ಮಂಡ್ಯ : ಹೇಮಾವತಿ ಬಲದಂಡೆ ವಿತರಣಾ ನಾಲೆಯ ಆಧುನೀಕರಣ ಕಾಮಗಾರಿ ಕಳಪೆ ಹಿನ್ನಲೆ ಕೆ.ಆರ್.ಪೇಟೆಯಲ್ಲಿ ರೈತರು ಮತ್ತು ಸಂಘನೆಗಳ ಪದಾಧಿಕಾರಿಗಳು ರೊಚ್ಚಿಗೆದ್ದಿದ್ದಾರೆ. ಕೆ.ಆರ್.ಪೇಟೆ ಪಟ್ಟಣದ ಹೇಮಾವತಿ ನೀರಾವರಿ ಕಚೇರಿಗೆ ರೈತರು ಮುತ್ತಿಗೆ ಹಾಕಿ ಕಚೇರಿ ಮುಂದೆ ಧರಣಿ ನಡೆಸುತ್ತಿದ್ದಾರೆ.
60 ಕೋಟಿ ವೆಚ್ಚದಲ್ಲಿ ನಡೆಯುತ್ತಿರುವ ಕಾಮಗಾರಿಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ. ಗುತ್ತಿಗೆದಾರನೊಂದಿಗೆ ಅಧಿಕಾರಿಗಳು ಸೇರಿ ಅಕ್ರಮ ಎಸಗಿರುವ ಆರೋಪ ಕೂಡ ಕೇಳಿ ಬಂದಿದೆ. ಈ ಹಿನ್ನೆಲೆ ವಿತರಣಾ ನಾಲೆಯ 54ರ ಅಭಿವೃದ್ಧಿ ಸಂಪೂರ್ಣ ಕಳಪೆ ಎಂದು ಆರೋಪಿಸಿ ತನಿಖೆಗೆ ಒತ್ತಾಯಿಸಿ ಪಟ್ಟಣದ ಎಇ ಕಚೇರಿ ಮುಂದೆ ರೈತರು ಮತ್ತು ಸಂಘನೆಗಳ ಪದಾಧಿಕಾರಿಗಳು ಧರಣಿ ನಡೆಸುತ್ತಿದ್ದಾರೆ.
ರೈತ ಮುಖಂಡ ರಾಜೇಗೌಡ ನೇತೃತ್ವದಲ್ಲಿ ನ್ಯಾಯಕ್ಕಾಗಿ ಹೋರಾಟ ನಡೆಯುತ್ತಿದ್ದು, ರೈತರ ಹೋರಾಟಕ್ಕೆ ಕರವೇ ಸಂಘಟನೆಗಳು ಕೂಡ ಕೈಜೋಡಿಸಿದೆ. ರೈತರು ಅಕ್ರಮದ ದಾಖಲೆಗಳೊಂದಿಗೆ ಕಚೇರಿ ಮುಂದೆ ಕುಳಿತು ಆಕ್ರೋಶ ಹೊಹಾಕಿದ್ದು, ರೈತರ ಸಮಸ್ಯಗೆ ಸ್ಪಂದಿಸದ ಸರ್ಕಾರ ಮತ್ತು ಅಧಿಕಾರಿಗಳ ವಿರುದ್ದ ಹೋರಾಟಗಾರರು ಆಕ್ರೋಶ ಹೊರಹಾಕಿದ್ದಾರೆ.
ಇನ್ನು ಕಾಟಾಚಾರಕ್ಕೆ ಸಮಸ್ಯೆ ಕೇಳಲು ಬಂದ ಅಧಿಕಾರಿಗೆ ರೈತರು ತರಾಟೆಗೆ ತೆಗೆದುಕೊಂಡಿದ್ದು, ಅಕ್ರಮ ಎಸಗಿರುವ ಗುತ್ತಿಗೆದಾರ ಹಾಗು ಅಧಿಕಾರಿಗಳ ವಿರುದ್ದ ಕ್ರಮಕ್ಕೆ ಹೋರಾಟಗಾರ ಒತ್ತಾಯಿಸಿದ್ದಾರೆ.
ಇದನ್ನೂ ಓದಿ : ಹೆಬ್ಬಾಳ ಫ್ಲೈಓವರ್ನಲ್ಲಿ BMTC ವೋಲ್ವೋ ಬಸ್ನಿಂದ ಸರಣಿ ಅಪಘಾತ – ಚಾಲಕನ ಯಡವಟ್ಟಿಗೆ ಬೈಕ್, ಕಾರು ಜಖಂ..!