Download Our App

Follow us

Home » ಅಪರಾಧ » ಮುನಿರತ್ನಗೆ ಮತ್ತೊಂದು ಸಂಕಷ್ಟ – ವೋಟರ್ ಐಡಿ ಕೇಸ್ ಮರು ತನಿಖೆಗೆ MLC ಮುನಿರಾಜ್​ಗೌಡ ಒತ್ತಾಯ..!

ಮುನಿರತ್ನಗೆ ಮತ್ತೊಂದು ಸಂಕಷ್ಟ – ವೋಟರ್ ಐಡಿ ಕೇಸ್ ಮರು ತನಿಖೆಗೆ MLC ಮುನಿರಾಜ್​ಗೌಡ ಒತ್ತಾಯ..!

ಬೆಂಗಳೂರು : ಜಾತಿ ನಿಂದನೆ, ಜೀವ ಬೆದರಿಕೆ ಕೇಸ್‌ನಲ್ಲಿ ಜಾಮೀನು ಪಡೆದು, ಅತ್ಯಾಚಾರ ಕೇಸ್‌ನಲ್ಲಿ ಮತ್ತೆ ಜೈಲು ಸೇರಿರುವ ಮಾಜಿ ಶಾಸಕ ಮುನಿರತ್ನಗೆ ಮತ್ತೊಂದು ಸಂಕಷ್ಟ ಎದುರಾಗಲಿದೆ. 2018ರ ವೋಟರ್ ಐಡಿ ಕೇಸ್ ಮರು ತನಿಖೆ ಕೋರಿ ಬಿಜೆಪಿ ಮಾಜಿ MLC ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾರೆ.

ಬಿಜೆಪಿ MLA ವಿರುದ್ಧ ಬಿಜೆಪಿ MLC ಮುನಿರಾಜ್​ಗೌಡ 8ನೇ ACMM ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದು, 6 ವರ್ಷ ಕಳೆದ್ರೂ ಮುನಿರತ್ನಗೆ ವೋಟರ್ ಐಡಿ ಕೇಸ್​​ನ ಕಂಟಕ ತಪ್ಪಲಿಲ್ಲ. ತುಳಸಿ ಮುನಿರಾಜ್​ಗೌಡ ಮುನಿರತ್ನ ವಿರುದ್ದ ಮತ್ತೆ ತೊಡೆ ತಟ್ಟಿದ್ದಾರೆ. ಹೈಕೋರ್ಟ್ ಸೂಚನೆ ಇದ್ರೂ ಪೊಲೀಸರು ಪ್ರಾಮಾಣಿಕ ತನಿಖೆ ಮಾಡಿಲ್ಲ, ತರಾತರಿಯಲ್ಲಿ ಪೊಲೀಸರು ಡಮ್ಮಿ ಚಾರ್ಜ್​​ಶೀಟ್​ ಸಲ್ಲಿಸಿದ್ದರು ಎಂದು ಆರೋಪಿಸಿದ್ದಾರೆ.

ಜಾಲಹಳ್ಳಿ‌ ಪೊಲೀಸರು ಸರಿಯಾದ ಸಾಕ್ಷ್ಯಾಧಾರ ಇಲ್ಲದೇ ಚಾರ್ಜ್​​ಶೀಟ್​ ಸಲ್ಲಿಸಿದ್ದಾರೆ, ಹಾಗಾಗಿ ಕೇಸ್​ ಮರುತನಿಖೆ ನಡೆಸಬೇಕು, ಜನಪ್ರತಿನಿಧಿಗಳ ವಿಶೇಷ ಕೋರ್ಟ್​ಗೆ ವರ್ಗಾವಣೆ ಮಾಡುವಂತೆ ಮುನಿರಾಜ್​ಗೌಡ ಮನವಿ ಮಾಡಿದ್ದಾರೆ.

