Download Our App

Follow us

Home » ಅಪರಾಧ » ನಟ ದರ್ಶನ್​​ ಹೆಸರಿಗೂ ಬಂತು ಅಲಿಯಾಸ್ ​- FIRನಲ್ಲಿ ದರ್ಶನ್​​ ತೂಗುದೀಪ ಅಲಿಯಾಸ್ ಡಿ ಬಾಸ್​ ಉಲ್ಲೇಖ..!

ನಟ ದರ್ಶನ್​​ ಹೆಸರಿಗೂ ಬಂತು ಅಲಿಯಾಸ್ ​- FIRನಲ್ಲಿ ದರ್ಶನ್​​ ತೂಗುದೀಪ ಅಲಿಯಾಸ್ ಡಿ ಬಾಸ್​ ಉಲ್ಲೇಖ..!

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಕೇಸ್​​ನಲ್ಲಿ ಪರಪ್ಪನ ಅಗ್ರಹಾರ ಸೇರಿರುವ ನಟ ದರ್ಶನ್ ಜೈಲಿನಲ್ಲೂ ಬಿಂದಾಸ್​​ ಆಗಿರುವ ಫೋಟೋ ವೈರಲ್ ಆಗಿದ್ದು, ಇದು ರಾಜ್ಯದಲ್ಲಿ ಸಂಚಲನ ಮೂಡಿಸಿದೆ. ಕೊಲೆ ಆರೋಪಿ ದರ್ಶನ್ ಜೈಲಿನಲ್ಲಿ ರಾಜಾತಿಥ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್ ವಿರುದ್ಧ ಎರಡು ಎಫ್‌ಐಆರ್ ದಾಖಲಾಗಿದೆ. ಇದೀಗ ನಟ ದರ್ಶನ್​​ ಹೆಸರಿಗೂ ಅಲಿಯಾಸ್​ ಬಂದಿದ್ದು, FIRನಲ್ಲಿ ದರ್ಶನ್​​ ತೂಗುದೀಪ ಅಲಿಯಾಸ್ ಡಿ ಬಾಸ್ ಎಂದು​ ಉಲ್ಲೇಖಿಸಲಾಗಿದೆ.

ಆಗಸ್ಟ್ 22ರ ಮಧ್ಯಾಹ್ನ ದರ್ಶನ್​​ ಸಹ ಬಂಧಿಗಳ ಜೊತೆ ಸಿಗರೇಟ್​ ಸೇದಿದ್ರು, ಹಾಗಾಗಿ ಮೊದಲ FIRನಲ್ಲಿ A-1 ದರ್ಶನ್​​, A-2 ವಿಲ್ಸನ್​​ ಗಾರ್ಡನ್​​​ ನಾಗ,  A-3 ನಾಗರಾಜ್​​, A-4 ಶ್ರೀನಿವಾಸ ಅಲಿಯಾಸ್ ಕುಳ್ಳ ಸೀನ ಹೆಸರು ಉಲ್ಲೇಖವಾಗಿದೆ. ಜೈಲು ನಿಯಮ ಉಲ್ಲಂಘನೆ ಹಿನ್ನೆಲೆಯಲ್ಲಿ ಕಲಂ 42ರಡಿ ದೂರು ದಾಖಲಾಗಿದೆ.

ಸೆಲ್​​ ಒಳಗಿಂದ ವಿಡಿಯೋ ಕಾಲ್​​​ ಮಾಡಿದ್ದಕ್ಕೆ 2ನೇ FIR ದಾಖಲಾಗಿದೆ. ಮಾರ್ಕೆಟ್​ ಧರ್ಮ ಮೊಬೈಲ್​​ನಲ್ಲಿ ಸತ್ಯನಿಗೆ ವಿಡಿಯೋ ಕಾಲ್​​​ ಮಾಡಿದ್ದು, ಈ ಕೇಸ್​ನಲ್ಲಿ A-1: ನಟ ದರ್ಶನ್​​, A-2 ಧರ್ಮ, A-3 ಸತ್ಯ ಹೆಸರಿದೆ. ಮೂರನೇ FIRನಲ್ಲಿ ಜೈಲು ಅಧಿಕಾರಿಗಳನ್ನು ಉಲ್ಲೇಖಿಸಿದ್ದು, A-1: ಸುದರ್ಶನ್​​​, A-2 ಮುಜೀಬ್​​​, A-3 ಪರಮೇಶ್ ನಾಯಕ್​​, A-4 ರಾಯಮನೆ ಕೆ.ಬಿ. ಎಂಬುವರ ಮೇಲೆ ಎಫ್​ಐಆರ್​​ ದಾಖಲಾಗಿದೆ.

ಸಿಸಿಬಿ ರೇಡ್ ಸಂದರ್ಭದಲ್ಲಿ ನಾಲ್ಕು ಬಾಕ್ಸ್ ಸಾಗಿಸಿದ ಆರೋಪ ವ್ಯಕ್ತವಾಗಿದ್ದು, ಬಂಧಿಗಳ ಕೊಠಡಿಯಿಂದ ಕೆಲವು ಬಾಕ್ಸ್​ಗಳನ್ನು ಸಿಬ್ಬಂದಿ ಒಯ್ದಿದ್ದರು. ರಾತ್ರಿ 10 ಗಂಟೆ 58 ನಿಮಿಷದಿಂದ 11 ಗಂಟೆ 30 ನಿಮಿಷದ ಮಧ್ಯೆ ಸಾಗಣೆ ಮಾಡಿದ್ದು, ಬಂಧಿ ಮುಜೀಬ್​​​ ಸಹಾಯದಿಂದ ಜೈಲ್​​ ವೀಕ್ಷಕ ಸುದರ್ಶನ್​​ ಬಾಕ್ಸ್ ಸಾಗಿಸಿದ್ದು ಪತ್ತೆಯಾಗಿದೆ. ಈ ವೇಳೆ ಜೈಲರ್​​ ಪರಮೇಶ್​ ನಾಯ್ಕ್​ ಲಮಾಣಿ, ಸಹಾಯಕ ಜೈಲರ್​​​ ಕೆ.ಬಿ.ರಾಯಮನೆ ಸಹಕರಿಸಿದ್ದಾರೆ.

ಇದನ್ನೂ ಓದಿ : ಸಿಎಂ ಸಿದ್ದರಾಮಯ್ಯಗೆ ದರ್ಶನ್​​ ರಾಜಾತಿಥ್ಯ ರಿಪೋರ್ಟ್​ ನೀಡಿದ ಸಚಿವ ಪರಮೇಶ್ವರ್​​​..!

Leave a Comment

DG Ad

RELATED LATEST NEWS

Top Headlines

ಹುಬ್ಬಳ್ಳಿ-ಪುಣೆ ವಂದೇ ಭಾರತ್​ ರೈಲಿಗೆ ಇಂದು ಪ್ರಧಾನಿ ಮೋದಿ ಚಾಲನೆ..!

ದೇಶದ ಮೊದಲ ವಂದೇ ಭಾರತ್​ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಇಂದು ಚಾಲನೆ ನೀಡಲಿದ್ದಾರೆ. ಗುಜರಾತ್​ನ ಭುಜ್​-ಅಹ್ಮದಾಬಾದ್​ ನಡುವೆ ವಂದೇ ಭಾರತ್​ ಮೆಟ್ರೋ ಸಂಚಾರ ಮಾಡಲಿದೆ. 100-250

Live Cricket

Add Your Heading Text Here