Download Our App

Follow us

Home » ಸಿನಿಮಾ » ಡಿವೋರ್ಸ್​ ಪಡೆದರೂ ಒಂದಾದ ಚಂದನ್‌ ಶೆಟ್ಟಿ-ನಿವೇದಿತಾ ಗೌಡ : ಅದ್ಹೇಗೆ ಗೊತ್ತಾ?

ಡಿವೋರ್ಸ್​ ಪಡೆದರೂ ಒಂದಾದ ಚಂದನ್‌ ಶೆಟ್ಟಿ-ನಿವೇದಿತಾ ಗೌಡ : ಅದ್ಹೇಗೆ ಗೊತ್ತಾ?

ಕಿರುತೆಯ ಜನಪ್ರಿಯ ಜೋಡಿ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಇದೇ ವರ್ಷ ಜೂನ್‌ 7ರಂದು ಒಮ್ಮತದಿಂದ ವಿಚ್ಛೇದನ ಪಡೆದುಕೊಂಡಿದ್ದರು. ಆದರೆ ರಿಯಲ್ ಲೈಫ್ ಜೋಡಿಯಾಗಿದ್ದ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ವಿಚ್ಛೇದನ ಪಡೆದುಕೊಳ್ಳುವ ಮುನ್ನ ‘ಕ್ಯಾಂಡಿಕ್ರಷ್’​​ ಹೆಸರಿನ ಸಿನಿಮಾದಲ್ಲಿ ಜೊತೆಯಾಗಿ ನಟಿಸಿದ್ದರು. ಇದೀಗ ಮೊದಲ ಬಾರಿಗೆ ಜೊತೆಯಾಗಿ ಅಭಿನಯಿಸಿದ್ದ ಚಿತ್ರಕ್ಕೆ ಇಟ್ಟಿದ್ದ ಹೆಸರನ್ನು ಬದಲಾವಣೆ ಮಾಡಲು ಚಿತ್ರತಂಡ ನಿರ್ಧಾರ ಮಾಡಿದೆ.

ಹೌದು, ಪುನೀತ್ ಶ್ರೀನಿವಾಸ್ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಸೈಕೋ ಥ್ರಿಲ್ಲರ್ ಕಥಾಹಂದರ ಹೊಂದಿದ ಚಿತ್ರದ ತಾತ್ಕಾಲಿಕ ಟೈಟಲ್ ಆಗಿದ್ದ ‘ಕ್ಯಾಂಡಿ ಕ್ರಷ್​​’ ಇದೀಗ ‘ಮುದ್ದುರಾಕ್ಷಸಿ’ ಎಂದು ಬದಲಾಯಿಸಲಾಗಿದೆ.

ಶ್ರೀಚೌಡೇಶ್ವರಿ ಸಿನಿ ಕಂಬೈನ್ಸ್ ಮೂಲಕ ಮೋಹನ್ ಕುಮಾರ್ ಅವರು ಈ ಚಿತ್ರವನ್ನು ಬಿಗ್ ಬಜೆಟ್‌ನಲ್ಲಿ ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ‘ಬಿಗ್ ಬಾಸ್’ ಖ್ಯಾತಿಯ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಮೊದಲ ಬಾರಿಗೆ ಒಟ್ಟಿಗೆ ನಟಿಸಿದ್ದಾರೆ.

