Download Our App

Follow us

Home » ಅಪರಾಧ » ಕಲಬುರಗಿಯ ಹನಿಟ್ರ್ಯಾಪ್‌, ಅತ್ಯಾಚಾರ ಕೇಸ್​​ – ಪ್ರಮುಖ ಆರೋಪಿ ಅರೆಸ್ಟ್‌..!

ಕಲಬುರಗಿಯ ಹನಿಟ್ರ್ಯಾಪ್‌, ಅತ್ಯಾಚಾರ ಕೇಸ್​​ – ಪ್ರಮುಖ ಆರೋಪಿ ಅರೆಸ್ಟ್‌..!

ಕಲಬುರಗಿ : ಜಿಲ್ಲೆಯಲ್ಲಿ ಹನಿಟ್ರ್ಯಾಪ್‌ ಮತ್ತು ಅತ್ಯಾಚಾರ ಆರೋಪ ಪ್ರಕರಣದ ಪ್ರಮುಖ ಆರೋಪಿಯನ್ನು ಭಾನುವಾರ ಕಲಬುರಗಿಯ ಸ್ಟೇಷನ್ ಬಜಾರ್ ಪೊಲೀಸರು ಬಂಧಿಸಿದ್ದಾರೆ. ಪ್ರಭು ಹಿರೇಮಠ ಬಂಧಿತ ಆರೋಪಿ. ಈತ ಅಜ್ಞಾತ ಸ್ಥಳದಿಂದ ವೀಡಿಯೋ ಬಿಡುಗಡೆ ಮಾಡಿದ್ದ. ವಿಡಿಯೋನಲ್ಲಿ ಲಕ್ಷ ಲಕ್ಷ ಹಣ ವಸೂಲಿ ಬಗ್ಗೆ ಬಾಯ್ಬಿಟ್ಟಿದ್ದ. ಕೂಡಲೇ ವೀಡಿಯೋ ಬೆನ್ನುಹತ್ತಿದ ಪೊಲೀಸರು ಪ್ರಮುಖ ಆರೋಪಿಯನ್ನು ಬಂಧಿಸುವಲ್ಲಿ ಇದೀಗ ಯಶಸ್ವಿಯಾಗಿದ್ದಾರೆ.

ಪ್ರಕರಣದ ಹಿನ್ನೆಲೆ : ಜಿಲ್ಲೆಯಲ್ಲಿ ಹನಿಟ್ರ್ಯಾಪ್‌ ಗ್ಯಾಂಗ್ ಸಕ್ರಿಯವಾಗಿದ್ದು, ಗ್ಯಾಂಗ್‌ನ ಸಂತ್ರಸ್ತೆಯೇ ಪೊಲೀಸ್ ಠಾಣೆಗೆ ದೂರು ದಾಖಲಿಸಿರುವ ಘಟನೆ ಶನಿವಾರ ಬೆಳಕಿಗೆ ಬಂದಿತ್ತು. ಸರ್ಕಾರಿ ಅಧಿಕಾರಿಗಳು, ಉದ್ಯಮಿಗಳೇ ಈ ಗ್ಯಾಂಗ್‌ನ ಟಾರ್ಗೆಟ್ ಆಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಇವರನ್ನು ಪರಿಚಯ ಮಾಡಿಕೊಂಡು ನಂತರ ಸಲುಗೆ ಬೆಳೆಸುತ್ತಾರೆ. ಅದಾದ ಬಳಿಕ ಮಂಚಕ್ಕೆ ಕರೆದು ವೀಡಿಯೋ ಮಾಡಲಾಗುತ್ತಿತ್ತು. ನಂತರ ಗ್ಯಾಂಗ್ ಅವರಿಂದ ಲಕ್ಷ ಲಕ್ಷ ಹಣ ವಸೂಲಿ ಮಾಡುತ್ತಿತ್ತು. ಈ ವಿಚಾರವನ್ನು ಖುದ್ದು ಹನಿಟ್ರ‍್ಯಾಪ್ ಸಂತ್ರಸ್ತೆಯರು ಬಿಚ್ಚಿಟ್ಟಿದ್ದರು. ಸಂಘಟನೆ ಹೆಸರಲ್ಲಿ ಸಾಮಾಜಿಕ ಜಾಲತಾಣದ ಮೂಲಕ ಹುಡುಗಿಯರ ಪರಿಚಯ ಮಾಡಿಕೊಂಡು ಹನಿಟ್ರ್ಯಾಪ್‌ಗೆ ಬಳಸಿಕೊಳ್ಳಲಾಗುತ್ತಿದೆ. ಹುಡುಗಿಯರ ಆರ್ಥಿಕ ಪರಿಸ್ಥಿತಿ ನೋಡಿಕೊಂಡು ಆಟವಾಡುತ್ತಿದ್ದಾರೆ. 10ಕ್ಕೂ ಹೆಚ್ಚು ಹುಡುಗಿಯರನ್ನಿಟ್ಟುಕೊಂಡು ಹನಿಟ್ರ‍್ಯಾಪ್ ನಡೆಯುತ್ತಿದ್ದು, ಇದರಿಂದಾಗಿ ಹತ್ತಾರು ಕುಟುಂಬಗಳು ಬಲಿಯಾಗಿವೆ.

