Download Our App

Follow us

Home » ಸಿನಿಮಾ » ಬರ್ತ್​ಡೇ ಸಮೀಪಿಸ್ತಿದ್ದಂತೆ ಫ್ಯಾನ್ಸ್​​ಗೆ ಅಭಿನಯ ಚಕ್ರವರ್ತಿ ಏನಂದ್ರು ಗೊತ್ತಾ?

ಬರ್ತ್​ಡೇ ಸಮೀಪಿಸ್ತಿದ್ದಂತೆ ಫ್ಯಾನ್ಸ್​​ಗೆ ಅಭಿನಯ ಚಕ್ರವರ್ತಿ ಏನಂದ್ರು ಗೊತ್ತಾ?

ಬೆಂಗಳೂರು : ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿ ಸುದೀಪ್ ಅವರು 51ನೇ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದಾರೆ. ಈ ಹೊತ್ತಿನಲ್ಲೇ ಅಭಿನಯ ಚಕ್ರವರ್ತಿ ದಿಢೀರ್ ಅಂತ  ಸುದ್ದಿಗೋಷ್ಠಿ ಕರೆದಿದ್ದರು.

ಈ ಸುದ್ದಿಗೋಷ್ಠಿಯಲ್ಲಿ  ಮ್ಯಾಕ್ಸ್ ಸಿನಿಮಾ ಬಗ್ಗೆ ಅಪ್ ಡೇಟ್ ಕೊಡ್ತಾರಾ? ಬಿಲ್ಲರಂಗ ಭಾಷಾ ಬಗ್ಗೆ ಅಪ್ ಡೇಟ್ ಕೊಡ್ತಾರಾ? ಬಹುನಿರೀಕ್ಷಿತ ಶೋ ಬಿಗ್​ಬಾಸ್ ಸೀಸನ್​ 11ರ ಬಗ್ಗೆ ಮಾಹಿತಿ ಕೊಡ್ತಾರಾ? ಚಿತ್ರರಂಗದಲ್ಲಿ ನಡೆಯುತ್ತಿರುವ ಇತ್ತೀಚಿನ ಘಟನೆಗಳ ಬಗ್ಗೆ ಮಾತನಾಡ್ತಾರಾ? ಅಥವಾ ಹುಟ್ಟುಹಬ್ಬದ ಬಗ್ಗೆ ಅಭಿಮಾನಿಗಳಿಗೆ ಏನಾದರೂ ಸಿಹಿ ಸುದ್ದಿ ಕೊಡ್ತಾರಾ ಅಂತ ಪ್ರೇಕ್ಷಕರು ಕಾತುರದಿಂದ ಕಾದಿದ್ದರು.

ಇದೀಗ ನಟ ಈ ಒಂದು ಸಂದರ್ಭದಲ್ಲಿ ತಮ್ಮ ಬರ್ತ್​ಡೇ ಸೆಲೆಬ್ರೇಷನ್ ಬಗ್ಗೆ ಮಾತನಾಡಿದ್ದಾರೆ. ಕಳೆದ ವರ್ಷ ಬರ್ತ್​ಡೇಗೆ 50 ಸಾವಿರಕ್ಕೂ ಜಾಸ್ತಿ ಜನರು ಸೇರಿದ್ದರು. ನನ್ನ ಹುಟ್ಟುಹಬ್ಬಕ್ಕೆ ಬ್ಯಾರಿಕೇಡ್ ಒಡೆದು ಫ್ಯಾನ್ಸ್ ಬಂದಿದ್ದರು. ಅನೇಕರಿಗೆ ಭೇಟಿ ಸಾಧ್ಯವಾಗಿರಲಿಲ್ಲ. ಅದಕ್ಕೆ ನಾನು ಕ್ಷಮೆ ಕೇಳುತ್ತೇನೆ.

ಇನ್ನು ನಮ್ಮ ಅಕ್ಕಪಕ್ಕದ ಮನೆಯವರಿಗಗೂ ತೊಂದರೆ ಆಗಬಾರದು. ಈ ವರ್ಷ ಬರ್ತ್​ಡೇಗೆ ಮನೆ ಹತ್ತಿರ ಬರಬೇಡಿ. ಜಯನಗರ MES ಗ್ರೌಂಡ್​​ನಲ್ಲಿ ಸೆಲಬ್ರೆಟ್ ಮಾಡಿಕೊಳ್ತೀನಿ. ಇನ್ನು ‘ಕೇಕ್ ತರಬೇಡಿ. ಕಟ್ ಮಾಡಿದಮೇಲೆ ಅದರಷ್ಟು ಅನಾಥ ಮತ್ತೊಬ್ಬರು ಇಲ್ಲ. ಆತರಹ ಸಂಭ್ರಮ ಬೇಡ. ಆ ಹಣದಲ್ಲಿ ಯಾರಿಗಾದರೂ ಊಟ ಹಾಕಿ’ ಎಂದು ಕೋರಿದ್ದಾರೆ.

ಇದನ್ನೂ ಓದಿ : ಕೇದಾರನಾಥದಲ್ಲಿ ಹಾನಿಗೊಳಗಾದ ಹೆಲಿಕಾಪ್ಟರ್‌ ಏರ್‌ಲಿಫ್ಟ್‌ ವೇಳೆ ಪತನ..!

Leave a Comment

DG Ad

RELATED LATEST NEWS

Top Headlines

ಮಾಜಿ ಪ್ರಿಯತಮೆಗೆ ಖಾಸಗಿ ವಿಡಿಯೋ ವೈರಲ್ ಮಾಡೋದಾಗಿ ಬೆದರಿಕೆ – ಸೀರಿಯಲ್​ ನಟ ವರುಣ್​ ಆರಾಧ್ಯ ವಿರುದ್ಧ FIR..!

ಬೆಂಗಳೂರು: ಸೋಶಿಯಲ್‌ ಮೀಡಿಯಾದ ಮೂಲಕ ಫೇಮಸ್​​ ಆಗಿದ್ದ ವರ್ಷಾ ಕಾವೇರಿ ಮತ್ತು ವರುಣ್‌ ಆರಾಧ್ಯ ಕಳೆದ ವರ್ಷ ಇಬ್ಬರು ಬ್ರೇಕಪ್ ಬಗ್ಗೆ ಅಧಿಕೃತವಾಗಿ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದರು.

Live Cricket

Add Your Heading Text Here