Download Our App

Follow us

Home » ಮೆಟ್ರೋ » ಬೆಂಗಳೂರಿನಲ್ಲಿ ನಾಪತ್ತೆಯಾಗಿದ್ದ ಟೆಕ್ಕಿ ವಿಪಿನ್ ನೋಯ್ಡಾದಲ್ಲಿ ಪತ್ತೆ..!

ಬೆಂಗಳೂರಿನಲ್ಲಿ ನಾಪತ್ತೆಯಾಗಿದ್ದ ಟೆಕ್ಕಿ ವಿಪಿನ್ ನೋಯ್ಡಾದಲ್ಲಿ ಪತ್ತೆ..!

ಬೆಂಗಳೂರು : ಕೆಲ ದಿನಗಳ ಹಿಂದೆ ಬೆಂಗಳೂರಿನ ಮಾನ್ಯತಾ ಟೆಕ್ ಪಾರ್ಕ್​ ಕಂಪೆನಿಯೊಂದರಲ್ಲಿ ಟೆಕ್ಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ವಿಪಿನ್ ಗುಪ್ತ ಎಂಬುವವರು ನಾಪತ್ತೆಯಾಗಿದ್ದರು. ಇದರಿಂದ ಕಂಗಾಲಾಗಿದ್ದ ಪತ್ನಿ ಕೊಡಿಗೇಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಟೆಕ್ಕಿ ನಾಪತ್ತೆ ಹಿಂದೆ ಹಲವು ಅನುಮಾನ ಕೂಡ ಹುಟ್ಟಿಕೊಂಡಿದ್ದವು, ಇದೀಗ ಈ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಕೊನೆಗೂ ಟೆಕ್ಕಿ ವಿಪಿನ್ ನೋಯ್ಡಾದಲ್ಲಿ ಪತ್ತೆಯಾಗಿದ್ದಾರೆ.

ಕೊಡಿಗೇಹಳ್ಳಿ ಪೊಲೀಸರು ಕಾಣೆಯಾಗಿದ್ದ ಟೆಕ್ಕಿಯನ್ನು ಪತ್ತೆ ಮಾಡಿದ್ದಾರೆ. ನೊಯ್ಡಾದ ಮಾಲ್ ಒಂದರಲ್ಲಿ ಟೆಕ್ಕಿ ವಿಪಿನ್ ಗುಪ್ತ ಪತ್ತೆಯಾಗಿದ್ದು, ತಲೆಬೋಳಿಸಿಕೊಂಡು ಓಡಾಡುತ್ತಿದ್ದ. ವಿಪಿನ್ ಕೊಡಿಗೇಹಳ್ಳಿಯಿಂದ ತಿರುಪತಿಗೆ ಹೋಗಿ ದೇವರಿಗೆ ಮುಡಿಕೊಟ್ಟು ನೋಯ್ಡಾಗೆ ತೆರಳಿದ್ದ.

ಟೆಕ್ಕಿ ನಾಪತ್ತೆ ಹಿಂದೆ ಹಲವು ಅನುಮಾನ ಕೂಡ ಹುಟ್ಟಿಕೊಂಡಿದ್ದವು, ಟೆಕ್ಕಿ ಅಜಿತಾಬ್ ಮಿಸ್ಸಿಂಗ್​ಗೆ ವಿಪಿನ್ ನಾಪತ್ತೆ ಹೋಲಿಕೆಯಾಗಿತ್ತು. ಕಾಣೆಯಾದ ಬಗ್ಗೆ ಪತ್ನಿ ಮಿಸ್ಸಿಂಗ್ ದೂರು ನೀಡಿದ್ದರು. ಪೊಲೀಸರು ದೂರು ದಾಖಲಿಸಿ ಟೆಕ್ಕಿ ವಿಪಿನ್​​ನ್ನು ನೊಯ್ಡಾದಲ್ಲಿ ಪತ್ತೆ ಹಚ್ಚಿದ್ದಾರೆ.

ಇದನ್ನೂ ಓದಿ : ವರಮಹಾಲಕ್ಷ್ಮಿ ಹಬ್ಬದಂದೇ ಮನೆ ಮಾಲೀಕರ ಕೈ ಸೇರಿತು ಕಳುವಾಗಿದ್ದ ಚಿನ್ನಾಭರಣ – ನಾಲ್ವರು ಆರೋಪಿಗಳು ಅರೆಸ್ಟ್​..!

Leave a Comment

DG Ad

RELATED LATEST NEWS

Top Headlines

ಹೊರನಾಡು ಅನ್ನಪೂರ್ಣೇಶ್ವರಿ ದೇಗುಲದಲ್ಲಿ ಡ್ರೆಸ್ ಕೋಡ್ ಜಾರಿ – ದೇವರ ದರ್ಶನಕ್ಕೆ ಸಾಂಪ್ರದಾಯಿಕ ಉಡುಗೆ ಕಡ್ಡಾಯ..!

ಚಿಕ್ಕಮಗಳೂರು : ಇತ್ತೀಚೆಗೆ ಶೃಂಗೇರಿಯ ಶ್ರೀ ಶಾರದಾಂಬೆ ಸನ್ನಿಧಾನದಲ್ಲಿ ಹಾಗೂ ಸುತ್ತಲಿನ ದೇವಸ್ಥಾನಗಳಲ್ಲಿ ಡ್ರೆಸ್ ಕೋಡ್ ಜಾರಿಯಾಗಿತ್ತು. ಇದೀಗ ರಾಜ್ಯದ ಪ್ರಸಿದ್ಧ ಯಾತ್ರಾ ಸ್ಥಳವಾದ ಹೊರನಾಡು ಶ್ರೀ

Live Cricket

Add Your Heading Text Here