ಬೆಂಗಳೂರು : ಮಾಲಿವುಡ್ ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಬಗ್ಗೆ ಜಸ್ಟೀಸ್ ಹೇಮಾ ಕಮಿಟಿ ನೀಡಿದ ವರದಿ ಬಿರುಗಾಳಿಯನ್ನೇ ಎಬ್ಬಿಸಿತ್ತು. ಮಾಲಿವುಡ್ನಲ್ಲಿ ಉದಯೋನ್ಮುಖ ನಟಿಯರು ಹಾಗೂ ಜನಪ್ರಿಯ ನಟಿಯರಿಗೆ ಕೂಡ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎನ್ನುವ ಆರೋಪ ಕೇಳಿಬರುತ್ತಲೇ ಇತ್ತು. ಈ ಆರೋಪಗಳೆಲ್ಲಾ ಸತ್ಯ ಎಂದು ಹೇಮಾ ಕಮಿಟಿ ವರದಿ ನೀಡಿತ್ತು. ಇದರ ಬೆನ್ನಲ್ಲೇ ಬಂಗಾಳಿ ಸಿನಿಮಾ ರಂಗದಲ್ಲೂ ಕಾಸ್ಟಿಂಗ್ ಕೌಚ್(ಸೆಕ್ಸ್ ಹಗರಣ)ದ ಆರೋಪ ಕೇಳಿ ಬಂದಿತ್ತು. ಇದೀಗ ಸ್ಯಾಂಡಲ್ವುಡ್ನಲ್ಲೂ ಕಾಸ್ಟಿಂಗ್ ಕೌಚ್ ಬಿರುಗಾಳಿ ಎಬ್ಬಿಸಿದೆ.
ಹೌದು, ಸ್ಯಾಂಡಲ್ವುಡ್ನಲ್ಲೂ ಸೆಕ್ಸ್ ದಂಧೆ ಆರೋಪ ಕೇಳಿ ಬಂದಿದೆ. ಇದೀಗ ಕಾಸ್ಟಿಂಗ್ ಕೌಚ್ ವಿರುದ್ಧ ಸಿಡಿದೆದ್ದ ಸ್ಯಾಂಡಲ್ವುಡ್ನ 153 ನಟ, ನಟಿಯರು ಸಿಎಂಗೆ ಪತ್ರ ಬರೆದಿದ್ದಾರೆ. ಲೈಗಿಂಕ ಕಿರುಕುಳದ ಬಗ್ಗೆ ತನಿಖೆಗೆ ಡಿಮ್ಯಾಂಡ್ ಮಾಡಿರೋದು, ಕರ್ನಾಟಕದಲ್ಲಿ ದಿಢೀರ್ ಸಂಚಲನ ಸೃಷ್ಟಿಸಿದೆ.
ಸಿಎಂ ಸಿದ್ದರಾಮ್ಯರವರಿಗೆ, ಸೂಪರ್ ಸ್ಟಾರ್ ಕಿಚ್ಚ ಸುದೀಪ್, ಮೋಹಕ ತಾರೆ ರಮ್ಯಾ, ಐಂದ್ರಿತಾ ರೈ, ಸಂಯುಕ್ತಾ ಹೆಗಡೆ, ಶ್ರದ್ಧಾ ಶ್ರೀನಾಥ್,ಸಾನ್ವಿ ಶ್ರೀವಾತ್ಸ, ಸಿಂಧು ರಾವ್, ಶೃತಿ ಹರಿಹರನ್,
ಆಶಿಕಾ ರಂಗನಾಥ್, ಕಿಶೋರ್ ಸೇರಿ ಹಲವರು ಸೇರಿ ಪತ್ರ ಬರೆದಿದ್ದಾರೆ. ಇನ್ನು ಹೋರಾಟದ ಪರ ದಿನೇಶ್ ಅಮೀನಮಟ್ಟು, ಭಾರತಿ ಹೆಗಡೆ ಸೇರಿ ಹಲವು ಹಿರಿಯ ಪತ್ರಕರ್ತರು ಕೂಡ ಧ್ವನಿ ಎತ್ತಿದ್ದಾರೆ.
ಇನ್ನು ಲೈಗಿಂಕ ಕಿರುಕುಳದ ಬಗ್ಗೆ ತನಿಖೆಗೆ ಡಿಮ್ಯಾಂಡ್ ಮಾಡಿದ ನಟ, ನಟಿಯರು ಹಾಗೂ ನಿದೇರ್ಶಕರು ಹೇಮಾ ಆಯೋಗದ ಮಾದರಿಯಲ್ಲೇ ಇಲ್ಲೂ ಆಯೋಗ ರಚಿಸಿ. ಸ್ಯಾಂಡಲ್ವುಡ್ನಲ್ಲೂ ಮಹಿಳೆಯರಿಗೆ ಸುರಕ್ಷಿತ ವಾತಾವರಣ ಕಲ್ಪಸಿ. ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿ ರಚಿಸಿ ಎಂದು ಸರ್ಕಾರಕ್ಕೆ ಸ್ಯಾಂಡಲ್ವುಡ್ ಸ್ಟಾರ್ಗಳು ಮನವಿ ಮಾಡಿದ್ದಾರೆ.
ಇದೀಗ ತನಿಖೆಗೆ ಡಿಮ್ಯಾಂಡ್ ಮಾಡಿರೋದು ಕರ್ನಾಟಕದಲ್ಲಿ ದಿಢೀರ್ ಸಂಚಲನ ಸೃಷ್ಟಿಸಿದೆ. ಕನ್ನಡ ಫಿಲಂ ಇಂಡಸ್ಟ್ರಿಯಲ್ಲಿ ನಿಜಕ್ಕೂ ಏನ್ ನಡೀತಾ ಇದೆ? ಚಿತ್ರರಂಗದಲ್ಲಿ ನಟಿಯರನ್ನು ಬಳಸಿಕೊಳ್ತಿರೋದು ಯಾರು? ಕರ್ನಾಟಕದಲ್ಲಿ ಕಾಸ್ಟಿಂಗ್ ಕೌಚ್ಗೆ ಬಲಿಯಾದ ನಟಿಯರು ಯಾರು? ಪ್ರೊಡ್ಯೂಸರ್ಗಳು, ಡೈರೆಕ್ಟರ್ಗಳು ನಟಿಯರನ್ನ ಬಳಸಿಕೊಂಡ್ರಾ? ಯಾರು ಆ ಪ್ರೊಡ್ಯೂಸರ್ಗಳು? ಯಾರು ಆ ಡೈರೆಕ್ಟರ್ಗಳು ಎಂಬ ಪ್ರಶ್ನೆಗಳು ಹುಟ್ಟಿಕೊಂಡಿದೆ.
ಇದನ್ನೂ ಓದಿ : ಕಲರ್ಸ್ ಕನ್ನಡದಲ್ಲಿ ಬರ್ತಿದೆ ಹೊಸ ಧಾರಾವಾಹಿ ‘ದೃಷ್ಟಿಬೊಟ್ಟು’..!