ಬೆಂಗಳೂರು : ಪರಪ್ಪನ ಅಗ್ರಹಾರದಲ್ಲಿ ನಟ ದರ್ಶನ್ ರಾಜಾತಿಥ್ಯ ನೀಡಿದ ಪ್ರಕರಣ ವಿವಾದ ಸೃಷ್ಟಿಸಿದ್ದ ಬೆನ್ನಲ್ಲೇ ಕಾರಾಗೃಹದಲ್ಲಿ ಬಿಡಿ ಸಿಗರೇಟ್ನ ಸಂಪೂರ್ಣ ಬಂದ್ ಮಾಡಲಾಗಿದೆ. ಪರಪ್ಪನ ಅಗ್ರಹಾರದಲ್ಲಿ ದರ್ಶನ್ ಸಿಗರೇಟ್ ಸೇದುತ್ತಾ ವಿಲ್ಸನ್ ಗಾರ್ಡ್ನ್ ನಾಗನ ಜೊತೆ ಇರುವ ಬಿಂದಾಸ್ ಫೋಟೋ ವೈರಲ್ ಆಗುತ್ತಿದ್ದಂತೆ ಜೈಲಿನಲ್ಲಿರುವ ಇತರ ಕೈದಿಗಳು ನಮಗೂ ಬೀಡಿ, ಸಿಗರೇಟ್ ನೀಡುವಂತೆ ಜೈಲು ಸಿಬ್ಬಂದಿಗಳ ಮೇಲೆ ದುಂಬಾಲು ಬೀಳುತ್ತಿದ್ದಾರೆ.
ನಿನ್ನೆ ಸಂಜೆ ಕೈದಿಗಳನ್ನು ಬ್ಯಾರಕ್ ಒಳಗಡೆ ಹೋಗಲು ಸಿಬ್ಬಂದಿ ತಿಳಿಸಿದ ಸಂದರ್ಭದಲ್ಲಿ ಕಲ್ಲು, ಮೊಟ್ಟೆಯಿಂದ ಸಿಬ್ಬಂದಿ ಮೇಲೆ ದಾಳಿ ನಡೆಸಿದ್ದಾರೆ. ಸಿಗರೇಟು ಬೀಡಿ ಕೊಟ್ಟರೆ ಮಾತ್ರ ಊಟ ಮಾಡ್ತೀವಿ ಎಂದು ಪಟ್ಟು ಹಿಡಿದಿದ್ದಾರೆ. ಇಂದು ಸಹ ಸಿಬ್ಬಂದಿ ಮತ್ತು ಕೈದಿಗಳ ನಡುವೆ ಮಾತಿನ ಚಕಮಕಿ ನಡೆದಿದ್ದು ಕಾರಾಗೃಹದಲ್ಲಿ ಬೀಡಿ ಸಿಗರೇಟ್ ಸಂಪೂರ್ಣ ಬಂದ್ ಮಾಡಿದ್ದಾರೆ.
ಆರೋಪಿ ದರ್ಶನ್ ರಾಜಾತಿಥ್ಯ ಫೋಟೋ ಹೊರಬರುತ್ತಿದ್ದಂತೆ ರಾಜ್ಯ ಸರ್ಕಾರ ಎಚ್ಚೆತ್ತು 9 ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿದೆ. ಅಷ್ಟೆ ಅಲ್ಲದೆ ದರ್ಶನ್ನನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಿದ್ದಾರೆ. ಇದೀಗ ಬಿಡಿ ಸಿಗರೇಟ್ನ್ನು ಬಂದ್ ಮಾಡಿದ್ದಾರೆ.
ಇದನ್ನೂ ಓದಿ : ವಿಜಯನಗರ : ಕಡತ ವಿಲೇವಾರಿಗೆ ಲಂಚ ಪಡೆಯುತ್ತಿದ್ದ ಆರೋಪ – ಅಧಿಕಾರಿಗಳಿಗೆ ಚಳಿ ಬಿಡಿಸಿದ ಡಿಸಿ ಎಂ.ಎಸ್ ದಿವಾಕರ್..!