Download Our App

Follow us

Home » ಸಿನಿಮಾ » ಖ್ಯಾತ ನಟಿ-ಬಿಗ್ ಬಾಸ್ ಸ್ಪರ್ಧಿ ಲಿಪ್‌ಲಾಕ್‌ ಫೋಟೋ ವೈರಲ್ – ಆ ಸೀನ್‌ ಒಪ್ಕೋಳೋಕೆ 2 ಕಾರಣ ಇತ್ತೆಂದಾ ತನಿಷಾ..!

ಖ್ಯಾತ ನಟಿ-ಬಿಗ್ ಬಾಸ್ ಸ್ಪರ್ಧಿ ಲಿಪ್‌ಲಾಕ್‌ ಫೋಟೋ ವೈರಲ್ – ಆ ಸೀನ್‌ ಒಪ್ಕೋಳೋಕೆ 2 ಕಾರಣ ಇತ್ತೆಂದಾ ತನಿಷಾ..!

ಬಿಗ್​​ ಬಾಸ್​​ ಖ್ಯಾತಿಯ ತನಿಷಾ ಕುಪ್ಪಂಡ ಅವರು ‘ಬಿಗ್ ಬಾಸ್‌’ ರಿಯಾಲಿಟಿ ಶೋಗೆ ಕಾಲಿಟ್ಟ ನಂತರ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ. ಹೊಸ ಹೊಸ ಅವಕಾಶಗಳು ಅವರನ್ನು ಕೈಬೀಸಿ ಕರೆಯುತ್ತಿವೆ. ಜೊತೆಗೆ ಉದ್ಯಮಿ ಆಗಿಯೂ ತನಿಷಾ ಕಾಣಿಸಿಕೊಳುತ್ತಿದ್ದಾರೆ. ಅಂದಹಾಗೆ, ಈ ಖ್ಯಾತಿ-ಜನಪ್ರಿಯತೆ ಸಿಗುವುದಕ್ಕೂ ಮುನ್ನ ತನಿಷಾ ಒಂದಷ್ಟು ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದರು. ಅದರಲ್ಲಿ ‘ದಂಡುಪಾಳ್ಯ 2’ ಕೂಡ ಒಂದು. ಅದರಲ್ಲಿ ಅವರು ಒಂದು ಬೋಲ್ಡ್ ಸೀನ್‌ ಕೂಡ ಅವರು ಮಾಡಿದ್ದರು. ಇದೀಗ ಈ ಸೀನ್ ಮಾಡಲು ಕಾರಣ ಏನು ಎಂದು ತನಿಷಾ ರಿವೀಲ್ ಮಾಡಿದ್ದಾರೆ.