ಕಲಬುರಗಿ ಮೂಲದ ಉದ್ಯಮಿಯಿಂದ 40 ಲಕ್ಷ ರೂ. ಹಣವನ್ನು ವಸೂಲಿ ಮಾಡಿಸಿಕೊಂಡಿದ್ದಾರೆ. ಮುಂಬೈ ಮೂಲದ ಯುವತಿಯ ಮೂಲಕ ಉದ್ಯಮಿಯನ್ನು ಬಲೆಗೆ ಬೀಳಿಸಿಕೊಂಡು ಸಾಮಾಜಿಕ ಜಾಲತಾಣ ಮೂಲಕ ಉದ್ಯಮಿ ಹಾಗೂ ಯುವತಿಯನ್ನು ಪರಿಚಯ ಮಾಡಿಸಿದ್ದರು. ಅದಾದ ಬಳಿಕ ಲಾಡ್ಜ್‌ಗೆ ಕರೆಸಿ ರಾಸಲೀಲೆ ವಿಡಿಯೋ ಮಾಡಿಟ್ಟಿದ್ದರು. ಹನಿಟ್ರ‍್ಯಾಪ್‌ಗೆ ಹೆದರಿ ಈಗಾಗಲೇ ಉದ್ಯಮಿ 40 ಲಕ್ಷ ರೂ. ನೀಡಿದ್ದಾರೆ. ಆ ಗ್ಯಾಂಗ್ ಸದಸ್ಯರು ಬಲವಂತವಾಗಿ ಹನಿಟ್ರ‍್ಯಾಪ್ ಯುವತಿಯರ ಜೊತೆ ಅತ್ಯಾಚಾರ ನಡೆಸುತ್ತಿದ್ದಾರೆ. ಸದ್ಯ ಸಂತ್ರಸ್ಥೆಯಿಂದಲೇ ಗ್ಯಾಂಗ್ ವಿರುದ್ಧ ದೂರು ದಾಖಲಾಗಿದ್ದು, ಹನಿಟ್ರ್ಯಾಪ್‌ಗೆ ಸಂಬಂಧಿಸಿದಂತೆ ರಾಜು ಲೆಂಗಟಿ, ಪ್ರಭು, ಶ್ರೀಕಾಂತ್ ರೆಡ್ಡಿ, ಮಂಜು ಭಂಡಾರಿ ಸೇರಿದಂತೆ 8 ಜನರ ವಿರುದ್ಧ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿತ್ತು.

ಇದನ್ನೂ ಓದಿ : ಗಣೇಶ ವಿಸರ್ಜನೆ ಜೋಶ್‌ನಲ್ಲಿ ಮಹಾ ಯಡವಟ್ಟು.. ಗಣಪನ ಮೂರ್ತಿ ಜೊತೆ 65 ಗ್ರಾಂ ಚಿನ್ನದ ಸರವೂ ನೀರಿಗೆ..!

Leave a Comment

DG Ad

RELATED LATEST NEWS

Top Headlines

ಹೊರನಾಡು ಅನ್ನಪೂರ್ಣೇಶ್ವರಿ ದೇಗುಲದಲ್ಲಿ ಡ್ರೆಸ್ ಕೋಡ್ ಜಾರಿ – ದೇವರ ದರ್ಶನಕ್ಕೆ ಸಾಂಪ್ರದಾಯಿಕ ಉಡುಗೆ ಕಡ್ಡಾಯ..!

ಚಿಕ್ಕಮಗಳೂರು : ಇತ್ತೀಚೆಗೆ ಶೃಂಗೇರಿಯ ಶ್ರೀ ಶಾರದಾಂಬೆ ಸನ್ನಿಧಾನದಲ್ಲಿ ಹಾಗೂ ಸುತ್ತಲಿನ ದೇವಸ್ಥಾನಗಳಲ್ಲಿ ಡ್ರೆಸ್ ಕೋಡ್ ಜಾರಿಯಾಗಿತ್ತು. ಇದೀಗ ರಾಜ್ಯದ ಪ್ರಸಿದ್ಧ ಯಾತ್ರಾ ಸ್ಥಳವಾದ ಹೊರನಾಡು ಶ್ರೀ

Live Cricket

Add Your Heading Text Here