Download Our App

Follow us

Home » ಮೆಟ್ರೋ » ಹೆಬ್ಬಾಳ ಫ್ಲೈಓವರ್​ನಲ್ಲಿ​ BMTC ವೋಲ್ವೋ ಬಸ್​ನಿಂದ ಸರಣಿ ಅಪಘಾತ – ಚಾಲಕನ ಯಡವಟ್ಟಿಗೆ ಬೈಕ್, ಕಾರು ಜಖಂ..!

ಹೆಬ್ಬಾಳ ಫ್ಲೈಓವರ್​ನಲ್ಲಿ​ BMTC ವೋಲ್ವೋ ಬಸ್​ನಿಂದ ಸರಣಿ ಅಪಘಾತ – ಚಾಲಕನ ಯಡವಟ್ಟಿಗೆ ಬೈಕ್, ಕಾರು ಜಖಂ..!

ಬೆಂಗಳೂರು : ಚಾಲಕನ ನಿಯಂತ್ರಣ ತಪ್ಪಿ ಬಿಎಂಟಿಸಿ ವೋಲ್ವೋ ಬಸ್​,​ ಬೈಕ್ ಹಾಗೂ ಕಾರುಗಳ ನಡುವೆ ಸರಣಿ ಅಪಘಾತವಾದ ಘಟನೆ ಹೆಬ್ಬಾಳದಲ್ಲಿ ನಡೆದಿದೆ.

ನಿನ್ನೆ ಬೆಳಗ್ಗೆ 9.25 ಗಂಟೆಗೆ ಹೆಬ್ಬಾಳ ಫ್ಲೈಓವರ್ ಮೇಲೆ ನಿಧಾನ ಗತಿಯಲ್ಲಿ ಏರ್​ಪೋರ್ಟ್​​ನಿಂದ ಹೆಚ್ಎಸ್ಆರ್ ಲೇಔಟ್ ಕಡೆ KA-57 F-1794 ನಂಬರ್​​ನ ಬಿಎಂಟಿಸಿ ವೋಲ್ವೋ ಬಸ್ ​​ ಹೋಗುತ್ತಿತ್ತು. ಹೆಬ್ಬಾಳದ ಎಸ್ಟೀಮ್​​​​​ ಮಾಲ್ ಬಳಿ ಚಾಲಕನ ನಿಯಂತ್ರಣ ತಪ್ಪಿ ನಾಲ್ಕು ಬೈಕ್​ಗಳು ಹಾಗೂ ಕಾರುಗಳಿಗೆ ವೋಲ್ವೋ ಬಸ್ ಡಿಕ್ಕಿ ಹೊಡೆದಿದೆ.

ಬಸ್​ ಡಿಕ್ಕಿ ಹೊಡೆದ ರಭಸಕ್ಕೆ ರಸ್ತೆಯಲ್ಲಿ ಸವಾರರು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದಾರೆ. ಸ್ವಲ್ಪ ಹೆಚ್ಚು ಕಮ್ಮಿ ಆಗಿದ್ರೂ ಹತ್ತಾರು ವಾಹನ ಸವಾರರ ಪ್ರಾಣ ಹೋಗ್ತಿತ್ತು. ಅಪಘಾತದಲ್ಲಿ ಓರ್ವ ವಾಹನ ಸವಾರನ ಕಾಲಿಗೆ ಗಾಯವಾಗಿದೆ. ಸದ್ಯ ಬಿಎಂಟಿಸಿ ವೋಲ್ವೋ ಬಸ್ ಆಕ್ಸಿಡೆಂಟ್​ನ ಸಿಸಿಟಿವಿ ದೃಶ್ಯ ಎಲ್ಲೆಡೆ ವೈರಲ್​ ಆಗುತ್ತಿದೆ.

ಇದನ್ನೂ ಓದಿ : ಬಹುನಿರೀಕ್ಷಿತ ‘ಗೌರಿ’ ಚಿತ್ರಕ್ಕೆ ನಟ ಉಪೇಂದ್ರ ಸಾಥ್​ – ಆಗಸ್ಟ್ 15ರಂದು ಸಿನಿಮಾ ತೆರೆಗೆ..!

Leave a Comment

DG Ad

RELATED LATEST NEWS

Top Headlines

ಕಾಸ್ಟಿಂಗ್​​ ಕೌಚ್​ ಸುನಾಮಿ – ಇಂದು ಮಹಿಳಾ ಆಯೋಗದಿಂದ ಫಿಲ್ಮ್​​ ಚೇಂಬರ್​​ನಲ್ಲಿ ಮೆಗಾ ಮೀಟಿಂಗ್​..!

ಬೆಂಗಳೂರು : ಈಗಾಗಲೇ ಮಾಲಿವುಡ್‌ನಲ್ಲಿ ಹೇಮಾ ವರದಿ ಸುನಾಮಿ ಎಬ್ಬಿಸಿದ್ದು, ಕೇರಳದಲ್ಲಿ ಎದ್ದಿರೋ ಈ ಸುನಾಮಿ ಈಗ ಸ್ಯಾಂಡಲ್​ವುಡ್​​​ಗೂ ಬಂದಪ್ಪಳಿಸುವಂತಿದೆ. ಫಿಲ್ಮ್ ಚೇಂಬರ್‌ನಲ್ಲಿ ಇಂದು ಮೆಗಾ ಮೀಟಿಂಗ್

Live Cricket

Add Your Heading Text Here