ಏಷ್ಯಾದಲ್ಲಿಯೇ 4ನೇ ಸ್ಥಾನದಲ್ಲಿರುವ ಬೆಂಗಳೂರಿನ ಲೀಲಾ ಪ್ಯಾಲೇಸ್ ಹೋಟೆಲ್‌ಗಳು ಮತ್ತು ರೆಸಾರ್ಟ್‌ಗಳು ಇತ್ತೀಚೆಗೆ ಮಹತ್ವದ ಮೈಲಿಗಲ್ಲನ್ನು ಆಚರಿಸಿದವು. ಟ್ರಾವೆಲ್ + ಲೀಸರ್ USAಯ ಓದುಗರಿಂದ 2024ರ ಟಾಪ್ 3 ವಿಶ್ವದ ಅತ್ಯುತ್ತಮ ಹೋಟೆಲ್ ಬ್ರ್ಯಾಂಡ್‌ಗಳಲ್ಲಿ ಲೀಲಾ ಪ್ಯಾಲೆಸ್ ಗುರುತಿಸಲ್ಪಟ್ಟಿದೆ. 2020ರಿಂದ ಈ ವರೆಗೂ ಸತತ ನಾಲ್ಕು ವರ್ಷ ಈ ಗೌರವ ಸಿಕ್ಕಿದ್ದು, ದೇಶದಲ್ಲಿ ನಂಬರ್ 1 ಸ್ಥಾನದಲ್ಲಿದೆ.
ಈ ಮೈಲಿಗಲ್ಲನ್ನು ಸೆಲೆಬ್ರೇಟ್ ಮಾಡಲೆಂದೇ ಲೀಲಾ ಪ್ಯಾಲೇಸ್ ಹೋಟೆಲ್‌ಗಳು ಮತ್ತು ರೆಸಾರ್ಟ್ 3 ಬಾರಿ ಗ್ರ್ಯಾಮಿ ಪ್ರಶಸ್ತಿ ವಿಜೇತ ಮತ್ತು ವಿಶ್ವಸಂಸ್ಥೆಯ ಸದ್ಭಾವನಾ ರಾಯಭಾರಿಯಾಗಿರುವ ರಿಕಿ ಕೇಜ್ ಅವರ ಜತೆಗೆ ಕೈ ಜೋಡಿಸಿದೆ. ಇದೇ ವೇಳೆ 14 ಸಾವಿರ ಬುಡಕಟ್ಟು ಮಕ್ಕಳೊಂದಿಗೆ ಭಾರತದ ರಾಷ್ಟ್ರಗೀತೆಯನ್ನ ರೆಕಾರ್ಡ್ ಮಾಡಿ ಗಿನ್ನೆಸ್ ದಾಖಲೆ ಬರೆದಿದ್ದಾರೆ. ಈ ಹಾಡಿನ ರೆಕಾರ್ಡಿಂಗ್‌ಗೆ ಖ್ಯಾತ ಸಂಗೀತಗಾರರು ಕೈ ಜೋಡಿಸಿದ್ದಾರೆ.
ರಿಕಿ ಕೇಜ್ ಜೊತೆಗೆ ಬಾನ್ಸುರಿ ಮಾಂತ್ರಿಕ ಮತ್ತು ಪದ್ಮವಿಭೂಷಣ ವಿಜೇತ ಪಂಡಿತ್ ಹರಿಪ್ರಸಾದ್ ಚೌರಾಸಿಯಾ ಜೊತೆಯಾಗಿದ್ದಾರೆ. ಬಾನ್ಸುರಿ ಮೆಸ್ಟ್ರೋ ಮತ್ತು ಗ್ರ್ಯಾಮಿ ಪ್ರಶಸ್ತಿ ವಿಜೇತ ರಾಕೇಶ್ ಚೌರಾಸಿಯಾ, ಸಂತೂರ್ ಮೆಸ್ಟ್ರೋ ರಾಹುಲ್ ಶರ್ಮಾ, ಸರೋದ್ ಮಾಸ್ಟ್ರೋಸ್‌ಗಳಾದ ಅಮಾನ್ ಮತ್ತು ಅಯಾನ್, ಪದ್ಮಶ್ರೀ ವಿಜೇತರು ಮತ್ತು ನಾದಸ್ವರಂ ಮೆಸ್ಟ್ರೋಗಳಾದ ಶೇಕ್ ಮಹಬೂಬ್ ಸುಭಾನಿ ಮತ್ತು ಕಲೀಶಾಬಿ ಮಹಬೂಬ್, ವೀಣಾ ಮೆಸ್ಟ್ರೋ ಡಾ ಜಯಂತಿ ಕುಮರೇಶ್, ಮತ್ತು ಕರ್ನಾಟಿಕ್ ತಾಳವಾದ್ಯದ ಗಿರಿಧರ್ ಉಡುಪ ಈ ರೆಕಾರ್ಡಿಂಗ್ ಮತ್ತು ಗಿನ್ನಿಸ್ ದಾಖಲೆಯ ಭಾಗವಾಗಿದ್ದಾರೆ.
