ಬೆಂಗಳೂರು : ಕೆಲ ದಿನಗಳ ಹಿಂದೆ ಬೆಂಗಳೂರಿನ ಮಾನ್ಯತಾ ಟೆಕ್ ಪಾರ್ಕ್ ಕಂಪೆನಿಯೊಂದರಲ್ಲಿ ಟೆಕ್ಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ವಿಪಿನ್ ಗುಪ್ತ ಎಂಬುವವರು ನಾಪತ್ತೆಯಾಗಿದ್ದರು. ಇದರಿಂದ ಕಂಗಾಲಾಗಿದ್ದ ಪತ್ನಿ ಕೊಡಿಗೇಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಟೆಕ್ಕಿ ನಾಪತ್ತೆ ಹಿಂದೆ ಹಲವು ಅನುಮಾನ ಕೂಡ ಹುಟ್ಟಿಕೊಂಡಿದ್ದವು, ಇದೀಗ ಈ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಕೊನೆಗೂ ಟೆಕ್ಕಿ ವಿಪಿನ್ ನೋಯ್ಡಾದಲ್ಲಿ ಪತ್ತೆಯಾಗಿದ್ದಾರೆ.
ಕೊಡಿಗೇಹಳ್ಳಿ ಪೊಲೀಸರು ಕಾಣೆಯಾಗಿದ್ದ ಟೆಕ್ಕಿಯನ್ನು ಪತ್ತೆ ಮಾಡಿದ್ದಾರೆ. ನೊಯ್ಡಾದ ಮಾಲ್ ಒಂದರಲ್ಲಿ ಟೆಕ್ಕಿ ವಿಪಿನ್ ಗುಪ್ತ ಪತ್ತೆಯಾಗಿದ್ದು, ತಲೆಬೋಳಿಸಿಕೊಂಡು ಓಡಾಡುತ್ತಿದ್ದ. ವಿಪಿನ್ ಕೊಡಿಗೇಹಳ್ಳಿಯಿಂದ ತಿರುಪತಿಗೆ ಹೋಗಿ ದೇವರಿಗೆ ಮುಡಿಕೊಟ್ಟು ನೋಯ್ಡಾಗೆ ತೆರಳಿದ್ದ.
ಟೆಕ್ಕಿ ನಾಪತ್ತೆ ಹಿಂದೆ ಹಲವು ಅನುಮಾನ ಕೂಡ ಹುಟ್ಟಿಕೊಂಡಿದ್ದವು, ಟೆಕ್ಕಿ ಅಜಿತಾಬ್ ಮಿಸ್ಸಿಂಗ್ಗೆ ವಿಪಿನ್ ನಾಪತ್ತೆ ಹೋಲಿಕೆಯಾಗಿತ್ತು. ಕಾಣೆಯಾದ ಬಗ್ಗೆ ಪತ್ನಿ ಮಿಸ್ಸಿಂಗ್ ದೂರು ನೀಡಿದ್ದರು. ಪೊಲೀಸರು ದೂರು ದಾಖಲಿಸಿ ಟೆಕ್ಕಿ ವಿಪಿನ್ನ್ನು ನೊಯ್ಡಾದಲ್ಲಿ ಪತ್ತೆ ಹಚ್ಚಿದ್ದಾರೆ.
ಇದನ್ನೂ ಓದಿ : ವರಮಹಾಲಕ್ಷ್ಮಿ ಹಬ್ಬದಂದೇ ಮನೆ ಮಾಲೀಕರ ಕೈ ಸೇರಿತು ಕಳುವಾಗಿದ್ದ ಚಿನ್ನಾಭರಣ – ನಾಲ್ವರು ಆರೋಪಿಗಳು ಅರೆಸ್ಟ್..!