Download Our App

Follow us

Home » ಸಿನಿಮಾ » ಜಗದೀಶ್ ಬಿಗ್ ಬಾಸ್ ಪಾಲಿಗೆ ಮುಗಿದು ಹೋದ ಅಧ್ಯಾಯ – ಕಿಚ್ಚ ಸುದೀಪ್ ಸ್ಪಷ್ಟನೆ..!

ಜಗದೀಶ್ ಬಿಗ್ ಬಾಸ್ ಪಾಲಿಗೆ ಮುಗಿದು ಹೋದ ಅಧ್ಯಾಯ – ಕಿಚ್ಚ ಸುದೀಪ್ ಸ್ಪಷ್ಟನೆ..!

ಬಿಗ್​​ ಬಾಸ್​​ ಕನ್ನಡ ಸೀಸನ್ 11 ಕಳೆದ ಸೀಸನ್​ಗಳಿಗಿಂತ ಹೆಚ್ಚು ಸುದ್ದಿಯಲ್ಲಿದೆ. ಈ ಬಾರಿಯ ಬಿಗ್ ಬಾಸ್ ಸುದ್ದಿಯಲ್ಲಿ ಇರುವುದರ ಜೊತೆಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಟೀಕೆಗಳನ್ನು ಕೂಡ ಪಡೆದುಕೊಳ್ಳುತ್ತಿದೆ. ಮಹಿಳಾ ಸ್ಪರ್ಧಿಗಳ ವಿರುದ್ಧ ಜಗದೀಶ್ ಅವಾಚ್ಯ ಶಬ್ದ ಬಳಕೆ ಮಾಡಿದ್ದಕ್ಕೆ ಅವರನ್ನು ಬಿಗ್​ ಬಾಸ್​ ಮನೆಯಿಂದ ಹೊರಗೆ ಕಳುಹಿಸಿದ್ದಾರೆ.

ನಿನ್ನೆಯ ಎಪಿಸೋಡ್​ನಲ್ಲಿ ಸುದೀಪ್ ಅವರು ಮನೆಯವರಿಗೆ ಒಂದಷ್ಟು ಪ್ರಶ್ನೆಗಳನ್ನು ಕೇಳುತ್ತಿದ್ದರು. ಈ ಪ್ರಶ್ನೆಗಳು ಮನೆಯವರು ಮಾಡಿದ ತಪ್ಪನ್ನು ಎತ್ತಿ ತೋರಿಸುತ್ತಾ ಇತ್ತು. ಸುದೀಪ್ ಅವರು ಜಗದೀಶ್​ನ ವಹಿಸಿಕೊಂಡು ಮಾತನಾಡುತ್ತಿದ್ದಾರೆ ಎಂಬ ರೀತಿಯಲ್ಲಿ ಮನೆ ಮಂದಿಗೆ ಕಾಣುತ್ತಾ ಇತ್ತು. ಹೀಗಾಗಿ, ಸುದೀಪ್ ಪ್ರಶ್ನೆ ಕೇಳಿದಾಗ ಅವರು ಜಗದೀಶ್ ಮಾಡಿದ್ದು ತಪ್ಪು ಎಂದು ಹೇಳುವ ರೀತಿಯಲ್ಲಿ ಮಾತನಾಡಲು ಆರಂಭಿಸುತ್ತಿದ್ದರು.

ಈ ವೇಳೆ ಸ್ಪಷ್ಟನೆ ಕೊಡುವಾಗ ಸುದೀಪ್ ಅವರು ಒಂದು ವಿಚಾರವನ್ನು ಸ್ಪಷ್ಟಪಡಿಸಿದ್ದಾರೆ. ‘ನಾನು ಜಗದೀಶ್​ ಅವರನ್ನು ಕ್ಲೀನ್ ಮಾಡಲು ಅಥವಾ ಅವರು ಮಾಡಿದ್ದು ತಪ್ಪಲ್ಲ ಎಂದಲ್ಲ ಹೇಳಲು ಇಲ್ಲಿ ನಿಂತಿಲ್ಲ. ಅವರ ಮಾತಿನ ಮೇಲೆ ನಿಗಾ ಇರಲಿಲ್ಲ. ಈ ಕಾರಣದಿಂದ ಅವರು ಎಲಿಮಿನೇಟ್ ಆದರು. ಇದನ್ನು ಬಿಗ್ ಬಾಸ್ ಸಹಿಸಲ್ಲ. ಜಗದೀಶ್ ಬಿಗ್ ಬಾಸ್ ಪಾಲಿಗೆ ಮುಗಿದು ಹೋದ ಅಧ್ಯಾಯ ಎಂದು ಹೇಳಿದ್ದಾರೆ. ಇದರಿಂದ ಜಗದೀಶ್ ಅವರು ಮರಳಿ ಬರೋದಿಲ್ಲ ಎಂಬುದು ಸ್ಪಷ್ಟವಾಗಿದೆ.

ಇದನ್ನೂ ಓದಿ : ಜಗದೀಶ್ ಮನೆಯಿಂದ ಹೋಗಿದ್ದು ನನಗೆ ಖುಷಿಯಾಗಿದೆ ಎಂದ ಹಂಸ – ಉಳಿದ ಸ್ಪರ್ಧೆಗಳು ಏನಂದ್ರು ಗೊತ್ತಾ?

Leave a Comment

DG Ad

RELATED LATEST NEWS

Top Headlines

BWSSB ನಿರ್ಲಕ್ಷ್ಯಕ್ಕೆ ನಿವಾಸಿಗಳ ಪರದಾಟ – ಜಲಮಂಡಳಿ ಬೇಜವಾಬ್ದಾರಿತನಕ್ಕೆ ಸ್ಥಳೀಯರ ಆಕ್ರೋಶ..!

ಬೆಂಗಳೂರು : ಕಾವೇರಿ ಪೈಪ್ ಲೈನ್ ಒಡೆದು ಮನೆಯೊಳಗೆ ನುಗ್ಗಿದ ನೀರು ಘಟನೆ ಬನಶಂಕರಿ 5ನೇ ಅಂತ ವಸಂತಪುರದಲ್ಲಿ ನಡೆದಿದೆ. BWSSB ನಿರ್ಲಕ್ಷ್ಯದಿಂದ ನಿವಾಸಿಗಳು ಪರದಾಡುವಂತಹ ಸ್ಥಿತಿ

Live Cricket

Add Your Heading Text Here