ಕೇಜ್ ಅವರು ಡಾ ಅಚ್ಯುತ ಸಮಂತಾ ಅವರ ಸಹಯೋಗದೊಂದಿಗೆ ಒಡಿಶಾದ 14,000 ಬುಡಕಟ್ಟು ಮಕ್ಕಳ ಗಾಯನವನ್ನು ರೆಕಾರ್ಡ್ ಮಾಡಿದ್ದಾರೆ. ಒಡಿಶಾದ ಭುವನೇಶ್ವರದಲ್ಲಿರುವ ಕಳಿಂಗಾ ಇನ್‌ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್‌ನಲ್ಲಿ ಒಂದೇ ಸ್ಥಳದಲ್ಲಿ ರಾಷ್ಟ್ರಗೀತೆಯನ್ನು ರೆಕಾರ್ಡ್ ಮಾಡಲಾಗಿದೆ. ಈ ಬಗ್ಗೆ ಮಾತನಾಡಿರುವ ರಿಕ್ಕಿ ಕೇಜ್ ಸಂತಸ ಹೊರಹಾಕಿದ್ದಾರೆ.
ರಿಕಿ ಕೇಜ್ ಹೇಳಿದ್ದೇನು?
“ಲೀಲಾ ಪ್ಯಾಲೇಸ್ ಹೋಟೆಲ್‌ಗಳು ಮತ್ತು ರೆಸಾರ್ಟ್ ಸಂಸ್ಥೆ ಜೊತೆಗೆ ಈ ವಿಶೇಷತೆಯನ್ನು ಹಂಚಿಕೊಳ್ಳುತ್ತಿರುವುದು ವಿಶೇಷ ಕ್ಷಣ. ದಿ ಲೀಲಾ ಭಾರತದ ದೊಡ್ಡ ಹೊಟೇಲ್ ಬ್ರ್ಯಾಂಡ್. ನಮ್ಮ ದೇಶದ ಬಗ್ಗೆ ಅಪರೂಪದ ಮತ್ತು ಸುಂದರವಾದ ಎಲ್ಲವನ್ನೂ ಇಲ್ಲಿ ಕಾಣಬಹುದು. ನಮ್ಮ ಶ್ರೀಮಂತ ಪರಂಪರೆ, ವೈವಿಧ್ಯಮಯ ಸಂಸ್ಕೃತಿ ಮತ್ತು ಭಾರತವು ಜಗತ್ತಿಗೆ ನೀಡಿರುವ ಅನನ್ಯ ಕೊಡುಗೆಗಳನ್ನು ಎತ್ತಿ ತೋರಿಸುವ ಬ್ರ್ಯಾಂಡ್‌ನ ಬದ್ಧತೆಯನ್ನು ನಾನು ಪ್ರತಿಧ್ವನಿಸುತ್ತಿದ್ದೇನೆ. ಭಾರತದ ಏಕತೆ ಮತ್ತು ವೈವಿಧ್ಯತೆಯನ್ನು ಆಚರಿಸಲು ಇಂತಹ ಐಕಾನಿಕ್ ಬ್ರ್ಯಾಂಡ್‌ನೊಂದಿಗೆ ಕೈ ಜೋಡಿಸುವುದು ನಿಜಕ್ಕೂ ನನಗೆ ಸಿಕ್ಕ ದೊಡ್ಡ ಗೌರವ” ಎಂದಿದ್ದಾರೆ.
