Download Our App

Follow us

Home » ಸಿನಿಮಾ » ಸ್ಯಾಂಡಲ್​ವುಡ್​​ನಲ್ಲಿ ಕಾಸ್ಟಿಂಗ್​ ಕೌಚ್​ ಬಿರುಗಾಳಿ – ಸಿಎಂಗೆ ಪತ್ರ ಬರೆದ 153 ನಟ, ನಟಿಯರು..!

ಸ್ಯಾಂಡಲ್​ವುಡ್​​ನಲ್ಲಿ ಕಾಸ್ಟಿಂಗ್​ ಕೌಚ್​ ಬಿರುಗಾಳಿ – ಸಿಎಂಗೆ ಪತ್ರ ಬರೆದ 153 ನಟ, ನಟಿಯರು..!

ಬೆಂಗಳೂರು : ಮಾಲಿವುಡ್​ ಚಿತ್ರರಂಗದಲ್ಲಿ ಕಾಸ್ಟಿಂಗ್​​ ಕೌಚ್ ಬಗ್ಗೆ ಜಸ್ಟೀಸ್ ಹೇಮಾ ಕಮಿಟಿ ನೀಡಿದ ವರದಿ ಬಿರುಗಾಳಿಯನ್ನೇ ಎಬ್ಬಿಸಿತ್ತು. ಮಾಲಿವುಡ್‌ನಲ್ಲಿ ಉದಯೋನ್ಮುಖ ನಟಿಯರು ಹಾಗೂ ಜನಪ್ರಿಯ ನಟಿಯರಿಗೆ ಕೂಡ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎನ್ನುವ ಆರೋಪ ಕೇಳಿಬರುತ್ತಲೇ ಇತ್ತು. ಈ ಆರೋಪಗಳೆಲ್ಲಾ ಸತ್ಯ ಎಂದು ಹೇಮಾ ಕಮಿಟಿ ವರದಿ ನೀಡಿತ್ತು. ಇದರ ಬೆನ್ನಲ್ಲೇ  ಬಂಗಾಳಿ ಸಿನಿಮಾ ರಂಗದಲ್ಲೂ ಕಾಸ್ಟಿಂಗ್​​ ಕೌಚ್​(ಸೆಕ್ಸ್​ ಹಗರಣ)ದ ಆರೋಪ ಕೇಳಿ ಬಂದಿತ್ತು. ಇದೀಗ ಸ್ಯಾಂಡಲ್​​ವುಡ್​​ನಲ್ಲೂ ಕಾಸ್ಟಿಂಗ್​​ ಕೌಚ್ ಬಿರುಗಾಳಿ ಎಬ್ಬಿಸಿದೆ.

ಹೌದು, ಸ್ಯಾಂಡಲ್​​ವುಡ್​​ನಲ್ಲೂ ಸೆಕ್ಸ್​​ ದಂಧೆ ಆರೋಪ ಕೇಳಿ ಬಂದಿದೆ. ಇದೀಗ ಕಾಸ್ಟಿಂಗ್​ ಕೌಚ್​ ವಿರುದ್ಧ ಸಿಡಿದೆದ್ದ ಸ್ಯಾಂಡಲ್​​​ವುಡ್​​ನ 153 ನಟ, ನಟಿಯರು ಸಿಎಂಗೆ ಪತ್ರ ಬರೆದಿದ್ದಾರೆ. ಲೈಗಿಂಕ ಕಿರುಕುಳದ ಬಗ್ಗೆ ತನಿಖೆಗೆ ಡಿಮ್ಯಾಂಡ್​ ಮಾಡಿರೋದು, ಕರ್ನಾಟಕದಲ್ಲಿ ದಿಢೀರ್​ ಸಂಚಲನ ಸೃಷ್ಟಿಸಿದೆ.

ಸಿಎಂ ಸಿದ್ದರಾಮ್ಯರವರಿಗೆ, ಸೂಪರ್​ ಸ್ಟಾರ್​ ಕಿಚ್ಚ ಸುದೀಪ್​, ಮೋಹಕ ತಾರೆ ರಮ್ಯಾ, ಐಂದ್ರಿತಾ ರೈ, ಸಂಯುಕ್ತಾ ಹೆಗಡೆ, ಶ್ರದ್ಧಾ ಶ್ರೀನಾಥ್​​,ಸಾನ್ವಿ ಶ್ರೀವಾತ್ಸ, ಸಿಂಧು ರಾವ್​, ಶೃತಿ ಹರಿಹರನ್​,
ಆಶಿಕಾ ರಂಗನಾಥ್​​, ಕಿಶೋರ್ ಸೇರಿ ಹಲವರು ಸೇರಿ ಪತ್ರ ಬರೆದಿದ್ದಾರೆ. ಇನ್ನು ಹೋರಾಟದ ಪರ ದಿನೇಶ್​​​ ಅಮೀನಮಟ್ಟು, ಭಾರತಿ ಹೆಗಡೆ ಸೇರಿ ಹಲವು ಹಿರಿಯ ಪತ್ರಕರ್ತರು ಕೂಡ ಧ್ವನಿ ಎತ್ತಿದ್ದಾರೆ.

