ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಪವಿತ್ರಾಗೌಡ ಪರಪ್ಪನ ಅಗ್ರಹಾರ ಜೈಲಿನಲ್ಲಿ ಬಂಧಿಯಾಗಿದ್ದಾರೆ. ಇದೀಗ ಕೊಲೆ ಪ್ರಕರಣದಲ್ಲಿ A1 ಆರೋಪಿಯಾಗಿರುವ ಪವಿತ್ರಾ ಗೌಡ ಮನೆಯಲ್ಲಿದ್ದ ಶ್ವಾನಗಳನ್ನು ಅಧಿಕಾರಿಗಳು ದರ್ಶನ್ ಮನೆಗೆ ಶಿಫ್ಟ್ ಮಾಡಿದ್ದಾರೆ.
ಶ್ವಾನ ಪ್ರಿಯೆಯಾಗಿದ್ದ ದರ್ಶನ್ ಸ್ನೇಹಿತೆ ಪವಿತ್ರಾಗೌಡ ಮನೆಯಲ್ಲಿ ವಿವಿಧ ತಳಿಯ 3 ಶ್ವಾನಗಳು ಇದ್ದಾವು. ಪವಿತ್ರಾ ಮನೆಯಲ್ಲಿ ಪವನ್ ಈ ಶ್ವಾನಗಳನ್ನ ನೋಡಿಕೊಳ್ಳುತ್ತಿದ್ದ. ಆದರೆ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಪವಿತ್ರಾ & ಪವನ್ ಕಂಬಿ ಹಿಂದೆ ಸೇರಿದ್ದಾನೆ.
ಇದರಿಂದ ಮನೆಯಲ್ಲಿ ಶ್ವಾನವನ್ನ ನೋಡಿಕೊಳ್ಳಲು ಯಾರು ಇಲ್ಲದ ಕಾರಣ ನಾಯಿಗಳು ಸೊರಗಿ ಹೋಗಿದ್ದವು. ಸರಿಯಾಗಿ ಆಹಾರ ಇಲ್ಲದೇ ಬಲಹೀನವಾಗಿದ್ದ ಶ್ವಾನಗಳ ದೃಶ್ಯ ಕಣ್ಣೀರು ತರಿಸುವಂತಿತ್ತು. ಶ್ವಾನಗಳು ಸೊರಗಿ ಹೋಗುತ್ತಿರುವ ವಿಚಾರ ಗೊತ್ತಾಗ್ತಿದ್ದಂತೆ ಪೀಪಲ್ಸ್ ಫಾರ್ ಅನಿಮಲ್ಸ್ ಸಂಸ್ಥೆಯ ಹರೀಶ್ ಹಾಗೂ ಲೀನಾ ಅವರು ಆರ್.ಆರ್ ನಗರ ಪೊಲೀಸ್ ಠಾಣೆ ಮತ್ತು ಪಶುಸಂಗೋಪನಾ ಇಲಾಖೆಯ ಗಮನಕ್ಕೆ ತಂದಿದ್ದರು.
ಇದೀಗ ಅಧಿಕಾರಿಗಳ ನೆರವಿನಿಂದ ಪವಿತ್ರಾಗೌಡ ಮನೆಯಲ್ಲಿದ್ದ White French Bulldog & Belgian Malinois ಎಂಬ ಎರಡು ಶ್ವಾನಗಳನ್ನ ದರ್ಶನ್ ಮನೆಗೆ ಶಿಫ್ಟ್ ಮಾಡಿದ್ದಾರೆ. ಉಳಿದ ಮತ್ತೊಂದು ಶ್ವಾನವನ್ನ ಕುಟುಂಬಸ್ಥರೇ ಕೊಂಡೊಯ್ದಿದ್ದಾರೆ. ದರ್ಶನ್ ಮನೆಯಲ್ಲಿ ಶ್ವಾನ ನೋಡಿಕೊಳ್ಳಲು ಕೇರ್ ಟೇಕರ್ ಇದ್ದಾರೆ. ಹೀಗಾಗಿ ಪವಿತ್ರಗೌಡ ಮನೆಯಲ್ಲಿದ್ದ ಶ್ವಾನಗಳು ದರ್ಶನ್ ಮನೆಗೆ ಶಿಫ್ಟ್ ಮಾಡಲಾಗಿದೆ.
ಇದನ್ನೂ ಓದಿ : ಘಟಶ್ರಾದ್ಧಕ್ಕೆ ಕ್ಲಾಸಿಕ್ ಚಿತ್ರ ಎಂಬ ಮನ್ನಣೆ – ಗಿರೀಶ್ ಕಾಸರವಳ್ಳಿ ಸಿನಿಮಾಕ್ಕೆ ಇಟಲಿಯ ವೆನಿಸ್ ಚಿತ್ರೋತ್ಸವದಲ್ಲಿ ಗೌರವ..!