ಬೆಂಗಳೂರು : ಜಾತಿ ನಿಂದನೆ, ಜೀವ ಬೆದರಿಕೆ ಕೇಸ್‌ನಲ್ಲಿ ಜಾಮೀನು ಪಡೆದು, ಅತ್ಯಾಚಾರ ಕೇಸ್‌ನಲ್ಲಿ ಮತ್ತೆ ಜೈಲು ಸೇರಿರುವ ಮಾಜಿ ಶಾಸಕ ಮುನಿರತ್ನಗೆ ಮತ್ತೊಂದು ಸಂಕಷ್ಟ ಎದುರಾಗಲಿದೆ. 2018ರ ವೋಟರ್ ಐಡಿ ಕೇಸ್ ಮರು ತನಿಖೆ ಕೋರಿ ಬಿಜೆಪಿ ಮಾಜಿ MLC ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.
ಬಿಜೆಪಿ MLA ವಿರುದ್ಧ ಬಿಜೆಪಿ MLC ಮುನಿರಾಜ್ಗೌಡ 8ನೇ ACMM ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದು, 6 ವರ್ಷ ಕಳೆದ್ರೂ ಮುನಿರತ್ನಗೆ ವೋಟರ್ ಐಡಿ ಕೇಸ್ನ ಕಂಟಕ ತಪ್ಪಲಿಲ್ಲ. ತುಳಸಿ ಮುನಿರಾಜ್ಗೌಡ ಮುನಿರತ್ನ ವಿರುದ್ದ ಮತ್ತೆ ತೊಡೆ ತಟ್ಟಿದ್ದಾರೆ. ಹೈಕೋರ್ಟ್ ಸೂಚನೆ ಇದ್ರೂ ಪೊಲೀಸರು ಪ್ರಾಮಾಣಿಕ ತನಿಖೆ ಮಾಡಿಲ್ಲ, ತರಾತರಿಯಲ್ಲಿ ಪೊಲೀಸರು ಡಮ್ಮಿ ಚಾರ್ಜ್ಶೀಟ್ ಸಲ್ಲಿಸಿದ್ದರು ಎಂದು ಆರೋಪಿಸಿದ್ದಾರೆ.
ಜಾಲಹಳ್ಳಿ ಪೊಲೀಸರು ಸರಿಯಾದ ಸಾಕ್ಷ್ಯಾಧಾರ ಇಲ್ಲದೇ ಚಾರ್ಜ್ಶೀಟ್ ಸಲ್ಲಿಸಿದ್ದಾರೆ, ಹಾಗಾಗಿ ಕೇಸ್ ಮರುತನಿಖೆ ನಡೆಸಬೇಕು, ಜನಪ್ರತಿನಿಧಿಗಳ ವಿಶೇಷ ಕೋರ್ಟ್ಗೆ ವರ್ಗಾವಣೆ ಮಾಡುವಂತೆ ಮುನಿರಾಜ್ಗೌಡ ಮನವಿ ಮಾಡಿದ್ದಾರೆ.
ಮುನಿರಾಜ್ಗೌಡ 2018ರಲ್ಲಿ ಮುನಿರತ್ನ ವಿರುದ್ದ ಬಿಜೆಪಿಯಿಂದ ಸ್ಪರ್ಧಿಸಿದ್ದರು. ಮುನಿರತ್ನ ವಿರುದ್ದ 2018ರಲ್ಲಿ ಜಾಲಹಳ್ಳಿ ಠಾಣೆಯಲ್ಲಿ ವೋಟರ್ ಐಡಿ ಕೇಸ್ ದಾಖಲಾಗಿತ್ತು. ಅಪಾರ್ಟ್ಮೆಂಟ್ವೊಂದರಲ್ಲಿ ಸಾವಿರಾರು ವೋಟರ್ ಐಡಿ ಪತ್ತೆಯಾಗಿತ್ತು. ಚುನಾವಣಾ ಆಯೋಗದ ಅಧಿಕಾರಿಗಳು ಪ್ರಕರಣ ದಾಖಲು ಮಾಡಿದ್ರು. ಇದೀಗ ಈ ಕೇಸ್ನ್ನು 8ನೇ ACMM ಕೋರ್ಟ್ನಿಂದ ಜನಪ್ರತಿನಿಧಿಗಳ ಕೋರ್ಟ್ಗೆ ಶಿಫ್ಟ್ಗೆ ಮನವಿ ಸಲ್ಲಿಸಿದ್ದಾರೆ.
2020ರಲ್ಲಿ IPS ಅಧಿಕಾರಿ ನೇತೃತ್ವದಲ್ಲಿ ತನಿಖೆ ನಡೆಸಲು ಹೈಕೋರ್ಟ್ ಸೂಚಿಸಿತ್ತು, 2020ರಿಂದ ಪೊಲೀಸರು ಯಾವುದೇ ತನಿಖೆ ಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ. ಮುನಿರಾಜ್ಗೌಡ ಹೈಕೋರ್ಟ್ ಆದೇಶ ಪ್ರತಿ ನೀಡಿ ಮರು ತನಿಖೆಗೆ ಒತ್ತಾಯಿಸಿದ್ದು, 6 ವರ್ಷದ ಹಿಂದಿನ ಕೇಸ್ಗೆ ಮರು ಜೀವ ಬಂದ್ರೆ ಮುನಿರತ್ನಗೆ ಮತ್ತೊಂದು ಸಂಕಷ್ಟ ಎದುರಾಗಲಿದೆ.
ಇದನ್ನೂ ಓದಿ : ಸೆ. 27ಕ್ಕೆ ‘ಸಂಜು’ ಚಿತ್ರ ರಿಲೀಸ್ – ಇದು ಮಂಜು ಕವಿದ ವಾತಾವರಣ.. ‘ಸಂಜು’ ಬದುಕಿನ ಅನಾವರಣ..!