ಪುನೀತ್ ಶ್ರೀನಿವಾಸ್ ಅವರೇ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿರುವ ಈ ಚಿತ್ರಕ್ಕೆ ಬೆಂಗಳೂರು ಸುತ್ತಮುತ್ತ ಬಹುತೇಕ ಶೂಟಿಂಗ್ ನಡೆಸಲಾಗಿದೆ. ಮುದ್ದುರಾಕ್ಷಸಿ ಒಂದು ವಿಭಿನ್ನ ರೊಮ್ಯಾಂಟಿಕ್ ಲವ್ ಸ್ಟೋರಿ ಜೊತೆಗೆ ಸೈಕೋ ಥ್ರಿಲ್ಲರ್ ಕಥಾಹಂದರ ಹೊಂದಿರುವ ಚಿತ್ರವಾಗಿದ್ದು, ಚಿತ್ರದ ಈ ಶೀರ್ಷಿಕೆಯೇ ವಿಶೇಷವಾಗಿದೆ. ಮುದ್ದು ರಾಕ್ಷಸಿ ಚಿತ್ರದ ಹಾಡುಗಳಿಗೆ ಎಂ.ಎಸ್.ತ್ಯಾಗರಾಜ್ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ಅಲ್ಲದೆ ಎ.ಕರುಣಾಕರ್ ಅವರು ಛಾಯಾಗ್ರಾಹಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಇನ್ನು ಚಂದನ್‌ ಶೆಟ್ಟಿ ಹಾಗೂ ನಿವೇದಿತಾ ಗೌಡ ಇಬ್ಬರೂ ಕೂಡ ಸಿನಿಮಾದ ಪೋಸ್ಟರ್‌ಗಳನ್ನು ತಮ್ಮ ಸೋಶಿಯಲ್‌ ಮೀಡಿಯಾ ಅಕೌಂಟ್‌ಗಳಲ್ಲಿ ಹಂಚಿಕೊಂಡಿದ್ದಾರೆ. ಸಿನಿಮಾದ ಪೋಸ್ಟರ್‌ ಹಂಚಿಕೊಂಡು ಮಾಹಿತಿ ನೀಡಿದ ಚಂದನ್​​ ಅವರು, ಚಿತ್ರಿಕರಣ ಮುಗಿಯುವ ಹಂತದಲ್ಲಿದ್ದ ನಮ್ಮ ಸಿನಿಮಾ “ಕ್ಯಾಂಡಿ ಕ್ರಷ್​​“ ಟೈಟಲ್ ಕಾರಣಾಂತರಗಳಿಂದ ಬದಲಾಯಿಸಿದ್ದು, ಸಿನಿಮಾ ತಂಡದವರು ಚಿತ್ರಕ್ಕೆ ‘ಮುದ್ದುರಾಕ್ಷಸಿ’ ಎಂದು ಮರುನಾಮಕರಣ ಮಾಡಿದ್ದಾರೆ ಎಂದು ಹೊಸ ಪೋಸ್ಟರ್‌ ಅನ್ನು ಹಂಚಿಕೊಂಡಿದ್ದಾರೆ. ನಿವೇದಿತಾ ಗೌಡ ಅವರು ಹೊಸ ಹೆಸರಿನ ಪೋಸ್ಟರ್‌ನೊಂದಿಗೆ ‘ಎಲ್ಲರಿಗೂ ಹಾಯ್‌…ನಿಮ್ಮ ಆಶೀರ್ವಾದ ನನಗೆ ಬೇಕಿದೆ..’ ಎಂದು ಬರೆದುಕೊಂಡಿದ್ದಾರೆ.

 ಇದನ್ನೂ ಓದಿ : ಹುಚ್ಚಾಟ ಮೆರೆದ ದರ್ಶನ್ ಅಭಿಮಾನಿಗಳಿಗೆ ಪೊಲೀಸರ ಲಾಠಿಜಾರ್ಜ್..!

Leave a Comment

DG Ad

RELATED LATEST NEWS

Top Headlines

ಪ್ರಭಾಸ್‌ ಜೊತೆಗೆ ಒಂದಲ್ಲ ಎರಡಲ್ಲ ಮೂರು ಸಿನಿಮಾಗಳನ್ನು ಘೋಷಿಸಿದ ಹೊಂಬಾಳೆ ಫಿಲಂಸ್‌..!

ಕನ್ನಡ ಚಿತ್ರಂಗಕ್ಕೆ ಮಾತ್ರ ಸೀಮಿತವಾಗದ ಹೊಂಬಾಳೆ ಫಿಲಂಸ್‌ ಸಂಸ್ಥೆ ಪರಭಾಷೆ ಸಿನಿಮಾಗಳಿಗೆ ಬಂಡವಾಳ ಹೂಡುವ ಮೂಲಕ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ. ಕೆಜಿಎಫ್‌, ಕೆಜಿಎಫ್‌ 2, ಕಾಂತಾರ, ಸಲಾರ್‌, ಈಗ

Live Cricket

Add Your Heading Text Here