ಬೆಂಗಳೂರು : ವಾಪಸ್ ಕೊಟ್ಟ ಸೈಟ್ ರದ್ದು ಮಾಡಿದ್ದೇ ತಪ್ಪು, ಸೈಟ್ ಮಾಲೀಕತ್ವದ ರದ್ದು ಮಾಡೋ ಅಧಿಕಾರ ಕೊಟ್ಟಿದ್ಯಾರು..? ಮುಡಾ ಕಮಿಷನರ್ ಕ್ರಮ ಕೋರ್ಟ್ ಆದೇಶ ಉಲ್ಲಂಘನೆ, ಸಾಕ್ಷಿ ಮಾಡುವ ಉದ್ದೇಶದಿಂದಲೇ ಈ ರೀತಿ ಮಾಡಿದ್ದಾರೆ ಎಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಈ ಬಗ್ಗೆ ಬೆಂಗಳೂರಿನಲ್ಲಿ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಮಾತನಾಡಿ, ಖುದ್ದು ಸಿಎಂ ಸಿದ್ದರಾಮಯ್ಯ ಅವರೇ 62 ಕೊಟಿ ಮಾತ್ನಾಡಿದ್ದಾರೆ. ED ಅಧಿಕಾರಿಗಳು ತನಿಖೆ ಮಾಡಬಾರದೇ?ಪಾಪ ಸಿದ್ದರಾಮಯ್ಯನವ್ರಿಗೆ ಪತ್ನಿ ಪತ್ರದ ಬಗ್ಗೆ ಗೊತ್ತಿರಲಿಲ್ಲವಂತೆ, ಸಿಎಂ ಪತ್ನಿ ಬರೆದ ಪತ್ರ ಮುಡಾಗೆ ಹೋಗಿದ್ದೇಗೆ? ಎಂದು ಪ್ರಶ್ನಿಸಿದ್ದಾರೆ.
ಮುಡಾಗೆ ಸಿದ್ದರಾಮಯ್ಯ ಅವರ ಮಗನೇ ಕೊಟ್ಟು ಬರಲಿಲ್ವಾ? ಸೈನ್ ಮಾಡೋಕೆ ಸಿಎಂ ಪತ್ನಿ ಮುಡಾ ಕಚೇರಿಗೆ ಬಂದಿದ್ರಾ? ಅಧಿಕಾರಿಗಳು ಎಲ್ಲಿಗೆ ಬಂದು ಸಹಿ ಮಾಡಿಕೊಂಡಿದ್ಯಾರು? ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಇದನ್ನೂ ಓದಿ : ಬಿಗ್ ಬಾಸ್ ಮನೆಮಂದಿಗೆ ತಟ್ಟಿದ ನಾಮಿನೇಷನ್ ಬಿಸಿ.. ವಾಗ್ವಾದಕ್ಕಿಳಿದ ಜಗದೀಶ್-ಧನ್ರಾಜ್..!