ಬೆಂಗಳೂರು : ಕಾನೂನಿಗಿಂತ ಯಾರು ದೊಡ್ಡವರು ಇಲ್ಲ. ನೆಲದ ಕಾನೂನಿಗೆ ಎಲ್ಲರೂ ತಲೆ ಬಾಗಲೇಬೇಕು. ಮುನಿರತ್ನ ಕೇಸ್ ತನಿಖೆ ಆಗ್ತಿದೆ.. ಮಾತಾಡೋದು ಸರಿಯಲ್ಲ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದ್ದಾರೆ.
ಬೆದರಿಕೆ ಹಾಗೂ ಜಾತಿನಿಂದನೆ ಪ್ರಕರಣದಲ್ಲಿ ಬೇಲ್ ಪಡೆದು ಜೈಲಿನಿಂದ ಹೊರ ಬಂದಿದ್ದ ಶಾಸಕ ಮುನಿರತ್ನ ಇದೀಗ ರೇಪ್ ಕೇಸ್‌ನಲ್ಲಿ ಮತ್ತೆ ಪರಪ್ಪನ ಅಗ್ರಹಾರ ಜೈಲು ಪಾಲಾಗಿದ್ದಾರೆ. ಇನ್ನು ಈ ವಿಚಾರಕ್ಕೆ ಸಂಬಂಧಿಸಿದಂತೆ ಹಲವರು ಹೇಳಿಕೆ ನೀಡುತ್ತಿದ್ದಾರೆ.
ಇದೀಗ ಈ ಬಗ್ಗೆ ಬೆಂಗಳೂರಿನಲ್ಲಿ ನಿಖಿಲ್ ಕುಮಾರಸ್ವಾಮಿ ಮಾತನಾಡಿ, ಮುನಿರತ್ನ ಅವ್ರ ವಿಚಾರದಲ್ಲಿ FSL ವರದಿ ಬರಬೇಕು. ಅವದ ಧ್ವನಿಯೋ ಅಲ್ಲವೋ ಅಂತ ಸತ್ಯ ಹೊರಗೆ ಬರಬೇಕು. ಮುನಿರತ್ನರನ್ನ ಸರ್ಕಾರ ಟಾರ್ಗೆಟ್ ಮಾಡ್ತಿದೆ ಅಂತ ಅನ್ನಿಸುತ್ತಿದೆ ಎಂದು ಬೆಂಗಳೂರಿನಲ್ಲಿ ನಿಖಿಲ್ ಕುಮಾರಸ್ವಾಮಿ ತಿಳಿಸಿದ್ದಾರೆ.
ಇದನ್ನೂ ಓದಿ : 102 ದಿನದ ಬಳಿಕ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ ದರ್ಶನ್..!
Post Views: 63