ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ A2 ಆರೋಪಿಯಾಗಿ ಪರಪ್ಪನ ಅಗ್ರಹಾರ ಸೇರಿದ್ದ ನಟ ದರ್ಶನ್ಗೆ ರಾಜ್ಯಾತಿಥ್ಯ ಕೊಡಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿ ಬಂದ ಬೆನ್ನಲ್ಲೇ ದರ್ಶನ್ನನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗಿದೆ. ಈ ಹೊತ್ತಲ್ಲೇ ದರ್ಶನ್ರ ಹಳೆಯ ಸಿನಿಮಾಗಳನ್ನು ಮರು ರಿಲೀಸ್ ಮಾಡಲಾಗಿದೆ.
ಇಂದು ದರ್ಶನ್ ನಟನೆಯ ‘ಕರಿಯ’ ಸಿನಿಮಾ ಮರು ಬಿಡುಗಡೆ ಆಗಿದೆ. ಬೆಳಗ್ಗಿನಿಂದಲೇ ದರ್ಶನ್ ಅಭಿಮಾನಿಗಳು, ದರ್ಶನ್ರ ಆರೋಪಿ ಸಂಖ್ಯೆ ಹೊಂದಿರುವ ಕಟೌಟ್, ಬ್ಯಾನರ್ಗಳನ್ನು ಚಿತ್ರಮಂದಿರದ ಹೊರಗೆ ಹಾಕಿದ್ದಾರೆ. ಅದರ ಜೊತೆಗೆ ದರ್ಶನ್, ಜೈಲಿನಲ್ಲಿ ಸಿಗರೇಟು ಸೇದುತ್ತಾ ಕೂತಿದ್ದ ಪೋಸ್ಟರ್ ಕೂಡ ಹಾಕಿದ್ದಾರೆ.
ಇಷ್ಟು ಮಾತ್ರವಲ್ಲದೇ ದರ್ಶನ್ ಅಭಿಮಾನಿಗಳು, ಪ್ರಸನ್ನ ಥಿಯೇಟರ್ ಹೊರಗಡೆ ಅವಾಚ್ಯ ಶಬ್ದಗಳನ್ನು ಬಳಸಿ ಸಂಭ್ರಮ ಮಾಡುತ್ತಿದ್ದರು. ಹೀಗಾಗಿ ಹುಚ್ಚಾಟ ಮೆರೆದ ಅಭಿಮಾನಿಗಳನ್ನು ಚದುರಿಸಲು ಕೆಪಿ ಅಗ್ರಹಾರ ಪೊಲೀಸರು ಲಘು ಲಾಠಿ ಪ್ರಹಾರ ಮಾಡಿದ್ದಾರೆ.
Post Views: 23