ಬೆಂಗಳೂರು : ಬೆಂಗಳೂರಿನಲ್ಲಿ ಗಣೇಶನ ವಿಸರ್ಜನೆ ಜೋಶ್‌ನಲ್ಲಿ ಯುವಕರು ಯಡವಟ್ಟುವೊಂದನ್ನ ಮಾಡ್ಕೊಂಡಿರುವ ಘಟನೆ ಮಾಗಡಿ ರೋಡ್‌ನ ದಾಸರಹಳ್ಳಿಯ ಬಿ.ಆರ್.ಐ ಕಾಲೋನಿಯಲ್ಲಿ ನಡೆದಿದೆ. ಬಿ.ಆರ್.ಐ ಕಾಲೋನಿಯಲ್ಲಿ ಯುವಕರು ಗಣೇಶನನ್ನು ಪ್ರತಿಷ್ಠಾಪನೆ ಮಾಡಿ ಗಣೇಶನಿಗೆ 65 ಗ್ರಾಂ ಚಿನ್ನದ ಸರ ಹಾಕಿ ಪೂಜೆ ಮಾಡಿದ್ರು. ಆದ್ರೆ, ಸಂಜೆ ವೇಳೆ ಗಣೇಶ ವಿರ್ಸಜನೆ ವೇಳೆಯಲ್ಲಿ ಸರ ಸಮೇತವಾಗಿ ಗಣೇಶನ ಮೂರ್ತಿ ವಿರ್ಸಜನೆ ಮಾಡಿ, ಯುವಕರು ಮನೆಗೆ ತೆರಳಿದ ಪ್ರಸಂಗ ಜರುಗಿದೆ.
ಗಣೇಶ ವಿಸರ್ಜನೆಗಾಗಿ ಬಿಬಿಎಂಪಿಯಿಂದ ಟ್ರಕ್ ನೀರಿನ ವ್ಯವಸ್ಥೆ ಮಾಡಿತ್ತು. ಹೀಗಾಗಿ ಯುವಕರು ಸಂಜೆ 7 ಗಂಟೆ ಸುಮಾರಿಗೆ ಟ್ರಕ್ ಬಳಿ ಹೋಗಿ 65 ಗ್ರಾಂ ಚಿನ್ನದ ಸರದ ಸಮೇತ ಗಣೇಶ ಮೂರ್ತಿ ವಿಸರ್ಜನೆ ಮಾಡಿ ಬಂದಿದ್ದಾರೆ. ರಾತ್ರಿ 10 ಗಂಟೆಯ ಸುಮಾರಿಗೆ ಚಿನ್ನದ ಸರದ ನೆನಪಾಗಿ ಎಲ್ಲರೂ ಗಾಬರಿಯಾಗಿದ್ದಾರೆ.
ತಕ್ಷಣ ಹೋಗಿ ಬಿಬಿಎಂಪಿ ನಿಲ್ಲಿಸಿದ ಟ್ರಕ್ನ ಚಾಲಕ ಹಾಗೂ ಬಿಬಿಎಂಪಿ ಸಿಬ್ಬಂದಿಗೆ ಈ ವಿಚಾರ ತಿಳಿಸಿದ್ದಾರೆ. ವಿಚಾರ ತಿಳಿಸಿದ ಬಳಿಕ ಬಿಬಿಎಂಪಿ ಸಿಂಬಂದ್ದಿಗಳು ನೀರನ್ನ ಸಂಪೂರ್ಣ ಖಾಲಿ ಮಾಡಿ ಬಳಿಕ ನೀರಿನಲ್ಲಿ ಕರಗಿದ ಮೂರ್ತಿಯ ಮಣ್ಣಿನಲ್ಲಿ ರಾತ್ರಿಯೆಲ್ಲ ಸರಕ್ಕಾಗಿ ಹುಡುಕಾಡಿದ್ದಾರೆ. ಬೆಳಗಿನ ಜಾವ ಚಿನ್ನದ ಸರ ಸಿಕ್ಕಿದ್ದು, ಸದ್ಯ ಎಲ್ಲರೂ ನಿಟ್ಟುಸಿರು ಬಿಟ್ಟಿದ್ದಾರೆ. 4 ಲಕ್ಷ ಮೌಲ್ಯದ ಚಿನ್ನದ ಸರ ಹುಡುಕಿಕೊಟ್ಟ ಎಲ್ಲರಿಗೂ ವಿಶೇಷ ಧನ್ಯವಾದ ತಿಳಿಸಿದ್ದಾರೆ.
ಇದನ್ನೂ ಓದಿ : ಮೋಹಕ ತಾರೆ ರಮ್ಯಾಗೆ ಕೂಡಿ ಬಂತಾ ಕಂಕಣ ಭಾಗ್ಯ? ಹುಡುಗ ಯಾರು?