ಬೆಂಗಳೂರು : ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿ ಸುದೀಪ್ ಅವರು 51ನೇ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದಾರೆ. ಈ ಹೊತ್ತಿನಲ್ಲೇ ಅಭಿನಯ ಚಕ್ರವರ್ತಿ ದಿಢೀರ್ ಅಂತ ಸುದ್ದಿಗೋಷ್ಠಿ ಕರೆದಿದ್ದರು.
ಈ ಸುದ್ದಿಗೋಷ್ಠಿಯಲ್ಲಿ ಮ್ಯಾಕ್ಸ್ ಸಿನಿಮಾ ಬಗ್ಗೆ ಅಪ್ ಡೇಟ್ ಕೊಡ್ತಾರಾ? ಬಿಲ್ಲರಂಗ ಭಾಷಾ ಬಗ್ಗೆ ಅಪ್ ಡೇಟ್ ಕೊಡ್ತಾರಾ? ಬಹುನಿರೀಕ್ಷಿತ ಶೋ ಬಿಗ್ಬಾಸ್ ಸೀಸನ್ 11ರ ಬಗ್ಗೆ ಮಾಹಿತಿ ಕೊಡ್ತಾರಾ? ಚಿತ್ರರಂಗದಲ್ಲಿ ನಡೆಯುತ್ತಿರುವ ಇತ್ತೀಚಿನ ಘಟನೆಗಳ ಬಗ್ಗೆ ಮಾತನಾಡ್ತಾರಾ? ಅಥವಾ ಹುಟ್ಟುಹಬ್ಬದ ಬಗ್ಗೆ ಅಭಿಮಾನಿಗಳಿಗೆ ಏನಾದರೂ ಸಿಹಿ ಸುದ್ದಿ ಕೊಡ್ತಾರಾ ಅಂತ ಪ್ರೇಕ್ಷಕರು ಕಾತುರದಿಂದ ಕಾದಿದ್ದರು.
ಇದೀಗ ನಟ ಈ ಒಂದು ಸಂದರ್ಭದಲ್ಲಿ ತಮ್ಮ ಬರ್ತ್ಡೇ ಸೆಲೆಬ್ರೇಷನ್ ಬಗ್ಗೆ ಮಾತನಾಡಿದ್ದಾರೆ. ಕಳೆದ ವರ್ಷ ಬರ್ತ್ಡೇಗೆ 50 ಸಾವಿರಕ್ಕೂ ಜಾಸ್ತಿ ಜನರು ಸೇರಿದ್ದರು. ನನ್ನ ಹುಟ್ಟುಹಬ್ಬಕ್ಕೆ ಬ್ಯಾರಿಕೇಡ್ ಒಡೆದು ಫ್ಯಾನ್ಸ್ ಬಂದಿದ್ದರು. ಅನೇಕರಿಗೆ ಭೇಟಿ ಸಾಧ್ಯವಾಗಿರಲಿಲ್ಲ. ಅದಕ್ಕೆ ನಾನು ಕ್ಷಮೆ ಕೇಳುತ್ತೇನೆ.
ಇನ್ನು ನಮ್ಮ ಅಕ್ಕಪಕ್ಕದ ಮನೆಯವರಿಗಗೂ ತೊಂದರೆ ಆಗಬಾರದು. ಈ ವರ್ಷ ಬರ್ತ್ಡೇಗೆ ಮನೆ ಹತ್ತಿರ ಬರಬೇಡಿ. ಜಯನಗರ MES ಗ್ರೌಂಡ್ನಲ್ಲಿ ಸೆಲಬ್ರೆಟ್ ಮಾಡಿಕೊಳ್ತೀನಿ. ಇನ್ನು ‘ಕೇಕ್ ತರಬೇಡಿ. ಕಟ್ ಮಾಡಿದಮೇಲೆ ಅದರಷ್ಟು ಅನಾಥ ಮತ್ತೊಬ್ಬರು ಇಲ್ಲ. ಆತರಹ ಸಂಭ್ರಮ ಬೇಡ. ಆ ಹಣದಲ್ಲಿ ಯಾರಿಗಾದರೂ ಊಟ ಹಾಕಿ’ ಎಂದು ಕೋರಿದ್ದಾರೆ.
ಇದನ್ನೂ ಓದಿ : ಕೇದಾರನಾಥದಲ್ಲಿ ಹಾನಿಗೊಳಗಾದ ಹೆಲಿಕಾಪ್ಟರ್ ಏರ್‌ಲಿಫ್ಟ್ ವೇಳೆ ಪತನ..!