ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ನಟ ದರ್ಶನ್, ಪವಿತ್ರಾ ಗೌಡ ಸೇರಿ 17 ಜನ ಆರೋಪಿಗಳು ಜೈಲು ಸೇರಿದ್ದಾರೆ. ಈ ಪ್ರಕರಣದ ತನಿಖೆ ಈಗಾಗಲೇ ಮುಕ್ತಾಯದ ಹಂತದಲ್ಲಿದ್ದು, ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಲು ಸಿದ್ಧತೆ ಮಾಡಿಕೊಂಡಿದ್ದು, ನಾಳೆಯೇ ಪೊಲೀಸರು ಕೋರ್ಟ್ಗೆ ದರ್ಶನ್ ಕೇಸ್ ಚಾರ್ಜ್ಶೀಟ್ ಸಲ್ಲಿಕೆ ಮಾಡಲಿದ್ದಾರೆ.
ರೇಣುಕಾಸ್ವಾಮಿ ಕೊಲೆಯ ಇಂಚಿಂಚೂ ಡಿಟೇಲ್ಸ್ 24ನೇ ACMM ಕೋರ್ಟ್ಗೆ ಸಲ್ಲಿಕೆಯಾಗಲಿದೆ. ಕಾಮಾಕ್ಷಿಪಾಳ್ಯ ಪೊಲೀಸರು 4800 ಪುಟಗಳ ಚಾರ್ಜ್ಶೀಟ್ ರೆಡಿ ಮಾಡಿದ್ದು, SPP ಪ್ರಸನ್ನಕುಮಾರ್ ಮುಖಾಂತರ ಚಾರ್ಜ್ ಶೀಟ್ ಸಲ್ಲಿಕೆಯಾಗಲಿದೆ. ನಟ ದರ್ಶನ್, ಪವಿತ್ರಗೌಡ ಸೇರಿ 17 ಆರೋಪಿಗಳು, 200ಕ್ಕೂ ಹೆಚ್ಚು ಸಾಕ್ಷ್ಯಗಳು, 66ಕ್ಕೂ ಅಧಿಕ ಎವಿಡಿಯನ್ಸ್ ಸಂಗ್ರಹವಾಗಿದ್ದು, SPP ಸಲಹೆ ಮೇರೆಗೆ ಪೊಲೀಸರು ಒಂದಷ್ಟು ಬದಲಾವಣೆ ಮಾಡಿದ್ದಾರೆ.
ಇಂದು ಸ್ಕೃಟಿನಿ ಮಾಡಿ ನಾಳೆ ಕೋರ್ಟ್ಗೆ ಚಾರ್ಜ್ಶೀಟ್ ಸಲ್ಲಿಕೆ ಮಾಡಲಿದ್ದಾರೆ. ಚಾರ್ಜ್ಶೀಟ್ಲ್ಲಿ ಹೈದ್ರಾಬಾದ್, ಬೆಂಗಳೂರು FSL ರಿಪೋರ್ಟ್ ಕೂಡ ಇದೆ. ದರ್ಶನ್, ಪವಿತ್ರಾ ಸೇರಿ 14 ಮಂದಿ ವಿರುದ್ಧ ಕೊಲೆ, ಕಿಡ್ನಾಪ್ ಆರೋಪ, ಉಳಿದ ಮೂವರ ವಿರುದ್ಧ ಸಾಕ್ಷ್ಯ ನಾಶ ಮಾಡಿದ ಆರೋಪವಿದೆ. ಪೊಲೀಸರು ಪ್ರತಿಯೊಬ್ಬ ಆರೋಪಿಯ ಪಾತ್ರ ಉಲ್ಲೇಖ ಮಾಡಿದ್ದು, ಸಾಂದರ್ಭಿಕ ಸಾಕ್ಷ್ಯ, ಪ್ರತ್ಯಕ್ಷ ಸಾಕ್ಷ್ಯ, ವೈಜ್ಞಾನಿಕ ಸಾಕ್ಷ್ಯ ವಿಶ್ಲೇಷಣೆ ಮಾಡಲಾಗಿದೆ.
ದರ್ಶನ್, ಪವಿತ್ರಾಗೌಡ, ಪಟ್ಟಣಗೆರೆ ವಿನಯ್, ಲಕ್ಷ್ಮಣ್, ಜಗದೀಶ್, ಧನರಾಜ್, ಪವನ್, ಚಿತ್ರದುರ್ಗ ದರ್ಶನ್ ಅಭಿಮಾನಿ ಸಂಘದ ರಾಘವೇಂದ್ರ, ನಂದೀಶ್, ಪ್ರದೂಷ್, ನಾಗರಾಜ್, ದೀಪಕ್, ರವಿಶಂಕರ್, ಅನುಕುಮಾರ್ ಸೇರಿ 14 ಮಂದಿ ಕಿಡ್ನಾಪ್, ಕೊಲೆಯಲ್ಲಿ ಭಾಗಿಯಾಗಿದ್ದಾರೆ. ಕೇಶವಮೂರ್ತಿ, ಕಾರ್ತಿಕ್, ನಿಖಿಲ್ನಾಯ್ಕ್ ಸಾಕ್ಷ್ಯ ನಾಶ ಮಾಡಿದ್ದಾರೆ.
ಇದನ್ನೂ ಓದಿ : ನಟ ದರ್ಶನ್ ರಾಜಾತಿಥ್ಯ ವಿವಾದ ಬೆನ್ನಲ್ಲೇ ಕಾರಾಗೃಹದಲ್ಲಿ ಬಿಡಿ ಸಿಗರೇಟ್ ಸಂಪೂರ್ಣ ಬಂದ್..!