Download Our App

Follow us

Home » ಅಪರಾಧ » PSI ಪುಟ್ಟಸ್ವಾಮಿ ಮನೆಯಲ್ಲಿ ದರೋಡೆ ಪ್ರಕರಣ – ತನಿಖೆಯಲ್ಲಿ ಬಯಲಾಯ್ತು ಸ್ಫೋಟಕ ರಹಸ್ಯ..!

PSI ಪುಟ್ಟಸ್ವಾಮಿ ಮನೆಯಲ್ಲಿ ದರೋಡೆ ಪ್ರಕರಣ – ತನಿಖೆಯಲ್ಲಿ ಬಯಲಾಯ್ತು ಸ್ಫೋಟಕ ರಹಸ್ಯ..!

ಬೆಂಗಳೂರು : PSI ಪುಟ್ಟಸ್ವಾಮಿ ಮನೆಯಲ್ಲಿ ಲಕ್ಷಾಂತರ ರೂಪಾಯಿ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ತನಿಖೆಯಲ್ಲಿ ಸ್ಟೋಟಕ ಮಾಹಿತಿಯೊಂದು ಬಯಲಾಗಿದೆ. PSI ಮನೆಯ ದರೋಡೆ ಬೋಗಸ್​ ಕೇಸ್​ ಎಂದು ಪೊಲೀಸ್ ಕಮಿಷನರ್​​ಗೆ DCP ವರದಿ ನೀಡಿದ್ದು, ಈ ಮೂಲಕ ದರೋಡೆ ದೂರು ನೀಡಿ PSI ಪುಟ್ಟಸ್ವಾಮಿ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಕೋರಮಂಗಲ ಠಾಣಾ ವ್ಯಾಪ್ತಿಯ ಮನೆಯಲ್ಲಿ ಲಕ್ಷ-ಲಕ್ಷ ಕಳುವಾಯ್ತು ಎಂದು PSI ಪತ್ನಿ ಬೋಗಸ್ ಕೇಸ್​ ನೀಡಿದ್ದರು. ಅಪರಿಚಿತ ವ್ಯಕ್ತಿಗಳು ಬಂದು ಕೈಕಾಲು ಕಟ್ಟಿ ದರೋಡೆ ಮಾಡಿದ್ದರೆಂದು PSI ಪುಟ್ಟಸ್ವಾಮಿ ಪತ್ನಿ ಕೋರಮಂಗಲ ಪೊಲೀಸ್ ಠಾಣೆಗೆ  ದೂರು ನೀಡಿದ್ದರು.

ಈ ಪ್ರಕರಣದ ತನಿಖೆ ನಡೆಸಿದ್ದ ಆಗ್ನೇಯ ವಿಭಾಗ ಪೊಲೀಸರು ದರೋಡೆ ಆಯ್ತೆಂದು ಸುಳ್ಳು ದೂರು ನೀಡಲಾಗಿದೆ ಎಂದು ವರದಿ ನೀಡಿದ್ದಾರೆ. ತನಿಖೆ ವೇಳೆ ಪೊಲೀಸರು PSI ಪುಟ್ಟಸ್ವಾಮಿ ಮನೆ ಬಳಿಯ ಎಲ್ಲಾ CCTV ಕ್ಯಾಮೆರಾ ದೃಶ್ಯ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಅಪರಿಚಿತ ವ್ಯಕ್ತಿಗಳು ಬಂದು ದರೋಡೆ ಮಾಡಿರುವ ಯಾವುದೇ ದೃಶ್ಯಗಳು ಕಂಡು ಬಂದಿಲ್ಲ. ಇದರ ಜೊತೆಗೆ ಮನೆಯಲ್ಲಿದ್ದ ಹಣವನ್ನು PSI ಪುಟ್ಟಸ್ವಾಮಿ ಪತ್ನಿ ತವರು ಮನೆಗೆ ನೀಡಿದ್ದರು ಎಂದು ತಿಳಿದು ಬಂದಿದೆ.

ಹೀಗಾಗಿ PSI ಮನೆಯ ದರೋಡೆ ಬೋಗಸ್​ ಕೇಸ್​ ಎಂದು ಪೊಲೀಸ್ ಕಮಿಷನರ್​​ಗೆ DCP ವರದಿ ನೀಡಿದ್ದಾರೆ. ಇನ್ನು ಬೋಗಸ್ ದೂರು ರಿಪೋರ್ಟ್ ಬೆನ್ನಲ್ಲೇ  ಬೆಂಗಳೂರಿನ ಅಶೋಕ್​​ನಗರ ಠಾಣೆಯಲ್ಲಿ PSI ಆಗಿರುವ ಪುಟ್ಟಸ್ವಾಮಿ ವಿರುದ್ದ ಶಿಸ್ತು ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.

ಇದನ್ನೂ ಓದಿ : ಜಮ್ಮುಕಾಶ್ಮೀರ, ಮಹಾರಾಷ್ಟ್ರ, ಹರಿಯಾಣ ವಿಧಾನಸಭೆ ಚುನಾವಣೆ ಇಂದು ಪ್ರಕಟ ಸಾಧ್ಯತೆ..!

Leave a Comment

DG Ad

RELATED LATEST NEWS

Top Headlines

MLA ಮುನಿರತ್ನ ವಿರುದ್ಧ ರೇಪ್ ಆರೋಪದ ಬೆನ್ನಲ್ಲೇ ಮಾಜಿ ಕಾರ್ಪೊರೇಟರ್ ಪತಿಯ ಹನಿಟ್ರ್ಯಾಪ್ ವಿಡಿಯೋ ವೈರಲ್..!

ಬೆಂಗಳೂರು : ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿ ಬಿಜೆಪಿ ಶಾಸಕ ಮುನಿರತ್ನ ಸೇರಿ ಏಳು ಮಂದಿಯ ವಿರುದ್ಧ ರಾಮನಗರ ಜಿಲ್ಲಾ ವ್ಯಾಪ್ತಿಯ ಕಗ್ಗಲಿಪುರ ಪೊಲೀಸ್ ಠಾಣೆಯಲ್ಲಿ

Live Cricket

Add Your Heading Text Here