ್ದ ದಾಖಲೆಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ED ಅಧಿಕಾರಿಗಳು ಒಂದೊಂದೇ ದಾಖಲೆಗಳನ್ನು ಪರಿಶೀಲಿಸುತ್ತಿದ್ದು, ವೈಟ್ನರ್​ ಹಿಂದಿನ ಅಸಲಿಯತ್ತು ಕೆದಕುತ್ತಿದ್ದಾರೆ. ದಾಖಲೆಗಳಿಗೆ ವೈಟ್ನರ್​​​ ಹಾಕಿದ್ದು ಯಾರು..? ಯಾಕೆ..? ವೈಟ್ನರ್​ ಹಾಕಿದ್ದ ಜಾಗದಲ್ಲಿ ಏನು ಬರೆಯಲಾಗಿತ್ತು..? ಎಂದು EDಯಿಂದ ಮುಡಾ ಕಾರ್ಯದರ್ಶಿ ಪ್ರಸನ್ನ ಕುಮಾರ್ ವಿಚಾರಣೆ ನಡೆಸುತ್ತಿದ್ದಾರೆ.

ಮುಡಾಕ್ಕೆ ನೀಡಿದ ಹಲವು ದಾಖಲೆಗಳಲ್ಲಿ ಪಾರ್ವತಿ ಸಹಿ ಬದಲಾವಣೆಯಾಗಿದ್ದು, ಇಡಿ ಅಧಿಕಾರಿಗಳು ಪಾರ್ವತಿ ಅವರ ಸಹಿಗಳ ವ್ಯತ್ಯಾಸ ಕಂಡು‌ಹಿಡಿದಿದ್ದಾರೆ. ವೈಟ್ನರ್ ಹಾಕಿದ್ದ ಮೂಲ ದಾಖಲೆ ನೀಡಿ ಎಂದು ಅಧಿಕಾರಿಗಳು ಬಿಗಿಪಟ್ಟು ಹಿಡಿದಿದ್ದು, ಎರಡು ಹಾರ್ಡ್​ ಡಿಸ್ಕ್​​ಗಳಲ್ಲಿ ದಾಖಲೆಗಳ ಸಂಗ್ರಹವಾಗಿದ್ದು, ತಾಪಂನಿಂದಲೂ 100 ಪುಟಗಳ ದಾಖಲೆಗಳ ಸಂಗ್ರಹಿಸಲಾಗಿದೆ.

ಇದನ್ನೂ ಓದಿ : ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮನೆ ಮೇಲೆ ಡ್ರೋನ್ ದಾಳಿ..!

Leave a Comment

DG Ad

RELATED LATEST NEWS

Top Headlines

BWSSB ನಿರ್ಲಕ್ಷ್ಯಕ್ಕೆ ನಿವಾಸಿಗಳ ಪರದಾಟ – ಜಲಮಂಡಳಿ ಬೇಜವಾಬ್ದಾರಿತನಕ್ಕೆ ಸ್ಥಳೀಯರ ಆಕ್ರೋಶ..!

ಬೆಂಗಳೂರು : ಕಾವೇರಿ ಪೈಪ್ ಲೈನ್ ಒಡೆದು ಮನೆಯೊಳಗೆ ನುಗ್ಗಿದ ನೀರು ಘಟನೆ ಬನಶಂಕರಿ 5ನೇ ಅಂತ ವಸಂತಪುರದಲ್ಲಿ ನಡೆದಿದೆ. BWSSB ನಿರ್ಲಕ್ಷ್ಯದಿಂದ ನಿವಾಸಿಗಳು ಪರದಾಡುವಂತಹ ಸ್ಥಿತಿ

Live Cricket

Add Your Heading Text Here