Download Our App

Follow us

Home » ರಾಷ್ಟ್ರೀಯ » ದಶಕಗಳ ಬಳಿಕ ಕಣಿವೆ ರಾಜ್ಯ ಜಮ್ಮು-ಕಾಶ್ಮೀರದಲ್ಲಿ ಚುನಾವಣೆ – 24 ವಿಧಾನಸಭಾ ಕ್ಷೇತ್ರಗಳಲ್ಲಿ ಇಂದು ಮತದಾನ..!

ದಶಕಗಳ ಬಳಿಕ ಕಣಿವೆ ರಾಜ್ಯ ಜಮ್ಮು-ಕಾಶ್ಮೀರದಲ್ಲಿ ಚುನಾವಣೆ – 24 ವಿಧಾನಸಭಾ ಕ್ಷೇತ್ರಗಳಲ್ಲಿ ಇಂದು ಮತದಾನ..!

ಶ್ರೀನಗರ : ಭಾರತದ ಕಿರೀಟ ಅಂತಾ ಕರೆಸಿಕೊಳ್ಳುವ ಜಮ್ಮು ಮತ್ತು ಕಾಶ್ಮೀರದಲ್ಲಿ ಹೊಸ ಭರವಸೆ ಈಗ ಮೂಡಿದೆ. ಸದಾ ಉಗ್ರರ ಅಟ್ಟಹಾಸ ಹಾಗೂ ದಾಳಿಯಿಂದ ಬಳಲಿ ಹೋಗಿದ್ದ ಜಮ್ಮು & ಕಾಶ್ಮೀರ ಕಳೆದ ಕೆಲವು ವರ್ಷಗಳಿಂದ ಶಾಂತವಾಗಿ ಬದುಕುತ್ತಿದೆ. ಹೀಗಿದ್ದಾಗ ಕೇಂದ್ರ ಸರ್ಕಾರ ಕೂಡ ಶಿಸ್ತು ಬದ್ಧವಾಗಿ ಕಣಿವೆ ರಾಜ್ಯ ಜಮ್ಮು & ಕಾಶ್ಮೀರದ ವಿಧಾನಸಭೆಗೆ ಚುನಾವಣೆ ನಡೆಸಲು ಈಗ ಸಕಲ ಸಿದ್ಧತೆ ಕೈಗೊಂಡಿದೆ.

10 ವರ್ಷಗಳ ನಂತರ ಕಣಿವೆ ರಾಜ್ಯ ಜಮ್ಮು-ಕಾಶ್ಮೀರಕ್ಕೆ ವಿಧಾನಸಭೆ ಎಲೆಕ್ಷನ್​ ನಡೀತಿದ್ದು, ಇಂದು 24 ಕ್ಷೇತ್ರಗಳಿಗೆ ಮೊದಲ ಹಂತದ ಮತದಾನ ನಡೆಯಲಿದೆ. ಶಸ್ತ್ರ ಸಜ್ಜಿತ ಭದ್ರತಾ ಪಡೆಗಳ ಬಂದೋಬಸ್ತ್​​ನಲ್ಲಿ ಮತದಾನ ನಡೆಯುತ್ತಿದ್ದು, 10 ವರ್ಷಗಳ ನಂತರ ಬಂದ ಮತದಾನ ಅವಕಾಶ ಬಳಸಿಕೊಳ್ಳಲು ಜನರು ಉತ್ಸಾಹದಿಂದ ಮತಗಟ್ಟೆಯ ಕಡೆಗೆ ಬರ್ತಿದ್ದಾರೆ.

ದಕ್ಷಿಣ ಕಾಶ್ಮೀರ ಭಾಗದ 16 ಕ್ಷೇತ್ರಗಳು ಸೇರಿದಂತೆ 24 ಕ್ಷೇತ್ರಗಳಿಗೆ ಪೊಲೀಸ್ ಭದ್ರಕೋಟೆ ನಿರ್ಮಿಸಲಾಗಿದೆ. 90 ಕ್ಷೇತ್ರಗಳ ಪೈಕಿ 24 ವಿಧಾನಸಭೆ ಕ್ಷೇತ್ರಗಳಿಗೆ 23 ಲಕ್ಷ ಮತದಾರರು ಮತದಾನ ಮಾಡುತ್ತಿದ್ದಾರೆ. 219 ಅಭ್ಯರ್ಥಿಗಳು ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

ಇದನ್ನೂ ಓದಿ : ಕಿಲ್ಲರ್ BMTCಗೆ ಮತ್ತೊಂದು ಬಲಿ – ತಡರಾತ್ರಿ ಮೆಜೆಸ್ಟಿಕ್​ನಲ್ಲಿ ಬಸ್ ಹರಿದು ವಿಶೇಷ ಚೇತನ ಯುವಕ ಸಾವು..!

Leave a Comment

DG Ad

RELATED LATEST NEWS

Top Headlines

MLA ಮುನಿರತ್ನ ವಿರುದ್ಧ ರೇಪ್ ಆರೋಪದ ಬೆನ್ನಲ್ಲೇ ಮಾಜಿ ಕಾರ್ಪೊರೇಟರ್ ಪತಿಯ ಹನಿಟ್ರ್ಯಾಪ್ ವಿಡಿಯೋ ವೈರಲ್..!

ಬೆಂಗಳೂರು : ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿ ಬಿಜೆಪಿ ಶಾಸಕ ಮುನಿರತ್ನ ಸೇರಿ ಏಳು ಮಂದಿಯ ವಿರುದ್ಧ ರಾಮನಗರ ಜಿಲ್ಲಾ ವ್ಯಾಪ್ತಿಯ ಕಗ್ಗಲಿಪುರ ಪೊಲೀಸ್ ಠಾಣೆಯಲ್ಲಿ

Live Cricket

Add Your Heading Text Here