ಬೆಂಗಳೂರು : ಮೂಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯನವರಿಗೆ ಸಂಕಷ್ಟ ಕ್ಷಣ ಕ್ಷಣಕ್ಕೂ ಹೆಚ್ಚುತ್ತಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯನವರ ವಿರುದ್ಧ ಕಾನೂನಾತ್ಮಕ ತನಿಖೆ ನಡೆಸಲು ರಾಜ್ಯಪಾಲರು ಆದೇಶ ಕೊಟ್ಟ ಬೆನ್ನಲ್ಲೇ ಸಿದ್ದರಾಮಯ್ಯನವರು ಕರ್ನಾಟಕ ಹೈಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಲು ನಿರ್ಧರಿಸಿದ್ದಾರೆ. ಆದರೆ, ಸಿಎಂ ಸಿದ್ದು ಹೈಕೋರ್ಟ್ ಮೊರೆ ಹೋಗ್ತಿದ್ದಂತೆ ದೂರುದಾರ ಟಿ.ಜೆ.ಅಬ್ರಹಾಂ ಹೈಕೋರ್ಟ್ಗೆ ಕೇವಿಯೇಟ್ ಸಲ್ಲಿಸಲು ನಿರ್ಧಾರ ಮಾಡಿದ್ದಾರೆ.
ಮೂವರು ದೂರುದಾರರು ಸಿಎಂ ವಿರುದ್ದ ರಾಜ್ಯಪಾಲರಿಗೆ ದೂರು ನೀಡಿದ್ದು, ಇದೀಗ ಈ ಇವರಿಂದ ಹೈಕೋರ್ಟ್ಗೆ ಕೇವಿಯೇಟ್ ಸಲ್ಲಿಕೆಯಾಗಲಿದೆ. ಸಿಎಂ ಸಿದ್ದು ರಿಟ್ ಅರ್ಜಿ ಸಲ್ಲಿಸೋ ಮುನ್ನವೇ ಕೇವಿಯೇಟ್ ಸಲ್ಲಿಕೆಯಾಗಲಿದ್ದು, ಕೇವಿಯೇಟ್ ಸಲ್ಲಿಕೆಯಿಂದ ವಾದ-ಪ್ರತಿವಾದಕ್ಕೆ ಅವಕಾಶ ಕೊಡ್ಬೇಕು ಎಂದು ಅಬ್ರಹಾಂ ರಾಜ್ಯಪಾಲರ ಕಚೇರಿಯಿಂದ ಅನುಮತಿ ಪತ್ರ ಪಡೆದಿದ್ದಾರೆ.
ಸಿಎಂ ರಿಟ್ ಅರ್ಜಿಗೆ ಪ್ರತಿಯಾಗಿ ಅಬ್ರಹಾಂ ಪರ ವಕೀಲರು ವಾದ ಮಾಡಲಿದ್ದು, ಇತರೆ ಇಬ್ಬರು ದೂರುದಾರರಿಂದಲೂ ಕೇವಿಯೇಟ್ ಸಲ್ಲಿಕೆಗೆ ತಯಾರಿ ನಡೆಯುತ್ತಿದೆ. ಸಿಎಂ ವಿರುದ್ಧ ಸ್ನೇಹಮಯಿ ಕೃಷ್ಣ, ಪ್ರದೀಪ್ ಕುಮಾರ್, ಟಿ.ಜೆ ಅಬ್ರಹಾಂ ದೂರು ನೀಡಿದ್ದಾರೆ.
ಇದನ್ನೂ ಓದಿ : ತಾಯಿ, ಮಗನನ್ನ ಕಿಡ್ನ್ಯಾಪ್ ಮಾಡಿ ಕಿರುಕುಳ – ಇಬ್ಬರು ರೌಡಿಶೀಟರ್ಗಳು ಸೇರಿ 9 ಆರೋಪಿಗಳು ಅರೆಸ್ಟ್..!