ಬೆಂಗಳೂರು : ಜೆಟ್ ಲಾಗ್ ಕೇಸ್ ಬೆನ್ನಲ್ಲೇ ಮತ್ತೊಂದು ಕೇಸ್ ನಲ್ಲಿ ನಟ ದರ್ಶನ್ ಗೆ ರಿಲೀಫ್ ಸಿಕ್ಕಿದೆ. ಮನೆಯ ನಾಯಿ ಕಚ್ಚಿದ ಕೇಸ್ ನಲ್ಲಿ ದರ್ಶನ್ ಕೊನೆಗೂ ಬಚಾವ್ ಆಗಿದ್ದಾರೆ. ಪೊಲೀಸರು ದರ್ಶನ್ ಹೆಸರು ಕೈಬಿಟ್ಟು ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.
ಪೊಲೀಸರು ಮೂರು ತಿಂಗಳ ಅವಧಿಯಲ್ಲೇ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದು, ಆರ್ ಆರ್ ನಗರ ಪೊಲೀಸರು ಸಿಟಿ ಸಿವಿಲ್ ಕೋರ್ಟ್ ಗೆ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಪೊಲೀಸರು 150 ಕ್ಕೂ ಹೆಚ್ಚು ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.
ಐದಕ್ಕೂ ಹೆಚ್ಚು ಮಂದಿಯನ್ನ ಸಾಕ್ಷಿಗಳಾಗಿ ಪರಿಗಣನೆ ಮಾಡಿ, ನಟ ದರ್ಶನ್ ರನ್ನ ಸಾಕ್ಷಿಯಾಗಿ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಚಾರ್ಜ್ ಶೀಟ್ ನಲ್ಲಿ ನಟ ದರ್ಶನ್ ಹೆಸರು ಕೈಬಿಟ್ಟಿದ್ದು, ಘಟನೆಗೂ ದರ್ಶನ್ ಗೂ ಯಾವುದೇ ಸಂಬಂಧ ಇಲ್ಲವೆಂದು ಉಲ್ಲೇಖ ಮಾಡಲಾಗಿದೆ.
ಘಟನೆ ಹಿನ್ನಲೆ : ಅಕ್ಟೋಬರ್ 28 ರಂದು ದರ್ಶನ್ ಮನೆಯ ಮುಂದೆ ನಡೆದಿದ್ದ ಈ ಘಟನೆ ನಡೆದಿದ್ದು, ದರ್ಶನ್ ಮನೆಯ ನಾಯಿ ಅಮಿತಾ ಜಿಂದಾಲ್ ಎಂಬ ಮಹಿಳೆಗೆ ಕಚ್ಚಿತ್ತು. ಆಗ ಅಮಿತಾ ಜಿಂದಾಲ್ ಕೊಟ್ಟ ದೂರಿನ ಮೇಲೆ ಎಫ್ ಐ ಆರ್ ದಾಖಲಾಗಿತ್ತು. ಕೇರ್ ಟೇಕರ್ ಹೇಮಂತ್ ಹಾಗೂ ನಟ ದರ್ಶನ್ ಆರೋಪಿಗಳಾಗಿ ಮಾಡಿ ಎಫ್ ಐ ಆರ್ ದಾಖಲಾಗಿತ್ತು. ಪೊಲೀಸರ ವಿಚಾರಣೆ ಮಾಡಿದಾಗ ಘಟನೆ ವೇಳೆ ದರ್ಶನ್ ಗುಜರಾತ್ ನಲ್ಲಿರೋದಾಗಿ ಹೇಳಿಕೆ ದಾಖಲಾಗಿತ್ತು. ದರ್ಶನ್ ಸಿನಿಮಾ ಶೂಟಿಂಗ್ ನಿಮಿತ್ತ ಗುಜರಾತ್ ನಲ್ಲಿ ಇರುವ ಬಗ್ಗೆ ಸಾಕ್ಷ್ಯ ಕೂಡ ನೀಡಿದ್ದರು. ಜೊತೆಗೆ ಕೇರ್ ಟೇಕರ್ ಹೇಮಂತ್ ಕೂಡ ದರ್ಶನ್ ಗೂ ಕೇಸ್ ಗೂ ಯಾವುದೇ ಸಂಬಂಧ ಇಲ್ಲ ಎಂದು ಹೇಳಿಕೆ ನೀಡಿದ್ದರು. ಸದ್ಯ ಪೊಲೀಸ್ರು ಕೇರ್ ಟೇಕರ್ ಹೇಮಂತ್ ವಿರುದ್ದ ಚಾರ್ಜ್ ಶೀಟ್ ಮಾಡಿದ್ದಾರೆ.
ಇದನ್ನೂ ಓದಿ : ರಾಜ್ಯದ ಶ್ರೀರಾಮ ಭಕ್ತರಿಗೆ ರಾಜ್ಯ ಬಿಜೆಪಿಯಿಂದ ಬಂಪರ್..!