ಮೈಸೂರು : ಕನ್ನಡ ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕ, ನಟ ರವಿ ಬಸ್ರೂರು ಅವರು ಮೈಸೂರಿನ ಶ್ರೀ ಅರ್ಜುನ ಅವಧೂತ ಗುರೂಜಿಯನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದಾರೆ.
ರವಿ ಬಸ್ರೂರು ಯುವ ದಸರಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ, ಬಳಿಕ ಮೈಸೂರಿನ ಸೋನಾರ್ ಬೀದಿಯಲ್ಲಿರುವ ಅರ್ಜುನ ಅವಧೂತ ಗುರೂಜಿಯ ಗುರು ನಿವಾಸದಲ್ಲಿ ಭೇಟಿಯಾಗಿದ್ದಾರೆ.
ಸುಮಾರು ಅರ್ಧ ಗಂಟೆ ತಮ್ಮ ಸಂಗೀತ ಕ್ಷೇತ್ರದ ಚಟುವಟಿಕೆಗಳನ್ನು ಗುರೂಜಿಗೆ ರವಿ ಬಸ್ರೂರು ಅವರು ವಿವರಿಸಿದ್ದಾರೆ. ಈ ವೇಳೆ ಬಸ್ರೂರು ಅವರಿಗೆ ಸಿಹಿ ಕೊಟ್ಟು ಮುಂದೆ ಜಗತ್ತೇ ನಿಮ್ಮ ಹಾಡನ್ನು ಕೇಳುವಂತಾಗಲಿ ಎಂದು ಅರ್ಜುನ ಅವಧೂತ ಗುರೂಜಿಯವರು ಆಶೀರ್ವಾದಿಸಿದ್ದಾರೆ.
ಇದನ್ನೂ ಓದಿ : ನಟ ದರ್ಶನ್ ಬೇಲ್ ಭವಿಷ್ಯ ಇಂದು ನಿರ್ಧಾರ – ದಾಸನಿಗೆ ಸಿಗುತ್ತಾ ಜೈಲಿನಿಂದ ಮುಕ್ತಿ?
Post Views: 77