Download Our App

Follow us

Home » ಸಿನಿಮಾ » ರಜತ್ ಮೌರ್ಯ ನಟನೆಯ ’ವೈಕುಂಠ ಸಮಾರಾಧನೆ’ ಚಿತ್ರದ ಪೋಸ್ಟರ್ ರಿಲೀಸ್​​..!

ರಜತ್ ಮೌರ್ಯ ನಟನೆಯ ’ವೈಕುಂಠ ಸಮಾರಾಧನೆ’ ಚಿತ್ರದ ಪೋಸ್ಟರ್ ರಿಲೀಸ್​​..!

ಕೆಲವು ಚಿತ್ರಗಳು ಶೀರ್ಷಿಕೆಯಿಂದಲೇ ಗಮನ ಸೆಳೆಯುತ್ತವೆ. ಆ ಸಾಲಿಗೆ ಇದೀಗ ’ವೈಕುಂಠ ಸಮಾರಾಧನೆ’ ಚಿತ್ರವೊಂದು ಸೇರ್ಪಡೆಯಾಗಿದೆ. ರಜತ್ ಮೌರ್ಯ ನಿರ್ದೇಶನದೊಂದಿಗೆ, ನಾಯಕನಾಗಿ ನಟಿಸುತ್ತಿರುವ ’ವೈಕುಂಠ ಸಮಾರಾಧನೆ’ ಚಿತ್ರದ ಪೋಸ್ಟರ್​​ರನ್ನು ಕಲ್ಕಿ ಜಯಂತಿ ಶ್ರಾವಣ ಶನಿವಾರ ಶುಭ ದಿನದಂದು ಬಿಡುಗಡೆ ಮಾಡಲಾಯಿತು.

ವೃತ್ತಿಯಲ್ಲಿ ಹೆಸರು ಮಾಡಿರುವ ಅಡ್ವೋಕೇಟ್ ರಜತ್ ಮೌರ್ಯ ಅವರ ಪ್ರವೃತ್ತಿ ಬಣ್ಣದಲೋಕ. ಬಿಡುವಿನ ವೇಳೆಯಲ್ಲಿ ನಟನೆ, ನಿರ್ದೇಶನದ ತರಬೇತಿಯನ್ನು ಪಡೆದುಕೊಂಡಿದ್ದಾರೆ. ಜೊತೆಗೆ ಮಾಡೆಲ್ ಆಗಿದ್ದು, ಇವರ ಅಭಿನಯದ ಜಾಹಿರಾತುಗಳು ಐಪಿಎಲ್ ಪಂದ್ಯಗಳಲ್ಲಿ ಸ್ಟ್ರೀಮಿಂಗ್ ಆಗಿದೆ. ಇದರ ಅನುಭವದಿಂದಲೇ ಸಿನಿಮಾಕ್ಕೆ ಕಥೆ, ಚಿತ್ರಕಥೆ, ನಿರ್ದೇಶನ ಮತ್ತು ನಾಯಕನಾಗಿ ಅಭಿನಯಿಸುತ್ತಿದ್ದಾರೆ. ಈ ಸಿನಿಮಾವನ್ನು ಗೇರ್‌ಗಲ್ ಫಿಲಂಸ್ ಬ್ಯಾನರ್ ಅಡಿಯಲ್ಲಿ ಆಶಾ ಗೇರ್‌ಗಲ್ ನಿರ್ಮಾಣ ಮಾಡುತ್ತಿದ್ದಾರೆ.

ಸದಭಿರುಚಿಯ ’ಬ್ಲಿಂಕ್’ ’ಜಲಪಾತ’ ’ಶಾಖಾಹಾರಿ’ ’ಕೆರೆಬೇಟೆ’ ’4ಎನ್6’ ಮತ್ತು ’ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ’ ಚಿತ್ರಗಳ ನಿರ್ಮಾಪಕರು, ನಿರ್ದೇಶಕರು, ’ಹಾಸ್ಟಲ್ ಹುಡುಗರು ಬೇಕಾಗಿದ್ದಾರೆ’ ವಾರ್ಡನ್ ಖ್ಯಾತಿಯ ಮಂಜುನಾಥ್ ಮತ್ತು ವಕೀಲರುಗಳು ಆಗಮಿಸಿ ಸ್ನೇಹಿತನಿಗೆ ಶುಭ ಹಾರೈಸಿದರು.