“ನಮ್ಮ ಭಾರತೀಯ ರಾಷ್ಟ್ರಗೀತೆಯನ್ನು 14ಸಾವಿರ ಬುಡಕಟ್ಟು ಮಕ್ಕಳಿಂದ ಹಾಡಿಸಿದ್ದೇವೆ. ಅತಿದೊಡ್ಡ ಆರ್ಕೆಸ್ಟ್ರಾದೊಂದಿಗೆ ಈ ಹಾಡನ್ನು ರೆಕಾರ್ಡ್ ಮಾಡಲಾಗಿದೆ. ಭುವನೇಶ್ವರದಲ್ಲಿರುವ ಕಳಿಂಗ ಇನ್‌ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್‌ನಲ್ಲಿ ಈ ಹಾಡಿನ ರೆಕಾರ್ಡಿಂಗ್ ನಡೆದಿದೆ. ಉಚಿತ ಶಿಕ್ಷಣ, ವಸತಿ, ಆಹಾರ ಮತ್ತು ಆರೋಗ್ಯ ಸೇವೆಯನ್ನು ಒದಗಿಸುವ ಕಳಿಂಗ ಇನ್‌ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್‌ನ ಸಂಸ್ಥಾಪಕ ಡಾ. ಅಚ್ಯುತ ಸಮಂತ ಅವರ ಸಹಕಾರದೊಂದಿಗೆ ಇದು ಸಾಧ್ಯವಾಗಿದೆ. ಅವರ ಕ್ಯಾಂಪಸ್‌ನಲ್ಲಿ 30,000 ಕ್ಕೂ ಹೆಚ್ಚು ಸ್ಥಳೀಯ ಬುಡಕಟ್ಟು ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ” ಎಂದರು.
CEO ಅನುರಾಗ್ ಭಟ್ನಾಗರ್ ಮಾತು :
ಈ ಬಗ್ಗೆ ಪ್ರತಿಕ್ರಿಯಿಸಿದ ಲೀಲಾ ಪ್ಯಾಲೇಸ್, ಹೋಟೆಲ್‌ಗಳು ಮತ್ತು ರೆಸಾರ್ಟ್‌ಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನುರಾಗ್ ಭಟ್ನಾಗರ್ ಅವರು, “ದಿ ಲೀಲಾದಲ್ಲಿ, ಜಾಗತಿಕ ಪ್ರಯಾಣಿಕರಿಗೆ ಭಾರತೀಯ ಆತಿಥ್ಯದ ಸಾರವನ್ನು ಸಾಕಾರಗೊಳಿಸುವ ಐಶಾರಾಮಿ ಸೇವೆ ನಮ್ಮಿಂದಾಗಿದೆ. ಅದರಲ್ಲೂ ಇದೀಗ ರಿಕಿ ಕೇಜ್ ಅವರೊಂದಿಗಿನ ನಮ್ಮ ಸಹಯೋಗ ಹೀಗೆಯೇ ಮುಂದುವರಿಯಲಿದೆ. ಇದರಿಂದ ಐಷಾರಾಮಿ ಆತಿಥ್ಯ ಮತ್ತು ನಾವೀನ್ಯತೆಗೆ ನಮ್ಮ ಸಮರ್ಪಣೆಯನ್ನು ಮತ್ತಷ್ಟು ಬಲಪಡಿಸುತ್ತದೆ ಎಂದಿದ್ದಾರೆ.
ಇದನ್ನೂ ಓದಿ : ಅದ್ದೂರಿಯಾಗಿ ನಡೆಯಿತು ತರುಣ್-ಸೋನಲ್ ಹಳದಿ ಶಾಸ್ತ್ರ – ಮುದ್ದಾದ ಜೋಡಿಯ ಫೋಟೋಸ್ ಇಲ್ಲಿವೆ..!