ಬೆಂಗಳೂರು : ಕಾಂಗ್ರೆಸ್ ಶಾಸಕರನ್ನು ಖರೀದಿಸಲು ಬಿಜೆಪಿಯವರು 100 ಕೋಟಿ ರೂ. ಆಫರ್ ನೀಡಿದ್ದಾರೆ ಎಂದು ಕಾಂಗ್ರೆಸ್ ಶಾಸಕ ರವಿಕುಮಾರ್ ಗೌಡ ಗಂಭೀರ ಆರೋಪ ಮಾಡಿದ್ದರು. ಇದೀಗ ಈ ವಿಚಾರಕ್ಕೆ ಬಿಜೆಪಿ ಶಾಸಕ ಡಾ. ಸಿಎನ್ ಅಶ್ವಥ್ ನಾರಾಯಣ ತಿರುಗೇಟು ಕೊಟ್ಟಿದ್ದಾರೆ.
ಆಪರೇಷನ್ ಕಮಲ ಆರೋಪಕ್ಕೆ ತಿರುಗೇಟು ನೀಡಿದ ಡಾ.ಅಶ್ವಥ್ ನಾರಾಯಣ ಅವರು, ಸರ್ಕಾರ ಬೀಳಿಸೋ ಉದ್ದೇಶ ನಮಗೆ ಇಲ್ಲವೇ ಇಲ್ಲ. ಲೂಟಿಕೋರರಿಗೆ ನಾವು ದುಡ್ಡು ಕೊಡೋಕಾಗುತ್ತಾ? ಕಾಂಗ್ರೆಸ್ನವರು ದಾರಿ ತಪ್ಪಿಸುವ ಹೇಳಿಕೆ ನಿಲ್ಲಿಸಬೇಕು ಎಂದು ಶಾಸಕ ಅಶ್ವತ್ಥ್ ನಾರಾಯಣ್ ಕಿಡಿಕಾರಿದ್ದಾರೆ.
ಆಪರೇಷನ್ ಕಮಲದ ಬಗ್ಗೆ ಹೇಳ್ತಿರೋದು ಇದೇ ಮೊದಲಲ್ಲ. ಮಂಡ್ಯ ಶಾಸಕರು ಇದೆಲ್ಲವನ್ನೂ ಬಿಟ್ಟು ಅಭಿವೃದ್ಧಿ ಕಡೆ ಗಮನ ಹರಿಸಲಿ. 100 ಕೋಟಿ, 50 ಕೋಟಿ ಇದೆಲ್ಲಾ ಕಟ್ಟು ಕಥೆ ಎಂದು ಶಾಸಕ ಅಶ್ವತ್ಥ್ ನಾರಾಯಣ ಬೆಂಗಳೂರಿನಲ್ಲಿ ಕಿಡಿಕಾರಿದ್ದಾರೆ.
ಇದನ್ನೂ ಓದಿ : ನಟ ದರ್ಶನ್ ಹೆಸರಿಗೂ ಬಂತು ಅಲಿಯಾಸ್ - FIRನಲ್ಲಿ ದರ್ಶನ್ ತೂಗುದೀಪ ಅಲಿಯಾಸ್ ಡಿ ಬಾಸ್ ಉಲ್ಲೇಖ..!
Post Views: 51