ಇನ್ನು ಲೈಗಿಂಕ ಕಿರುಕುಳದ ಬಗ್ಗೆ ತನಿಖೆಗೆ ಡಿಮ್ಯಾಂಡ್ ಮಾಡಿದ ನಟ, ನಟಿಯರು ಹಾಗೂ ನಿದೇರ್ಶಕರು ಹೇಮಾ ಆಯೋಗದ ಮಾದರಿಯಲ್ಲೇ ಇಲ್ಲೂ ಆಯೋಗ ರಚಿಸಿ. ಸ್ಯಾಂಡಲ್​​ವುಡ್​​​ನಲ್ಲೂ ಮಹಿಳೆಯರಿಗೆ ಸುರಕ್ಷಿತ ವಾತಾವರಣ ಕಲ್ಪಸಿ. ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿ ರಚಿಸಿ ಎಂದು  ಸರ್ಕಾರಕ್ಕೆ ಸ್ಯಾಂಡಲ್​​ವುಡ್​​ ಸ್ಟಾರ್​​ಗಳು ಮನವಿ ಮಾಡಿದ್ದಾರೆ.

ಇದೀಗ ತನಿಖೆಗೆ ಡಿಮ್ಯಾಂಡ್ ಮಾಡಿರೋದು ಕರ್ನಾಟಕದಲ್ಲಿ ದಿಢೀರ್​ ಸಂಚಲನ ಸೃಷ್ಟಿಸಿದೆ. ಕನ್ನಡ ಫಿಲಂ ಇಂಡಸ್ಟ್ರಿಯಲ್ಲಿ ನಿಜಕ್ಕೂ ಏನ್​ ನಡೀತಾ ಇದೆ? ಚಿತ್ರರಂಗದಲ್ಲಿ ನಟಿಯರನ್ನು ಬಳಸಿಕೊಳ್ತಿರೋದು ಯಾರು? ಕರ್ನಾಟಕದಲ್ಲಿ ಕಾಸ್ಟಿಂಗ್ ಕೌಚ್​​ಗೆ ಬಲಿಯಾದ ನಟಿಯರು ಯಾರು? ಪ್ರೊಡ್ಯೂಸರ್​ಗಳು, ಡೈರೆಕ್ಟರ್​ಗಳು ನಟಿಯರನ್ನ ಬಳಸಿಕೊಂಡ್ರಾ? ಯಾರು ಆ ಪ್ರೊಡ್ಯೂಸರ್​ಗಳು? ಯಾರು ಆ ಡೈರೆಕ್ಟರ್​ಗಳು ಎಂಬ ಪ್ರಶ್ನೆಗಳು ಹುಟ್ಟಿಕೊಂಡಿದೆ.

ಇದನ್ನೂ ಓದಿ : ಕಲರ್ಸ್ ಕನ್ನಡದಲ್ಲಿ ಬರ್ತಿದೆ ಹೊಸ ಧಾರಾವಾಹಿ ‘ದೃಷ್ಟಿಬೊಟ್ಟು’..!

Leave a Comment

DG Ad

RELATED LATEST NEWS

Top Headlines

ಬಿಬಿಎಂಪಿ ವ್ಯಾಪ್ತಿಯಲ್ಲಿ ಗುಂಡಿ ಮುಚ್ಚಲು ಡೆಡ್​ಲೈನ್​ ಕೊಟ್ಟ ಸಿಎಂ ಸಿದ್ದು..!

ಬೆಂಗಳೂರು : ಮುಡಾ ಹಗರಣ ಆರೋಪದ ಅರ್ಜಿ ವಿಚಾರಣೆಯ ನಡುವೆಯೂ ಸಿಎಂ ಸಿದ್ಧರಾಮಯ್ಯ ಅವರು ನಿನ್ನೆ ಬೆಂಗಳೂರು ನಗರದ ರಸ್ತೆ ಗುಂಡಿಗಳ ನಿರ್ಮೂಲನೆ, ರಸ್ತೆ ಅಭಿವೃದ್ಧಿ ಮತ್ತು

Live Cricket

Add Your Heading Text Here