Download Our App

Follow us

Home » ಸಿನಿಮಾ » ದೀಪಿಕಾ ಪಡುಕೋಣೆ-ರಣವೀರ್‌ ಸಿಂಗ್‌ ಮಗಳನ್ನು ನೋಡಲು ಆಸ್ಪತ್ರೆಗೆ ಬಂದ ಮುಕೇಶ್ ಅಂಬಾನಿ..!

ದೀಪಿಕಾ ಪಡುಕೋಣೆ-ರಣವೀರ್‌ ಸಿಂಗ್‌ ಮಗಳನ್ನು ನೋಡಲು ಆಸ್ಪತ್ರೆಗೆ ಬಂದ ಮುಕೇಶ್ ಅಂಬಾನಿ..!

ಬಾಲಿವುಡ್‌ನ ಸ್ಟಾರ್ ಕಪಲ್ ಎಂದೇ ಫೇಮಸ್ ಆಗಿರುವ ನಟಿ ದೀಪಿಕಾ ಪಡುಕೋಣೆ ಮತ್ತು ರಣ್‌ವೀರ್ ಸಿಂಗ್ ದಂಪತಿ ಮುದ್ದಾದ ಹೆಣ್ಣು ಮಗುವಿಗೆ ಪೋಷಕರಾಗಿದ್ದಾರೆ. ಪೋಷಕರಾಗಿರುವ ಸಂಭ್ರಮದಲ್ಲಿರುವ ದೀಪಿಕಾ ಮತ್ತು ರಣ್‌ವೀರ್ ನೋಡಲು ಉದ್ಯಮಿ ಮುಕೇಶ್ ಅಂಬಾನಿ ಎಚ್.ಎನ್ ರಿಲಯನ್ಸ್ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.

ಇಬ್ಬರೂ ತಮ್ಮ ಸಂತೋಷದ ವಿಷಯವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಬಳಿಕ ಅಭಿನಂದೆನೆಗಳ ಮಹಾಪೂರವೆ ಹರಿಯುತ್ತಿದೆ. ಅಂದ್ದಾಗೆ ದೀಪಿಕಾ ಪಡುಕೋಣೆ ಮುಂಬೈನ ಸೌತ್ ಎಚ್.ಎನ್ ರಿಲಯನ್ಸ್ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ್ದಾರೆ.

ಈ ಆಸ್ಪತ್ರೆಯು ಮುಖೇಶ್‌ ಅಂಬಾನಿ ಮತ್ತು ನೀತಾ ಅಂಬಾನಿ ಒಡೆತನದಲ್ಲಿದೆ. ಸೆಲಿಬ್ರಿಟಿಗಳ ವಿಶ್‌ಗಳ ಮಧ್ಯೆ ಮುಖೇಶ್ ಅಂಬಾನಿ ಅವರು ರಣವೀ‌ರ್ ಮತ್ತು ದೀಪಿಕಾ ಮಗಳನ್ನು ನೋಡಲು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ತಾಯಿ ಮತ್ತು ಮಗಳನ್ನು ಭೇಟಿಯಾಗಿ ಅವರ ಯೋಗಕ್ಷೇಮದ ಬಗ್ಗೆ ವಿಚಾರಿದ್ದಾರೆ. ಉದ್ಯಮಿ ಮುಕೇಶ್ ಅಂಬಾನಿ ಅವರು ಆಸ್ಪತ್ರೆಯ ಆಗಮಿಸಿದ್ದ ವೇಳೆ, ಹೆಚ್ಚಿನ ಭದ್ರತೆ ಕೂಡ ನೀಡಲಾಗಿತ್ತು.

ಇನ್ನೂ ಮನೆಗೆ ಮುದ್ದಾದ ಹೆಣ್ಣು ಮಗುವಿನ ಆಗಮನವಾಗಿರೋದು ಸಹಜವಾಗಿ ಕುಟುಂಬಕ್ಕೆ ಖುಷಿಕೊಟ್ಟಿದೆ. ಈ ಜೋಡಿಗೆ ಬಾಲಿವುಡ್ ಸ್ಟಾರ್ ನಟ, ನಟಿಯರು ಶುಭಕೋರಿದ್ದಾರೆ. ಸಹಜವಾಗಿ ಸೆಲೆಬ್ರಿಟಿಗಳ ಮಕ್ಕಳ ಮುಖ ದರ್ಶನ ಅಷ್ಟು ಸುಲಭದ್ದಲ್ಲ. ಹಾಗಾಗಿ ಈ ಜೋಡಿಯ ಮಗುವಿನ ಮುಖ ಅದ್ಯಾವಾಗ ರಿವೀಲ್ ಮಾಡ್ತಾರೆ ಎಂದು ಫ್ಯಾನ್ಸ್‌ ಕಾಯುತ್ತಿದ್ದಾರೆ.

ಇದನ್ನೂ ಓದಿ : ‘ಪೆನ್​ಡ್ರೈವ್’​ನಲ್ಲಿ ಬಿಗ್​ಬಾಸ್​ ಖ್ಯಾತಿಯ ತನಿಷಾ ಕುಪ್ಪಂಡ – ವಿಡಿಯೋ ವೈರಲ್​..!

Leave a Comment

DG Ad

RELATED LATEST NEWS

Top Headlines

ಹೊರನಾಡು ಅನ್ನಪೂರ್ಣೇಶ್ವರಿ ದೇಗುಲದಲ್ಲಿ ಡ್ರೆಸ್ ಕೋಡ್ ಜಾರಿ – ದೇವರ ದರ್ಶನಕ್ಕೆ ಸಾಂಪ್ರದಾಯಿಕ ಉಡುಗೆ ಕಡ್ಡಾಯ..!

ಚಿಕ್ಕಮಗಳೂರು : ಇತ್ತೀಚೆಗೆ ಶೃಂಗೇರಿಯ ಶ್ರೀ ಶಾರದಾಂಬೆ ಸನ್ನಿಧಾನದಲ್ಲಿ ಹಾಗೂ ಸುತ್ತಲಿನ ದೇವಸ್ಥಾನಗಳಲ್ಲಿ ಡ್ರೆಸ್ ಕೋಡ್ ಜಾರಿಯಾಗಿತ್ತು. ಇದೀಗ ರಾಜ್ಯದ ಪ್ರಸಿದ್ಧ ಯಾತ್ರಾ ಸ್ಥಳವಾದ ಹೊರನಾಡು ಶ್ರೀ

Live Cricket

Add Your Heading Text Here