Download Our App

Follow us

Home » ಸಿನಿಮಾ » ‘ಪೆನ್​ಡ್ರೈವ್’​ನಲ್ಲಿ ಬಿಗ್​ಬಾಸ್​ ಖ್ಯಾತಿಯ ತನಿಷಾ ಕುಪ್ಪಂಡ – ವಿಡಿಯೋ ವೈರಲ್​..!

‘ಪೆನ್​ಡ್ರೈವ್’​ನಲ್ಲಿ ಬಿಗ್​ಬಾಸ್​ ಖ್ಯಾತಿಯ ತನಿಷಾ ಕುಪ್ಪಂಡ – ವಿಡಿಯೋ ವೈರಲ್​..!

ಸ್ಯಾಂಡಲ್‌ವುಡ್ ನಟಿ ತನಿಷಾ ಕುಪ್ಪಂಡ ಬಿಗ್‌ಬಾಸ್ ಶೋಗೆ ಹೋಗಿ ಬಂದಮೇಲೆ ಮತ್ತಷ್ಟು ಕ್ರೇಜ್ ಸೃಷ್ಟಿಸಿಕೊಂಡಿದ್ದಾರೆ. ತಮ್ಮದೇ ವ್ಯಾಪಾರ, ವ್ಯವಹಾರಗಳಲ್ಲಿ ಬ್ಯುಸಿಯಾಗಿರುವ ನಟಿ, ಹಲವು ಸಿನಿಮಾಗಳಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದು, ಇದೀಗ ಪೆನ್​ಡ್ರೈವ್​ ಮೂಲಕ ಸುದ್ದಿಯಲ್ಲಿದ್ದಾರೆ.

ಹೌದು , ಬಿಗ್ ಬಾಸ್’ ಮನೆಯಲ್ಲಿ ಬೆಂಕಿ ಎಂದು ಕರೆಸಿಕೊಳ್ಳುತ್ತಿದ್ದ ನಟಿ ತನಿಷಾ ಕುಪ್ಪಂಡ ಈಗ ಪೆನ್​ಡ್ರೈವ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಬಿಗ್​ಬಾಸ್​ ಬಳಿಕ ಸಕತ್​ ಫೇಮಸ್​ ಆಗಿರೋ ತನಿಷಾ ಅವರಿಗೆ ಸಿನಿಮಾದಿಂದಲೂ ಆಫರ್​ ಬರುತ್ತಿದ್ದು, ಅವರ ಪೆನ್​ಡ್ರೈವ್​ ಸಿನಿಮಾ ಶೀಘ್ರದಲ್ಲಿಯೇ ತೆರೆಯ ಮೇಲೆ ಬರಲಿದೆ. ಈ ಚಿತ್ರದಲ್ಲಿ ತನಿಷಾ  ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

ಕೆಲ ದಿನಗಳ ಹಿಂದೆಯಷ್ಟೇ ಸಿನಿಮಾದ ಬಗ್ಗೆ ನಟಿ ಬಹಿರಂಗಪಡಿಸಿದ್ದರು. ಪೆನ್​​ಡ್ರೈವ್ ಚಿತ್ರದ ಕಥೆ ತುಂಬ ಚೆನ್ನಾಗಿದ್ದು ನಾನು  ಪೊಲೀಸ್ ಅಧಿಕಾರಿ ಪಾತ್ರ ಮಾಡುತ್ತಿದ್ದೇನೆ ಎಂದಿದ್ದರು. ಜೊತೆಗೆ ನೀವು ಅಂದುಕೊಂಡಂತೆ ಅದು ಬಹಳ ಸದ್ದು ಮಾಡಿರೋ ಪೆನ್​ಡ್ರೈವ್​ ಕಥೆಯಲ್ಲ, ಅಂದ್ರೆ  ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಕೇಸ್ ಅಲ್ಲ ಮತ್ತೆ. ಇದರಲ್ಲಿ ಇರೋದೇ ಬೇರೆ ಎಂದು ನಟಿ ತಿಳಿಸಿದ್ದರು.