ಸಂದರ್ಶನವೊಂದರಲ್ಲಿ ಪೂಜಾ ಗಾಂಧಿ ಜೊತೆಗಿನ ಆ ಇಂಟಿಮೇಟ್‌ ಸೀನ್ ಮಾಡಲು ಕಾರಣವೇನು ಎಂಬುದನ್ನು ತಿಳಿಸಿದ ತನಿಷಾ ಅವರು, ನಾನು ಬೇರೆಯವರ ಪರವಾಗಿ ಆಯ್ಕೆ ಆಗಿ ಹೋಗಿರುತ್ತೀನಿ ಏಕೆಂದರೆ ಮೊದಲು ನನ್ನನ್ನು ಆಯ್ಕೆ ಮಾಡಿರುವುದಿಲ್ಲ. ಅಲ್ಲಿ ಕೊನೇ ಕ್ಷಣದಲ್ಲಿ ಕೈ ಕೊಟ್ಟಾಗ ಯಾರೋ ಹುಷಾರಿಲ್ಲ ಅಂತ ಬಿಟ್ಟಾಗ ನನ್ನನ್ನು ಅಯ್ಕೆ ಮಾಡುತ್ತಾರೆ. ನಾನು ದಂಡುಪಾಳ್ಯ 2 ಸಿನಿಮಾದಲ್ಲಿ ಆ ಕಿಸ್ ಸೀಸನ್ ಮಾಡುವುದಕ್ಕೆ ಎರಡು ಕಾರಣವಿದೆ. ಒಂದು ಒಳ್ಳೆ ಸಂಭಾವನೆ ಕೊಡುತ್ತಾರೆ, ಎರಡನೆಯದು ಆ ರೀತಿ ಪಾತ್ರವನ್ನು ಸೌತ್ ಇಂಡಸ್ಟ್ರಿಯಲ್ಲಿ ಯಾರೂ ಮಾಡಿರಲಿಲ್ಲ. ನಾನು ಮತ್ತು ಪೂಜಾ ಗಾಂಧಿ ಅವರೇ ಮೊದಲ ಬಾರಿಗೆ ಲೆಸ್ಲೋ ಕಾನ್ಸೆಪ್ಟ್‌ನಲ್ಲಿ ಸೀನ್ ಮಾಡಿರುವುದು. ದಂಡುಪಾಳ್ಯ ಚಿತ್ರಕ್ಕೂ ಮುನ್ನ ನಾನು ಹಲವು ಧಾರಾವಾಹಿಗಳಲ್ಲಿ ನಟಿಸುತ್ತಿದ್ದಾರೆ ಆದರೆ ಈ ಸೀನ್ ಮಾಡಿದಾಗ ಅದು ನಾನು ಎಂದು ಯಾರೂ ಗುರುತು ಹಿಡಿಯಲಿಲ್ಲ. ಬಹಳಷ್ಟು ಜನ ನನ್ನ ಧ್ವನಿಯಿಂದ ಗುರುತಿಸಿದ್ದರು. ಆಗಲೇ ಗೊತ್ತಾಗಿದ್ದು ಧ್ವನಿ ಮೂಲಕ ಜನರು ಗುರುತಿಸುತ್ತಾರೆ ಎಂದು ತಿಳಿಸಿದ್ದಾರೆ.

ಇನ್ನು ಆ ಸೀಸನ್ ಶೂಟಿಂಗ್ ಮಾಡುವ ದಿನ ನಾನು ತುಂಬಾ ಧೈರ್ಯದಿಂದ ಹೋಗಿದ್ದೆ. ಶೂಟಿಂಗ್ ಶುರುವಾಗುವ ಮುನ್ನ ನಾನು ಮತ್ತು ಪೂಜಾ ಗಾಂದಿ ಚರ್ಚೆ ಮಾಡುತ್ತಿದ್ವಿ. ದಂಡುಪಾಳ್ಯ 1 ಚಿತ್ರದಲ್ಲಿ ಪೂಜಾ ಗಾಂಧಿ ಬ್ಯಾಕ್‌ಲೆಸ್‌ ಸೀನ್ ಮಾಡಿದ್ದರು ಅದರ ಬಗ್ಗೆ ಹೇಳಿಕೊಳ್ಳುತ್ತಿದ್ದರು. ಜೊತೆಗೆ ಈ ಸೀನ್ ಮಾಡುವುದಕ್ಕೂ ಮುನ್ನ ಯೋಚನೆ ಮಾಡು ಎಂದು ಸಲಹೆ ಕೊಟ್ಟಿದ್ದರು ಆದರೆ ನಾನು ಶೂಟಿಂಗ್‌ಗೆ ರೆಡಿಯಾಗಿದ್ದೆ. ಆಗ ನಾನು ತುಂಬಾ ಕಾನ್ಫಿಡೆಂಟ್ ಆಗಿದ್ದೆ ಅದನ್ನು ಅವರು ಮೆಚ್ಚಿಕೊಂಡರು. ನಮ್ಮ ಕಡೆಯಿಂದ ಯಾವುದೇ ಸಮಸ್ಯೆ ಇರಲಿಲ್ಲ ಆದರೆ ಟೆಕ್ನಿಕಲ್ ಸಮಸ್ಯೆಗಳಿಂದ ಸುಮಾರು 5-6 ಟೇಕ್‌ ತೆಗೆದುಕೊಳ್ಳಬೇಕಿತ್ತು’ ಎಂದು ತನಿಷಾ ಹೇಳಿದ್ದಾರೆ.

