Download Our App

Follow us

Home » ಸಿನಿಮಾ » ಬಿಗ್​​ ಬಾಸ್​​ ಮನೆಮಂದಿಗೆ ತಟ್ಟಿದ ನಾಮಿನೇಷನ್​ ಬಿಸಿ.. ವಾಗ್ವಾದಕ್ಕಿಳಿದ ಜಗದೀಶ್​​-ಧನ್​ರಾಜ್..!

ಬಿಗ್​​ ಬಾಸ್​​ ಮನೆಮಂದಿಗೆ ತಟ್ಟಿದ ನಾಮಿನೇಷನ್​ ಬಿಸಿ.. ವಾಗ್ವಾದಕ್ಕಿಳಿದ ಜಗದೀಶ್​​-ಧನ್​ರಾಜ್..!

ಕಿರುತೆರೆಯ ಅತಿದೊಡ್ಡ ರಿಯಾಲಿಟಿ ಶೋ ಬಿಗ್‌ಬಾಸ್‌ ಕನ್ನಡ ಸೀಸನ್ 11 ಅದ್ಧೂರಿಯಾಗಿ ಆರಂಭಗೊಂಡಿದೆ. ಈ ಬಾರಿ ಬಿಗ್‌ಬಾಸ್‌ನಲ್ಲಿ ಸ್ವರ್ಗ-ನರಕ ಅಂತ ಎರಡು ಮನೆಗಳನ್ನು ಮಾಡಲಾಗಿದೆ. ಈಗಾಗಲೇ ಸ್ಪರ್ಧಿಗಳು ಒಬ್ಬರೊನ್ನೊಬ್ಬರು ಟಾರ್ಗೆಟ್​ ಮಾಡಲು ಶುರು ಮಾಡಿದ್ದಾರೆ. ಇದರ ನಡುವೆ ಜಗಳಗಳು ನಡೆಯುತ್ತಿವೆ.

ಚೈತ್ರಾ ಕುಂದಾಪುರ, ಗೌತಮಿ, ಭವ್ಯಾ, ಹಂಸ, ಶಿಶಿರ್, ಯಮುನಾ, ಜಗದೀಶ್, ಮಾನಸ, ಮೋಕ್ಷಿತಾ ಅವರು ಮೊದಲ ವಾರ ನಾಮಿನೇಟ್​ ಆಗಿದ್ದಾರೆ. ಆದರೆ ನಾಮಿನೇಟ್​ ಆದ ಸ್ಪರ್ಧಿಗಳಿಗೆ ಬಿಗ್​ ಬಾಸ್​​ ಟಾಸ್ಕ್​ವೊಂದನ್ನು ಕೊಟ್ಟಿದ್ದು, ಪಾರಾಗಲು ಅವಕಾಶವೊಂದನ್ನು ನೀಡಿದ್ದಾರೆ.

ಈ ಟಾಸ್ಕ್​​ಗೆ ಧನ್​ರಾಜ್ ಆಚಾರ್​ ಟಾಸ್ಕ್​ ರೆಫ್ರಿಯಾಗಿದ್ದಾರೆ. ಆದರೆ ಜಗದೀಶ್​ ಮತ್ತು ಯಮುನಾ ಟಾಸ್ಕ್​ ವೇಳೆ ಡಿಕ್ಕಿ ಹೊಡೆದಿದ್ದು, ಯಮುನಾ ನೆಲಕ್ಕೆ ಬಿದ್ದಿದ್ದಾರೆ. ಇಲ್ಲಿಂದ ಟಾಸ್ಕ್​​ ರೆಫ್ರಿ ಮತ್ತು ಜಗದೀಶ್​ ನಡುವೆ ಜಗಳ ಶುರುವಾಗಿದೆ.

ಧನ್​ರಾಜ್​ ಮತ್ತು ಜಗದೀಶ್​ ಮಾತು ಮಾತು ಬೆಳೆಸಿದ್ದಾರೆ. ಈ ವೇಳೆ ಜಗದೀಶ್​​ ಅರ್ಹವಾದ ರೆಫ್ರಿ ಇವನಲ್ಲ ಎಂದು ಧನ್​ರಾಜ್​ಗೆ ಹೇಳಿದ್ದಾರೆ. ಇದಕ್ಕೆ ಸಿಟ್ಟಿಗೆದ್ದ ಧನ್​ರಾಜ್​ ಸುಮ್ಮೆ ಕೂತ್ಕೊತೀಯಾ.. ನೀನು ಯಾರು ಹೇಳೋಕೆ ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ಇಂದಿನ ಎಪಿಸೋಡ್​ ಮಜವಾಗಿದ್ದು, ನಾಮಿನೇಶನ್​ನಿಂದ ಯಾರು ಪಾರಗುತ್ತಾರೆ ಎಂದು ಕಾದುನೋಡಬೇಕಾಗಿದೆ.

ದನ್ನೂ ಓದಿ : ಕಿತ್ತೂರು ಉತ್ಸವ ಜ್ಯೋತಿಗೆ ಚಾಲನೆ ನೀಡುವಾಗ ಅವಘಡ – ಸಿಎಂ ಸಿದ್ದು ಕೈಗೆ ತಾಗಿದ ಬೆಂಕಿ..!

Leave a Comment

DG Ad

RELATED LATEST NEWS

Top Headlines

ಬಿಗ್​ಬಾಸ್ ನಾವು ಇನ್ಮೇಲೆ ಯಾವ ಗೇಮೂ ಆಡಲ್ಲ – ಕ್ಯಾಪ್ಟನ್ ವಿರುದ್ಧ ತಿರುಗಿ ಬಿದ್ದ ನರಕವಾಸಿಗಳು.. ಅಂಥದ್ದೇನಾಯ್ತು?

ಬಿಗ್​ಬಾಸ್ ಕನ್ನಡ ಸೀಸನ್ 11 ಸಖತ್ ಇಂಟ್ರೆಸ್ಟಿಂಗ್ ಆಗಿ ಮೂಡಿ ಬರುತ್ತಿದೆ. ಈ ಬಾರಿ 17 ಮಂದಿ ಕಂಟೆಸ್ಟೆಂಟ್ಸ್ ಮನೆಯೊಳಗೆ ಎಂಟ್ರಿ ಕೊಟ್ಟಿದ್ದು, ಮೊದಲ ವಾರದಲ್ಲಿ ಯಮುನಾ

Live Cricket

Add Your Heading Text Here