ಮುನಿರಾಜ್​ಗೌಡ 2018ರಲ್ಲಿ ಮುನಿರತ್ನ ವಿರುದ್ದ ಬಿಜೆಪಿಯಿಂದ ಸ್ಪರ್ಧಿಸಿದ್ದರು. ಮುನಿರತ್ನ ವಿರುದ್ದ 2018ರಲ್ಲಿ ಜಾಲಹಳ್ಳಿ ಠಾಣೆಯಲ್ಲಿ ವೋಟರ್​ ಐಡಿ ಕೇಸ್ ದಾಖಲಾಗಿತ್ತು. ಅಪಾರ್ಟ್​ಮೆಂಟ್​ವೊಂದರಲ್ಲಿ ಸಾವಿರಾರು ವೋಟರ್ ಐಡಿ ಪತ್ತೆಯಾಗಿತ್ತು. ಚುನಾವಣಾ ಆಯೋಗದ ಅಧಿಕಾರಿಗಳು‌ ಪ್ರಕರಣ ದಾಖಲು ಮಾಡಿದ್ರು. ಇದೀಗ ಈ ಕೇಸ್​​ನ್ನು 8ನೇ ACMM ಕೋರ್ಟ್​ನಿಂದ ಜನಪ್ರತಿನಿಧಿಗಳ ಕೋರ್ಟ್​ಗೆ  ಶಿಫ್ಟ್​ಗೆ ಮನವಿ ಸಲ್ಲಿಸಿದ್ದಾರೆ.

2020ರಲ್ಲಿ IPS ಅಧಿಕಾರಿ ನೇತೃತ್ವದಲ್ಲಿ ತನಿಖೆ ನಡೆಸಲು ಹೈಕೋರ್ಟ್ ಸೂಚಿಸಿತ್ತು, 2020ರಿಂದ ಪೊಲೀಸರು ಯಾವುದೇ ತನಿಖೆ ಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ. ಮುನಿರಾಜ್​ಗೌಡ ಹೈಕೋರ್ಟ್ ಆದೇಶ ಪ್ರತಿ ನೀಡಿ ಮರು ತನಿಖೆಗೆ ಒತ್ತಾಯಿಸಿದ್ದು, 6 ವರ್ಷದ ಹಿಂದಿನ ಕೇಸ್​ಗೆ ಮರು ಜೀವ ಬಂದ್ರೆ ಮುನಿರತ್ನಗೆ ಮತ್ತೊಂದು ಸಂಕಷ್ಟ ಎದುರಾಗಲಿದೆ.

ಇದನ್ನೂ ಓದಿ : ಸೆ. 27ಕ್ಕೆ ‘ಸಂಜು’ ಚಿತ್ರ ರಿಲೀಸ್ – ಇದು ಮಂಜು ಕವಿದ ವಾತಾವರಣ.. ‘ಸಂಜು’ ಬದುಕಿನ ಅನಾವರಣ..!

Leave a Comment

DG Ad

RELATED LATEST NEWS

Top Headlines

ತಾಯಿಗೆ ಮರು ಪ್ರೀತಿ, ಹೊಸ ಜೀವನ.. ಹೆತ್ತಮ್ಮನಿಗೇ 2ನೇ ಮದುವೆ ಮಾಡಿಸಿದ ಪುತ್ರ..!

ಪತಿಯನ್ನು ಕಳೆದುಕೊಂಡು ಒಂಟಿಯಾಗಿದ್ದ ತಾಯಿಗೆ ಮಗನೇ ಮುಂದೆ ನಿಂತು ಮದುವೆ ಮಾಡಿಸಿದ ಅಚ್ಚರಿಯ ಘಟನೆಯೊಂದು ನಡೆದಿದೆ. 18 ವರ್ಷ ತಾಯಿ ಜೊತೆಗಿದ್ದ ಮಗ ಅಬ್ದುಲ್ ಅಹಾದ್ ಬಹಳ

Live Cricket

Add Your Heading Text Here