Download Our App

Follow us

Home » ಸಿನಿಮಾ » ದೊಡ್ಮನೆ ಸ್ಪರ್ಧಿಗಳಿಗೆ ಸರ್‌ಪ್ರೈಸ್ ಗಿಫ್ಟ್‌ ಕೊಟ್ಟ ಬಿಗ್​ ಬಾಸ್​.. ಏನದು?

ದೊಡ್ಮನೆ ಸ್ಪರ್ಧಿಗಳಿಗೆ ಸರ್‌ಪ್ರೈಸ್ ಗಿಫ್ಟ್‌ ಕೊಟ್ಟ ಬಿಗ್​ ಬಾಸ್​.. ಏನದು?

ಬಿಗ್ ಬಾಸ್ ಸೀಸನ್ 11 ದಿನ ಕಳೆದಂತೆ ಹೊಸ, ಹೊಸ ರೂಪ ಪಡೆದುಕೊಳ್ತಿದೆ. ಹೊಸ ಅಧ್ಯಾಯ ಅಂತಲೇ ಶುರುವಾಗಿರುವ ಈ ಸೀಸನ್‌ನಲ್ಲಿ ಎಲ್ಲವೂ ಹೊಸತನದಿಂದ ಕೂಡಿದೆ. ನಿನ್ನೆ ಎರಡನೇ ವಾರದ ಕತೆಯನ್ನು ಫುಲ್ ಜೋಶ್‌ನಿಂದಲೇ ಆರಂಭಿಸಿರುವ ಬಿಗ್ ಬಾಸ್ ತಂಡ, ಈ ಸೀಸನ್‌ನ ಸ್ಪರ್ಧಿಗಳಿಗೆ ಬಿಗ್ ಸರ್‌ಪ್ರೈಸ್‌ ನೀಡಿದೆ.

ಹೌದು.. ಬಿಗ್ ಬಾಸ್ ಮನೆಯಲ್ಲಿ ಇದುವರೆಗೂ ಸ್ವರ್ಗ, ನರಕ ಅನ್ನೋ ಬೇಲಿ ಇತ್ತು. 2 ವಾರದ ಬಳಿಕ ನರಕದ ಬೇಲಿ ತೆಗೆಯಲಾಗಿದೆ. ಅದರ ಬದಲಾಗಿ ಗಾರ್ಡನ್ ಏರಿಯಾದಲ್ಲಿ ಈಗ ಹೊಸದೊಂದು ಗಿಫ್ಟ್ ಬಿಗ್ ಬಾಸ್ ಸ್ಪರ್ಧಿಗಳಿಗೆ ಸಿಕ್ಕಿದೆ.

ಭಾರತದ ಬಿಗ್ ಬಾಸ್ ಇತಿಹಾಸದಲ್ಲೇ ಮೊದಲ ಬಾರಿಗೆ ಬಿಗ್ ಬಾಸ್ ಮನೆಯ ಸದಸ್ಯರಿಗೆ ಲಕ್ಷುರಿ ಗಿಫ್ಟ್ ನೀಡಲಾಗಿದೆ. ಗಾರ್ಡನ್ ಏರಿಯಾದಲ್ಲಿ ಎಲಿವೇಟರ್ ಅನ್ನು ಹಾಕಲಾಗಿದೆ. ಬಿಗ್ ಬಾಸ್ ಮನೆಯಲ್ಲಿ ಈ ರೀತಿಯ ಎಲಿವೇಟರ್‌ ಹಾಕಿರೋದು ಬಿಗ್ ಬಾಸ್ ಇತಿಹಾಸದಲ್ಲಿ ಇದೇ ಮೊದಲು. ಈ ಎಲಿವೇಟರ್‌ನಲ್ಲಿ ಮನೆಯ ಕ್ಯಾಪ್ಟನ್ ಶಿಶಿರ್ ಅವರು ಮೊದಲ ಬಾರಿಗೆ ಮೇಲಕ್ಕೆ ಹೋಗಿ ಬಂದಿದ್ದಾರೆ.

ಬಿಗ್ ಬಾಸ್ ಗಾರ್ಡನ್ ಏರಿಯಾದಲ್ಲಿ ಇದುವರೆಗೂ ಮೆಟ್ಟಿಲು ಹತ್ತಿ ಹೋಗಿ ಸ್ಪರ್ಧಿಗಳು ಹರಟೆ ಹೊಡೆಯುತ್ತಿದ್ದರು. ಇದೀಗ ಎಲಿವೇಟರ್‌ನಲ್ಲಿ ಹೋಗುವ ಅವಕಾಶವನ್ನು ಸೀಸನ್ 11ರ ಸ್ಪರ್ಧಿಗಳಿಗೆ ನೀಡಲಾಗಿರೋದು ವಿಶೇಷವಾಗಿದೆ.

ಇದನ್ನೂ ಓದಿ : ಸಂಜು-ಸೂರ್ಯ ಬ್ಯಾಟಿಂಗ್‌ ಆರ್ಭಟ.. ಬಾಂಗ್ಲಾ ವಿರುದ್ಧ ಭಾರತಕ್ಕೆ ಭರ್ಜರಿ ಜಯ, ಸರಣಿ ಕ್ಲೀನ್‌ ಸ್ವೀಪ್..!

Leave a Comment

DG Ad

RELATED LATEST NEWS

Top Headlines

ಮಂಗಳೂರಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನದ ಸುವರ್ಣ ಸಂಭ್ರಮ.. ಸಾಧು-ಸಂತರು, ರಾಜಕೀಯ ನಾಯಕರು ಭಾಗಿ..!

ಮಂಗಳೂರು : ಇಂದು ಮಂಗಳೂರು ಗಾಂಧಿನಗರದ ಕಾವೂರಿನ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠ ಮಂಗಳೂರು ಶಾಖೆಯ ಸುವರ್ಣ ಮಹೋತ್ಸವ, ಬಿಜಿಎಸ್ ಪಿಯು ಕಾಲೇಜು ಕಟ್ಟಡ ಉದ್ಘಾಟನೆ, ಹಾಗೂ

Live Cricket

Add Your Heading Text Here