ಭಾರತದ ಹೆಮ್ಮೆಯ ಕ್ರೀಡಾಪಟು ವಿನೇಶ್ ಫೋಗಟ್ ಒಲಿಂಪಿಕ್ಸ್‌ನ ಮಹಿಳೆಯರ 50ಕಜಿ ಫ್ರೀ ಸ್ಟೈಲ್ ಕುಸ್ತಿ ವಿಭಾಗದಲ್ಲಿ ಫೈನಲ್ ಪ್ರವೇಶಿಸುವ ಮೂಲಕ ಇಡೀ ದೇಶವೇ ತನ್ನತ್ತ ತಿರುಗಿ ನೋಡುವಂತಾ ಸಾಧನೆ ಮಾಡಿದ್ದರು.
ಇನ್ನೇನು ಭಾರತಕ್ಕೆ ಬೆಳ್ಳಿ ಅಥವಾ ಚಿನ್ನದ ಪದಕ ಖಚಿತ ಎನ್ನುತ್ತಿರುವಾಗಲೇ ಅವರನ್ನು ಫೈನಲ್ ಪಂದ್ಯದಿಂದ ಅನರ್ಹಗೊಳಿಸಿ ಆದೇಶ ಹೊರಡಿಸಲಾಯಿತು. ಅವರು 50 ಕೆಜಿಗಿಂತಲೂ 100 ಗ್ರಾಮ್ ತೂಕ ಹೆಚ್ಚಿದ್ದಾರೆ ಎಂದು ಅವರನ್ನು ಫೈನಲ್ ಪಂದ್ಯದಿಂದ ಅನರ್ಹಗೊಳಿಸಲಾಗಿತ್ತು.
ಬಳಿಕ ವಿನೇಶ್ ಫೋಗಟ್ ಈ ಅನರ್ಹತೆಯನ್ನು ಪ್ರಶ್ನಿಸಿ ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯಕ್ಕೆ (ಸಿಎಎಸ್) ಮೇಲ್ಮನವಿ ಸಲ್ಲಿಸಿದ್ದರು. ಅಂತಿಮವಾಗಿ ತಮಗೆ ಬೆಳ್ಳಿ ಪದಕವನ್ನಾದರೂ ನೀಡಬೇಕೆಂದು ಕೋರಿದ್ದರು. ಈ ಕುರಿತು ನಿನ್ನೆ ವಿಚಾರಣೆ ನೆಡೆಸಿ ವಾದ, ಪ್ರತಿವಾದ ಆಲಿಸಿದ ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯ ಅರ್ಜಿಯನ್ನು ವಜಾಗೊಳಿಸಿ ತೀರ್ಪು ನೀಡಿದೆ.
ನ್ಯಾಯಾಲಯ ಫೋಗಟ್ ಅನರ್ಹತೆಯನ್ನು ಎತ್ತಿಹಿಡಿದಿದ್ದು, ಆ ಮೂಲಕ ನ್ಯಾಯಾಲದಲ್ಲಿ ಆದರೂ ಭಾರತಕ್ಕೆ ಇನ್ನೊಂದು ಪದಕ ಸಿಗಲಿದೆ ಎಂದು ನಂಬಿಕೊಂಡಿದ್ದ ಕೋಟ್ಯಾಂತರ ಭಾರತೀಯರ ಪದಕದ ಕನಸು ನುಚ್ಚು ನೂರಾಗಿದೆ. ವಿನೇಶ್ ಫೋಗಟ್ ಅರ್ಜಿಯನ್ನು ವಜಾಗೊಳಿಸಿದ ಕೋರ್ಟ್ (ಸಿಎಎಸ್) ನಡೆಗೆ ಭಾರತೀಯ ಒಲಿಂಪಿಕ್ಸ್ ಸಂಸ್ಥೆಯ ಅಧ್ಯಕ್ಷೆ ಡಾ.ಪಿ.ಟಿ.ಉಷಾ ಅವರು ಆಘಾತಕ್ಕೊಳಗಾಗುವುದರೊಂದಿಗೆ ನಿರಾಶೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ರಜತ್ ಮೌರ್ಯ ನಟನೆಯ ’ವೈಕುಂಠ ಸಮಾರಾಧನೆ’ ಚಿತ್ರದ ಪೋಸ್ಟರ್ ರಿಲೀಸ್..!