ಸ್ಯಾಂಡಲ್‌ವುಡ್‌ನ ಸ್ಟಾರ್ ಡೈರೆಕ್ಟರ್ ತರುಣ್ ಸುಧೀರ್ ಹಾಗೂ ಕರಾವಳಿ ಬೆಡಗಿ, ನಟಿ ಸೋನಲ್ ಮೊಂಥೆರೋ ಆಗಸ್ಟ್ 11ರಂದು ಸಪ್ತಪದಿ ತುಳಿಯಲಿದ್ದಾರೆ. ಮದುವೆಗೂ ಮೊದಲು ನಿನ್ನೆ ಈ ಸುಂದರ ಜೋಡಿ ಹಳದಿ ಶಾಸ್ತ್ರವನ್ನು ಅದ್ದೂರಿಯಾಗಿ ಆಚರಿಸಿಕೊಂಡಿದ್ದಾರೆ.
ಹಳದಿ ಶಾಸ್ತ್ರ ಸಂಭ್ರಮದಲ್ಲಿ ಕುಟುಂಬಸ್ಥರು, ಆಪ್ತ ಸ್ನೇಹಿತರು, ವಿಶೇಷವಾಗಿ ನಟ ನೆನಪಿರಲಿ ಪ್ರೇಮ್ ಹಾಗೂ ಶರಣ್ ಸೇರಿದಂತೆ ಮುಂತಾದವರು ಭಾಗಿಯಾಗಿದ್ದಾರೆ.
ಹಳದಿ ಶಾಸ್ತ್ರದಲ್ಲಿ ತರುಣ್ ವೈಟ್ ವೇಸ್ಕೋಟ್ ಧರಿಸಿ ಸಖತ್ತಾಗಿ ಮಿಂಚಿದ್ದು, ಸೋನಲ್ ಕೂಡ ವೈಟ್ ಆ್ಯಂಡ್ ಎಲ್ಲೋ ಡಿಸೈನ್ ಡ್ರೆಸ್ನಲ್ಲಿ ಚೆಂದದ ಗೊಂಬೆಯಂತೆ ಕಂಗೊಳಿಸಿದ್ದಾರೆ. ಕುಟುಂಬಸ್ಥರು, ಆಪ್ತರು ಈ ಜೋಡಿಗೆ ಅರಿಶಿನ ಹಚ್ಚಿ ಸಂಭ್ರಮಿಸಿದ್ದು, ಸ್ಯಾಂಡಲ್‌ವುಡ್‌ನ ನವ ಜೋಡಿ ಕ್ಯಾಮೆರಾಗೆ ಭರ್ಜರಿಯಾಗಿ ಪೋಸ್ ಕೊಟ್ಟಿದ್ದಾರೆ.
ಜೊತೆಗೆ ಇಬ್ಬರೂ ಹಳದಿ ಶಾಸ್ತ್ರದ ನೀರಲ್ಲಿ ಮಿಂದೆದ್ದಿದ್ದಾರೆ. ತರುಣ್ ಮತ್ತು ಸೋನಲ್ ಜೋಡಿ ತಮ್ಮ ಸುಂದರ ಪೋಟೋಶೂಟ್ ಮಾಡಿಸಿ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಸದ್ಯ ಪೋಟೋಸ್ಗಳು ಎಲ್ಲೆಡೆ ವೈರಲ್ ಆಗುತ್ತಿವೆ.
ಆಗಸ್ಟ್ 11 ರಂದು ಬೆಂಗಳೂರಿನ ಮೈಸೂರು ರಸ್ತೆಯ ಆರ್‌ವಿ ಕಾಲೇಜ್ ಬಳಿಯ ಪೂರ್ಣಿಮಾ ಪ್ಯಾಲೇಸ್‌ನಲ್ಲಿ ಹಿಂದೂ ಸಂಪ್ರದಾಯದ ಪ್ರಕಾರ ತರುಣ್ ಮತ್ತು ಸೋನಲ್ ಮದುವೆ ಅದ್ದೂರಿಯಾಗಿ ನಡೆಯಲಿದ್ದು, ಇಂದು ಸಂಜೆ ಆರತಕ್ಷತೆ ಕಾರ್ಯಕ್ರಮ ಹಾಗೂ ನಾಳೆ (ಆಗಸ್ಟ್ 11) ದಾರೆ ಮಹೂರ್ತ ನೆರವೇರಲಿದೆ.
ಸೋನಲ್ ಹಾಗೂ ತರುಣ್ ಸುಧೀರ್ ಮದುವೆಗೆ ಎರಡು ರೀತಿಯ ಊಟದ ವ್ಯವಸ್ಥೆ ಮಾಡಲಾಗಿದೆ. ಸೌತ್ ಹಾಗೂ ನಾರ್ತ್ ಎರಡು ಕಡೆಯ ವಿವಿಧ ಭಕ್ಷ್ಯಗಳ ವ್ಯವಸ್ಥೆಯನ್ನ ಇಲ್ಲಿ ಪ್ಲ್ಯಾನ್ ಮಾಡಲಾಗಿದೆಯಂತೆ. ತರುಣ್-ಸೋನಲ್ ಮದುವೆಗೆ ಹಲವು ಸೆಲೆಬ್ರಿಟಿಗಳು ಆಗಮಿಸಲಿದ್ದಾರೆ.
ಕಳೆದ ಕೆಲವು ಸಮಯಗಳಿಂದ ಸೋನಲ್, ತರುಣ್ ಇವರಿಬ್ಬರು ಪರಸ್ಪರ ರಿಲೇಶನ್‌ಶಿಪ್‌ನಲ್ಲಿದ್ದಾರೆ ಮತ್ತು ಮದುವೆಯಾಗಲಿದ್ದಾರೆ ಎಂಬ ಸುದ್ದಿ ವೈರಲ್ ಆಗಿತ್ತು. ಬಳಿಕ ತರುಣ್ ಹಾಗೂ ಸೋನಲ್ ಅವರೇ ಈ ವಿಷಯವನ್ನು ಅಧಿಕೃತಗೊಳಿಸಿ, ಮದುವೆ ದಿನಾಂಕವನ್ನು ತಿಳಿಸಿದ್ದರು.
ಇದನ್ನೂ ಓದಿ : ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಆರನೇ ಪದಕ – ಕುಸ್ತಿಯಲ್ಲಿ ಕಂಚು ಗೆದ್ದ ಅಮನ್ ಸೆಹ್ರಾವತ್..!