ಅಂದಹಾಗೆ ಈ ಚಿತ್ರವನ್ನು ಸೆಬಾಸ್ಟಿನ್ ಡೇವಿಡ್ ಮಾಡುತ್ತಿದ್ದಾರೆ. ಲಯನ್ ಆರ್. ವೆಂಕಟೇಶ್ ಮತ್ತು ಲಯನ್ ಎಸ್. ವೆಂಕಟೇಶ್ ಚಿತ್ರದ ನಿರ್ಮಾಪಕರು. ಈ ಚಿತ್ರದ ಶೀರ್ಷಿಕೆ ಕುರಿತು ವಿವರಿಸಿದ್ದ ಅವರು, ಇಂಥದ್ದೊಂದು  ಶೀರ್ಷಿಕೆ ನೀಡಿದ ವಾಣಿಜ್ಯ ಮಂಡಳಿಗೆ ಧನ್ಯವಾದ. ಪ್ರಸ್ತುತ ಚಾಲ್ತಿಯಲ್ಲಿರುವ ಪೆನ್​​ಡ್ರೈವ್​ಗೂ ನಮ್ಮ ಚಿತ್ರದ ಶೀರ್ಷಿಕೆಗೂ ಯಾವುದೇ ಸಂಬಂಧವಿಲ್ಲ ಎಂದು ಅವರೂ ಸ್ಪಷ್ಟಪಡಿಸಿದ್ದರು. ಮಾಲಾಶ್ರೀ ಅವರನ್ನು ನೋಡಿದಾಗ ಅವರು ಮಾಡಿದ ಪೊಲೀಸ್​ ಪಾತ್ರ ಮಾಡಬೇಕು ಎಂದು ಆಸೆ ಇತ್ತು. ಇದೀಗ  ನೆರವೇರಿದೆ ಎಂದು ತನಿಷಾ ಸಂದರ್ಶನವೊಂದರಲ್ಲಿ ತಿಳಿಸಿದ್ದರು.

ಇನ್ನು ಪ್ರಮುಖವಾಗಿ ಈ ಚಿತ್ರದ ಡೈಲಾಗ್​ ಹೇಳುವಾಗ ತನಿಷಾ ಎಡವಟ್ಟು ಮಾಡಿದ್ದು, ಅದರ ತುಣುಕು ರೀಲ್ಸ್​ ರೂಪದಲ್ಲಿ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ಇದರಲ್ಲಿ ಮೊದಲಿಗೆ ನಟಿ, ನಮ್ಮ ಪೆನ್​ಡ್ರೈವ್​ ಸೆಟ್​ಗೆ ಬಂದಿದ್ದಕ್ಕೆ ನಿಮಗೆಲ್ಲರಿಗೂ ಧನ್ಯವಾದ ಎಂದಿದ್ದಾರೆ. ನಂತರ ಚಿತ್ರದ ಡೈಲಾಗ್​ ಹೇಳಲು ಮುಂದಾದರು. ನಿಮಗೆಲ್ಲಾ ಧನ್ಯವಾದ ಹೇಳ್ತಾ ಎಸಿಪಿ… ಮುಂದೆ ಚಿತ್ರದಲ್ಲಿ ತಮ್ಮ ಹೆಸರು ನೆನಪಾಗದೇ ಥೋ ಥೋ ಥೋ ಹೋಯ್ತದು ಎಂದಿದ್ದಾರೆ. ಇದಷ್ಟೇ ವಿಡಿಯೋ ಈಗ ಸಕತ್​ ಸೌಂಡ್​ ಮಾಡುತ್ತಿದೆ. ಎಸ್​ವಿಎನ್​ ಈ ವಿಡಿಯೋ ಹಂಚಿಕೊಂಡಿದೆ.

ಈ ಚಿತ್ರದಲ್ಲಿ ರಾಧಿಕಾ ರಾಮ್, ಸಂಜನಾ ನಾಯ್ಡು, ಅರ್ಚನಾ, ರೇಣುಕಾ, ಗೀತಾ, ಭಾಗ್ಯ, ಮತ್ತು ಗೀತಾ ಪ್ರಿಯಾ ಸೇರಿದಂತೆ ಹಲವರು ನಟಿಸಿದ್ದಾರೆ. ನಾಗೇಂದ್ರ ಪ್ರಸಾದ್ ಸಂಗೀತ ಸಂಯೋಜನೆ ಮತ್ತು ಸಾಹಿತ್ಯವನ್ನು ಬರೆದಿದ್ದಾರೆ.

ಇದನ್ನೂ ಓದಿ : ಸಿಸಿಬಿ ಮುಚ್ಚಿದ್ರೆ ಬೆಂಗಳೂರು ಸೇಫ್​ ಎಂದಿದ್ದ ಭಾಸ್ಕರ್​ ರಾವ್ ಆರೋಪಕ್ಕೆ ಪರಮೇಶ್ವರ್​ ತಿರುಗೇಟು..!

Leave a Comment

DG Ad

RELATED LATEST NEWS

Top Headlines

4 ಅಂತಸ್ತಿನ ಕಟ್ಟಡ ಕುಸಿತ – ಕೂದಲೆಳೆ ಅಂತರದಲ್ಲಿ ಪಾರಾದ ತಾಯಿ, ಮಗು..!

ನಾಲ್ಕು ಅಂತಸ್ತಿನ ಕಟ್ಟಡ ಕುಸಿದು ತಾಯಿ ಮಗು ಪ್ರಾಣಾಪಾಯದಿಂದ ಪಾರಾಗಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಆಘಾತಕಾರಿ ಘಟನೆಯ ಸಂಪೂರ್ಣ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವೀಡಿಯೊದಲ್ಲಿ

Live Cricket

Add Your Heading Text Here