ಬೆಂಗಳೂರು : ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿರುವ ನಟ ದರ್ಶನ್ ಪ್ರಿಸನ್ ಕಾಲ್ ಸಿಸ್ಟಮ್ ಅಡಿ ಲ್ಯಾಂಡ್ಲೈನ್ ಮೂಲಕ ಪತ್ನಿ ವಿಜಯಲಕ್ಷ್ಮಿ ಜೊತೆ ಮಾತನಾಡಿದ್ದಾರೆ. ಚಾರ್ಜ್ಶೀಟ್ ಸಲ್ಲಿಕೆ ಬೆನ್ನಲ್ಲೇ ದರ್ಶನ್ ಪತ್ನಿ ಜೊತೆ ನಿನ್ನೆ 2:30ಕ್ಕೆ ಮಾತನಾಡಿದ್ದಾರೆ.
ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿ ಜೈಲಿಗೆ ಸ್ಥಳಾಂತರ ಮಾಡಲಾಗಿರುವ ನಟ ದರ್ಶನ್ ಅವರು ಪತ್ನಿ ವಿಜಯಲಕ್ಷ್ಮಿ ಜೊತೆ ಪ್ರಕರಣ ಸಂಬಂಧ ಮಾತನಾಡಿದ್ದಾರೆ. ಫೋನ್ನಲ್ಲಿ ಚಾರ್ಜ್ಶೀಟ್ ಕುರಿತಂತೆ ದರ್ಶನ್ ಮಾಹಿತಿ ಪಡೆದುಕೊಂಡಿದ್ದಾರೆ.
ಇನ್ನು ಇದೇ ವೇಳೆ ವಿಜಯಲಕ್ಷ್ಮಿ ದರ್ಶನ್ ಅವರ ಆರೋಗ್ಯವನ್ನು ವಿಚಾರಿಸಿದ್ದಾರೆ. ಪತಿ-ಪತ್ನಿ ಇಬ್ಬರು 5 ನಿಮಿಷ ಕಾಲ ಮಾತನಾಡಿದ್ದಾರೆ. ಈ ಇಬ್ಬರು ಮಾತನಾಡಿದ್ದ ಪೋನ್ ಸಂಭಾಷಣೆಯನ್ನು ಜೈಲಾಧಿಕಾರಿಗಳು ರೆಕಾರ್ಡ್ ಮಾಡಿಕೊಂಡಿದ್ದಾರೆ. ದರ್ಶನ್ ಅವರು ಕೇಳಿದ ಮೇಲೆ ಸುಮಾರು 3 ಗಂಟೆ ತಡವಾಗಿ ಫೋನ್ ಮಾಡಲು ಅಧಿಕಾರಿಗಳು ಅನುಮತಿ ಕೊಟ್ಟಿದ್ದಾರೆ.
ಇದನ್ನೂ ಓದಿ : ಕುಡಿದ ಮತ್ತಿನಲ್ಲಿ ಇಬ್ಬರ ನಡುವೆ ಗಲಾಟೆ – ಕತ್ತಿಯಿಂದ ಕಡಿದು ಓರ್ವನ ಕೊ*ಲೆ..!