ಬೆಂಗಳೂರು : ಜನವರಿ 22ರಂದು ಅಯೋಧ್ಯೆ ರಾಮಮಂದಿರ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಮಂತ್ರಿ ಹೆಚ್ ಡಿ.ದೇವೇಗೌಡ ಅವರು ಪಾಲ್ಗೊಳ್ಳಲಿದ್ದಾರೆ. ನಾಳೆ ಕುಟುಂಬ ಸಮೇತರಾಗಿ ಮಾಜಿ ಪ್ರಧಾನಿ ದೇವೇಗೌಡ ಅವರು ಅಯೋಧ್ಯೆಗೆ ತೆರಳಲಿದ್ದಾರೆ.
ನಾಳೆ ಸಂಜೆ 2 ಗಂಟೆಗೆ ಹೆಚ್ಎಎಲ್ನಿಂದ ವಿಶೇಷ ವಿಮಾನದಿಂದ ಪ್ರಯಾಣ ಮಾಡಿ 4.30ಕ್ಕೆ ಮಹರ್ಷಿ ವಾಲ್ಮೀಕಿ ಏರ್ಪೋರ್ಟ್ ಹೆಚ್ಡಿಡಿ ಹಾಗೂ ಹೆಚ್ಡಿಕೆ ಕುಟುಂಬ ತಲುಪಲಿದೆ. ಹಾಗೂ ಕುಟುಂಬ ಸಮೇತವಾಗಿ ರಾಮಮಂದಿರ ಉದ್ಘಾಟನೆಯಲ್ಲಿ ಭಾಗಿಯಾಗಲಿದ್ದಾರೆ.
ದೇವೇಗೌಡ್ರ ಪತ್ನಿ ಚೆನ್ನಮ್ಮ, ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ, ನಿಖಿಲ್ ಪತ್ನಿ ರೇವತಿ, ಕುಪೇಂದ್ರ ರೆಡ್ಡಿ ಜೊತೆಗೆ ತರೆಳಲಿದ್ದಾರೆ. ಸೋಮವಾರ 11.30ಕ್ಕೆ ರಾಮಮಂದಿರ ಉದ್ಘಾಟನೆಯಲ್ಲಿ ಹೆಚ್ಡಿಡಿ ಭಾಗಿಯಾಗಿ ಸೋಮವಾರ ಸಂಜೆ 4.30ಕ್ಕೆ ಅಯೋಧ್ಯೆಯಿಂದ 22ರ ಸಂಜೆ 7 ಗಂಟೆಗೆ ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ
ಇದನ್ನೂ ಓದಿ : ರಾಜ್ಯದ ಶ್ರೀರಾಮ ಭಕ್ತರಿಗೆ ರಾಜ್ಯ ಬಿಜೆಪಿಯಿಂದ ಬಂಪರ್..!
Post Views: 553