ಆ ಸೀಸನ್ ಮಾಡಿದ್ದ ಸೀರಿಯಸ್‌ನೆಸ್‌ ವರ್ಕೌಟ್ ಆಗಲಿಲ್ಲ ಸೀನ್‌ ಕೂಡ ಹೈಲೈಟ್ ಆಗಲಿಲ್ಲ ಆದರೆ ಸಿಕ್ಕಾಪಟ್ಟೆ ಟ್ರೋಲ್ ಆಯ್ತು. ಈಗಲೂ ಹಲವರಿಗೆ ನಾನು ಮತ್ತು ಪೂಜಾ ಗಾಂಧಿ ಆ ಸೀನ್ ಮಾಡಿರುವುದು ಎಂದು ಗೊತ್ತಿಲ್ಲ. ದುಡ್ಡು ಅಂತ ಆಸೆ ಬಿದ್ದು ಮಾಡಿಲ್ಲ ಆದರೆ ಇದಕ್ಕೂ ಮುನ್ನ ನಾನು ರಿಯಾಲಿಟಿ ಶೋ ಒಂದರಲ್ಲಿ ಭಾಗಿಯಾಗಿದ್ದೆ ಆಗ ನನ್ನ ಕಾಲಿಗೆ ಪೆಟ್ಟಾಗಿತ್ತು. ಆ ಶೋನವರು ನನ್ನ ವೈದ್ಯಕೀಯ ವೆಚ್ಚಗಳನ್ನು ನೀಡಲಿಲ್ಲ ಆಗ ದುಡ್ಡು ಎಷ್ಟು ಮುಖ್ಯ ಅನ್ನೋದು ಅರ್ಥವಾಗಿತ್ತು ಎಂದು ತನಿಷಾ ತಿಳಿಸಿದ್ದಾರೆ.

ಇದನ್ನೂ ಓದಿ : ‘ಮರ್ಫಿ’ಯಿಂದ ಬಂತು ಡ್ಯಾನ್ಸಿಂಗ್ ನಂಬರ್.. ಅಕ್ಟೋಬರ್ 18ಕ್ಕೆ ಸಿನಿಮಾ ತೆರೆಗೆ..!

Leave a Comment

DG Ad

RELATED LATEST NEWS

Top Headlines

ಯುವತಿಯನ್ನ ಕತ್ತರಿಸಿ, ಮೃತದೇಹ ಫ್ರಿಡ್ಜ್‌ನಲ್ಲಿಟ್ಟ ಹಂತಕ – ಭೀಕರ ಕೃತ್ಯದಿಂದ ಬೆಚ್ಚಿಬಿದ್ದ ಬೆಂಗಳೂರು..!

ಬೆಂಗಳೂರು: ಕಳೆದೆರಡು ವರ್ಷಗಳ ಹಿಂದೆ ಶ್ರದ್ಧಾ ವಾಕರ್ ಎಂಬ ಯುವತಿಯ ಬರ್ಬರ ಹತ್ಯೆಯಿಂದ ಇಡೀ ದೇಶವೇ ಬೆಚ್ಚಿಬಿದ್ದಿತ್ತು. ಇದೀಗ ದೇಶವನ್ನೇ ಬೆಚ್ಚಿಬೀಳಿಸಿದ್ದ ದೆಹಲಿಯ ಶ್ರದ್ಧಾ ವಾಕರ್ ಕೊಲೆಯ

Live Cricket

Add Your Heading Text Here