Download Our App

Follow us

Home » ರಾಜಕೀಯ » ಸಿಎಂ ಸಿದ್ದು ಹೈಕೋರ್ಟ್​ ಮೊರೆ ಹೋಗ್ತಿದ್ದಂತೆ ಕೇವಿಯೆಟ್​ ಸಲ್ಲಿಸಲು ನಿರ್ಧರಿಸಿದ ಟಿ.ಜೆ ಅಬ್ರಹಾಂ..!

ಸಿಎಂ ಸಿದ್ದು ಹೈಕೋರ್ಟ್​ ಮೊರೆ ಹೋಗ್ತಿದ್ದಂತೆ ಕೇವಿಯೆಟ್​ ಸಲ್ಲಿಸಲು ನಿರ್ಧರಿಸಿದ ಟಿ.ಜೆ ಅಬ್ರಹಾಂ..!

ಬೆಂಗಳೂರು : ಮೂಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯನವರಿಗೆ ಸಂಕಷ್ಟ ಕ್ಷಣ ಕ್ಷಣಕ್ಕೂ ಹೆಚ್ಚುತ್ತಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯನವರ ವಿರುದ್ಧ ಕಾನೂನಾತ್ಮಕ ತನಿಖೆ ನಡೆಸಲು ರಾಜ್ಯಪಾಲರು ಆದೇಶ ಕೊಟ್ಟ ಬೆನ್ನಲ್ಲೇ ಸಿದ್ದರಾಮಯ್ಯನವರು ಕರ್ನಾಟಕ ಹೈಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಲು ನಿರ್ಧರಿಸಿದ್ದಾರೆ. ಆದರೆ, ಸಿಎಂ ಸಿದ್ದು ಹೈಕೋರ್ಟ್​ ಮೊರೆ ಹೋಗ್ತಿದ್ದಂತೆ ದೂರುದಾರ ಟಿ.ಜೆ.ಅಬ್ರಹಾಂ ಹೈಕೋರ್ಟ್​ಗೆ ಕೇವಿಯೇಟ್​ ಸಲ್ಲಿಸಲು ನಿರ್ಧಾರ ಮಾಡಿದ್ದಾರೆ.

ಮೂವರು ದೂರುದಾರರು ಸಿಎಂ ವಿರುದ್ದ ರಾಜ್ಯಪಾಲರಿಗೆ ದೂರು ನೀಡಿದ್ದು, ಇದೀಗ ಈ ಇವರಿಂದ ಹೈಕೋರ್ಟ್​ಗೆ ಕೇವಿಯೇಟ್​​ ಸಲ್ಲಿಕೆಯಾಗಲಿದೆ. ಸಿಎಂ ಸಿದ್ದು ರಿಟ್ ಅರ್ಜಿ ಸಲ್ಲಿಸೋ ಮುನ್ನವೇ ಕೇವಿಯೇಟ್​ ಸಲ್ಲಿಕೆಯಾಗಲಿದ್ದು, ಕೇವಿಯೇಟ್​ ಸಲ್ಲಿಕೆಯಿಂದ ವಾದ-ಪ್ರತಿವಾದಕ್ಕೆ ಅವಕಾಶ ಕೊಡ್ಬೇಕು ಎಂದು ಅಬ್ರಹಾಂ ರಾಜ್ಯಪಾಲರ ಕಚೇರಿಯಿಂದ ಅನುಮತಿ ಪತ್ರ ಪಡೆದಿದ್ದಾರೆ.

ಸಿಎಂ ರಿಟ್​ ಅರ್ಜಿಗೆ ಪ್ರತಿಯಾಗಿ ಅಬ್ರಹಾಂ ಪರ ವಕೀಲರು ವಾದ ಮಾಡಲಿದ್ದು, ಇತರೆ ಇಬ್ಬರು ದೂರುದಾರರಿಂದಲೂ ಕೇವಿಯೇಟ್ ಸಲ್ಲಿಕೆಗೆ ತಯಾರಿ ನಡೆಯುತ್ತಿದೆ. ಸಿಎಂ ವಿರುದ್ಧ  ಸ್ನೇಹಮಯಿ ಕೃಷ್ಣ, ಪ್ರದೀಪ್​ ಕುಮಾರ್​​, ಟಿ.ಜೆ ಅಬ್ರಹಾಂ ದೂರು ನೀಡಿದ್ದಾರೆ.

ಇದನ್ನೂ ಓದಿ : ತಾಯಿ, ಮಗನನ್ನ ಕಿಡ್ನ್ಯಾಪ್ ಮಾಡಿ​​ ಕಿರುಕುಳ – ಇಬ್ಬರು ರೌಡಿಶೀಟರ್​ಗಳು ಸೇರಿ 9 ಆರೋಪಿಗಳು ಅರೆಸ್ಟ್..!

Leave a Comment

DG Ad

RELATED LATEST NEWS

Top Headlines

ಶಾಲಾ ಮಕ್ಕಳ ಕ್ಷೀರ ಭಾಗ್ಯಕ್ಕೆ ಕನ್ನ ಹಾಕಿದ ಹೆಡ್​​ ಮಾಸ್ಟರ್ – ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು..!

ಗುಲ್ಬರ್ಗ : ಅಕ್ಷರ ದಾಸೋಹ ಯೋಜನೆಯ ಕ್ಷೀರ ಭಾಗ್ಯಕ್ಕೆ ಹೆಡ್​​ ಮಾಸ್ಟರರೇ ಕನ್ನ ಹಾಕಿರುವ ಘಟನೆಯೊಂದು ನಡೆದಿದೆ. ಗುಲ್ಬರ್ಗದ ಅಫಜಲಪುರ ತಾಲ್ಲೂಕಿನ ಸ್ಟೇಷನ್ ಗಾಣಗಾಪುರ ಗ್ರಾಮದ ಸರ್ಕಾರಿ

Live Cricket

Add Your Heading Text Here