ವಿಜಯನಗರ : ತಾಲೂಕು ಕಚೇರಿಯಲ್ಲಿ ಅಧಿಕಾರಿಗಳು ಕಡತಗಳ ವಿಲೇವಾರಿಗೂ ಸಾರ್ವಜನಿಕರಿಂದ ಲಂಚ ತಗೆದುಕೊಳ್ಳುತ್ತಿದ್ದಾರೆಂಬ ಆರೋಪ ಕೇಳಿ ಬಂದಿತ್ತು. ಈ ಹಿನ್ನಲೆ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕು ಕಛೇರಿಗೆ ಡಿಸಿ ಎಂ.ಎಸ್ ದಿವಾಕರ್ ಭೇಟಿ ನೀಡಿ ಅಧಿಕಾರಿಗಳಿಗೆ ಚಳಿ ಬಿಡಿಸಿದ್ದಾರೆ.
ಲಂಚ ಪಡೆದ ಆರೋಪ ಹಿನ್ನೆಲೆ ಜಿಲ್ಲಾಧಿಕಾರಿ ತಾಲೂಕು ಕಚೇರಿಗೆ ಭೇಟಿ ನೀಡುತ್ತಿದ್ದಂತೆ ಕಚೇರಿ ಸಿಬ್ಬಂದಿಗಳು ಫುಲ್ ಅಲರ್ಟ್ ಆದ್ರು. ಅಲ್ಲದೆ, ಅರ್ಜಿ ಹಿಡಿದು ಬಂದಿದ್ದ ವೃದ್ದರ ಸಮಸ್ಯೆ ಆಲಿಸಿ ಜಿಲ್ಲಾಧಿಕಾರಿ M.S ದಿವಾಕರ್ ಸ್ಥಳದಲ್ಲಲಿಯೇ ಬಗೆಹರಿಸಿದ್ದಾರೆ. ಬಳಿಕ ವೃದ್ದೆಗೆ ಕಿವಿ ಮಾತು ಹೇಳಿದ ಡಿಸಿ, ಕಚೇರಿಗೆ ಅಲೆದಾಡಬೇಕಾಗಿಲ್ಲ ಅನಲೈನ್ನಲ್ಲಿ ಅರ್ಜಿ ಸಲ್ಲಿಸಿ ಎಂದು ತಿಳಿಸಿದ್ದಾರೆ.
ಇನ್ನು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಡಿಸಿ, ವೃಧ್ಯಾಪ್ಯ ವೇತನ ವಿಧಾವ, ಸೇರಿದಂತೆ ವಿವಿಧ ಅರ್ಜಿಗಳು ತುರ್ತು ವಿಲೆವಾರಿಗೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ತಾಲೂಕು ಕಛೇರಿಯ ಸ್ವಚ್ಚತೆ ಸೇರಿದಂತೆ ಸಾರ್ವಜನಿಕರಿಗೆ ಕುಡಿಯುವ ನೀರಿನ ಸಮಸ್ಯೆ ಬಗೆ ಹರಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಇದನ್ನೂ ಓದಿ : ಕುಂಬಳಕಾಯಿ ಕಳ್ಳ ಅಂದ್ರೆ ಸುಧಾಕರ್ ಹೆಗಲು ಮುಟ್ಟಿಕೊಳ್ಳೋದ್ಯಾಕೆ – ಸಿಎಂ ಸಿದ್ದರಾಮಯ್ಯ..!