’ಇದು ನಮ್ಮ ಸಿನಿಮಾದ ಡೆತ್ ಲುಕ್ ಪೋಸ್ಟರ್’ ಎಂದು ವೈಕುಂಠ ಸಮಾರಾಧನೆ ಪತ್ರಿಕೆ ರೀತಿಯಲ್ಲಿಯೇ ಕಪ್ಪು ಬಿಳುಪಿನಲ್ಲಿ ಸಿದ್ದಗೊಂಡಿದ್ದು, ಜನನ, ಮರಣ ಇರುವಂತೆ ಇದರಲ್ಲಿ ಮುಹೂರ್ತ 10.8.24 ರಿಲೀಸ್ 12.12.25 ಎಂಬುದಾಗಿ ಹೇಳಿಕೊಂಡಿದೆ. ಈಗಾಗಲೇ ಡೆತ್ ಲುಕ್ ಪೋಸ್ಟರ್ ರೀಲ್ಸ್ ವೈರಲ್ ಆಗಿದ್ದು, ಎಲ್ಲಾ ಕಡೆ ಸದ್ದು ಮಾಡುತ್ತಿದೆ.

ಈ ಸಿನಿಮಾಕ್ಕೆ ರುತ್ವಿಕ್‌ಮುರಳಿಧರ್ ಸಂಗೀತ, ಹರ್ಷಿತ್.ಬಿ.ಗೌಡ ಛಾಯಾಗ್ರಹಣ, ಹಾಗೂ ನಾಗೇಂದ್ರ ಯಡಿಯಾಳ್ ಕಾರ್ಯಕಾರಿ ನಿರ್ಮಾಪಕ. ಆದರ್ಶ್‌ಬೆಳ್ಳೂರು, ದರ್ಶನ್‌ಕುಮಾರ್, ಸಿದ್ದಾನ್ ವಿಜಯ್, ನವೀನ್, ಸಚ್ಚಿನ್ ನಿರ್ದೇಶನ ತಂಡದಲ್ಲಿದ್ದು, ಶೇಕಡ 60 ರಷ್ಟು ಮಲೆನಾಡು, ಉಳಿದುದನ್ನು ಬೆಂಗಳೂರು ಸುತ್ತಮತ್ತ ಚಿತ್ರೀಕರಿಸಲು ಯೋಜನೆ ರೂಪಿಸಲಾಗಿದೆ.

ಇದನ್ನೂ ಓದಿ : ‘ಕ್ರೆಡಿಟ್ ಕುಮಾರ’ ಮೂಲಕ ಸಿನಿಮಾರಂಗಕ್ಕೆ ಎಂಟ್ರಿಕೊಟ್ಟ ಪತ್ರಕರ್ತ ಹರೀಶ್..!

Leave a Comment

DG Ad

RELATED LATEST NEWS

Top Headlines

ಬೆಂಗಳೂರಿನ ವಿದ್ಯಾರ್ಥಿ ಕೇರಳದಲ್ಲಿ ನಿಫಾ ವೈರಸ್​ಗೆ ಬಲಿ – ರಾಜ್ಯದಲ್ಲಿ ಹೆಚ್ಚಿದ ಆತಂಕ..!

ಬೆಂಗಳೂರು : ಬೆಂಗಳೂರಿನ ವಿದ್ಯಾರ್ಥಿಯೊಬ್ಬ ಕೇರಳದಲ್ಲಿ ಮಾರಣಾಂತಿಕ ನಿಫಾ ವೈರಸ್​ಗೆ ಬಲಿಯಾಗಿದ್ದಾನೆ. ಬೆಂಗಳೂರಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಮಲಪ್ಪುರಂನ ವಿದ್ಯಾರ್ಥಿ ಊರಿಗೆ ಹೋಗಿದ್ದಾಗ ಜ್ವರದಿಂದ ಆಸ್ಪತ್ರೆಗೆ ದಾಖಲಾಗಿದ್ದ. ಕಳೆದ

Live Cricket

Add Your Heading Text Here