Download Our App

Follow us

Home » ಸಿನಿಮಾ » ಸ್ಯಾಂಡಲ್​​ವುಡ್​ನಲ್ಲಿ Mee Too ಪ್ರಕರಣ – ಸೆ.16ಕ್ಕೆ ಫಿಲ್ಮ್ ಚೇಂಬರ್​ನಲ್ಲಿ ಮಹತ್ವದ ಸಭೆ..!

ಸ್ಯಾಂಡಲ್​​ವುಡ್​ನಲ್ಲಿ Mee Too ಪ್ರಕರಣ – ಸೆ.16ಕ್ಕೆ ಫಿಲ್ಮ್ ಚೇಂಬರ್​ನಲ್ಲಿ ಮಹತ್ವದ ಸಭೆ..!

ಬೆಂಗಳೂರು : ಮಾಲಿವುಡ್ ಬೆನ್ನಲ್ಲೇ ಸ್ಯಾಂಡಲ್​ವುಡ್​ನಲ್ಲಿ ಮತ್ತೆ Mee Too ಪ್ರಕರಣ ಸದ್ದು ಮಾಡುತ್ತಿದ್ದು, ಈ ಹಿನ್ನೆಲೆ ಸೆಪ್ಟೆಂಬರ್​​​​ 16ಕ್ಕೆ ವಾಣಿಜ್ಯ ಮಂಡಳಿಯಲ್ಲಿ ಮಹತ್ವದ ಸಭೆ ನಡೆಯಲಿದೆ.

ಕಲಾವಿದರ ಸಂಘ, ಫಿಲ್ಮ್ ಚೇಂಬರ್ ಹಾಗೂ 100 ಕಲಾವಿದರನ್ನು ಸಭೆಗೆ ಆಹ್ವಾನಿಸಲು ಎರಡು ದಿನಗಳ ಹಿಂದೆ ಮಹಿಳಾ ಆಯೋಗ ಫಿಲ್ಮ್ ಚೇಂಬರ್​ಗೆ ಪತ್ರ ಬರೆದಿದೆ. ಹಾಗಾಗಿ ಸೆಪ್ಟೆಂಬರ್​​​​ 16ಕ್ಕೆ ವಾಣಿಜ್ಯ ಮಂಡಳಿಯಲ್ಲಿ ಮಹತ್ವದ ಸಭೆ ನಡೆಸಲು ನಿರ್ಧರಿಸಿ ಕಲಾವಿದರನ್ನು ವಿಚಾರಣೆಗೆ ಕರೆದಿದ್ದಾರೆ. 100 ನಟಿ ಮಣಿಯರಿಂದ ಫಿಲ್ಮ್ ಚೇಂಬರ್​ನಲ್ಲೇ ಮಾಹಿತಿ ಸಂಗ್ರಹಿಸಲಿದ್ದಾರೆ.

ಈ ಹಿಂದೆ ಫೈರ್​ ಸಂಸ್ಥೆ ಕೇರಳ ಮಾದರಿಯಲ್ಲಿ ಆಯೋಗ ರಚನೆಗೆ ಮನವಿ ಮಾಡಿತ್ತು, ನಟಿಯರ ಭದ್ರತೆ ಹಾಗೂ ಸಮಸ್ಯೆಗಳಿಗೆ ಪೂರಕವಾಗಿ ಸಮಿತಿ ರಚನೆಗೆ ಒತ್ತಾಯಗಳು ಕೇಳಿಬರುತ್ತಿತ್ತು. ‘ಮಾಲಿವುಡ್’ ಮಾದರಿಯಲ್ಲೇ ಆಯೋಗ ರಚಿಸಲು ಹಲವರು ಆಗ್ರಹಿಸಿದ್ದರು, ಕೇರಳದ ನ್ಯಾ.ಹೇಮಾ ಕಮಿಟಿ ರಿಪೋರ್ಟ್ ಸಿಸಿನಿಮಾ ಲೋಕದಲ್ಲಿ ಸಂಚಲನ ಸೃಷ್ಟಿಸಿದೆ. ಇದೀಗ ಮಹಿಳಾ ಆಯೋಗ ಕಲಾವಿದೆಯರ ಮೇಲಿನ ದೌರ್ಜನ್ಯ ಗಂಭೀರವಾಗಿ ಪರಿಗಣಿಸಿದೆ. ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ನೇತೃತ್ವದಲ್ಲಿ ಸೆಪ್ಟೆಂಬರ್​​​​ 16ರಂದು ಸಭೆ ನಡೆಯಲಿದೆ.

ಇದನ್ನೂ ಓದಿ : ನಟ ಕಿರಣ್ ರಾಜ್ ಪ್ರಯಾಣಿಸುತ್ತಿದ್ದ ಕಾರು ಅಪಘಾತ – ನಟನ ಎದೆ ಭಾಗಕ್ಕೆ ಭಾರಿ ಪೆಟ್ಟು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ..!

Leave a Comment

DG Ad

RELATED LATEST NEWS

Top Headlines

ತಾಯಿಗೆ ಮರು ಪ್ರೀತಿ, ಹೊಸ ಜೀವನ.. ಹೆತ್ತಮ್ಮನಿಗೇ 2ನೇ ಮದುವೆ ಮಾಡಿಸಿದ ಪುತ್ರ..!

ಪತಿಯನ್ನು ಕಳೆದುಕೊಂಡು ಒಂಟಿಯಾಗಿದ್ದ ತಾಯಿಗೆ ಮಗನೇ ಮುಂದೆ ನಿಂತು ಮದುವೆ ಮಾಡಿಸಿದ ಅಚ್ಚರಿಯ ಘಟನೆಯೊಂದು ನಡೆದಿದೆ. 18 ವರ್ಷ ತಾಯಿ ಜೊತೆಗಿದ್ದ ಮಗ ಅಬ್ದುಲ್ ಅಹಾದ್ ಬಹಳ

Live Cricket

Add Your Heading Text Here