ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನ ಮಹಿಳೆಯರು ಒಂಟಿಯಾಗಿ ಮನೆಯಿಂದ ಹೊರ ಬರುವಂತೆ ಇಲ್ವಾ? ಎಂಬ ಪ್ರಶ್ನೆ ಮೂಡಿದೆ. ಹೌದು, ಬೆಳಂಬೆಳಗ್ಗೆ 5 ಘಂಟೆ ಸಮಯದಲ್ಲಿ ನಡೆದ ಈ ಒಂದು ಘಟನೆ ನಿಜಕ್ಕೂ ಭಯ ಹುಟ್ಟಿಸುತ್ತಿದೆ. ವಾಕಿಂಗ್ ಎಂದು ರಸ್ತೆ ಬದಿ ನಿಂತಿದ್ದ ಮಹಿಳೆಯನ್ನ ವಿಕೃತ ಕಾಮಿಯೊಬ್ಬ ಬಲವಂತವಾಗಿ ತಬ್ಬಿ ಹಿಡಿದು ಚುಂಬಿಸಿದ್ದಾನೆ. ಈ ಘಟನೆಯಿಂದ ಸಿಲಿಕಾನ್ ಸಿಟಿಯಲ್ಲಿ ಮಹಿಳೆಯರಿಗೆ ಸೇಫ್ಟಿನೇ ಇಲ್ವಾ? ಎಂಬ ಪ್ರಶ್ನೆಗಳು ಹುಟ್ಟಿಕೊಂಡಿದೆ.
ಅಂದಾಗೆ ಈ ಘಟನೆ ನಡೆದಿರೋದು ಕಳೆದ ಶುಕ್ರವಾರ. ಕೋಣನಕುಂಟೆ ಬಳಿಯ ಕೃಷ್ಣಾ ನಗರದಲ್ಲಿ ರಸ್ತೆ ಬದಿ ವಾಕ್ ಮಾಡಲು ನಿಂತಿದ್ದ ಮಹಿಳೆ ಕಾಮುಕನೊಬ್ಬ ಕಾಟ ಕೊಟ್ಟಿದ್ದಾನೆ. ಮಹಿಳೆಗೆ ಗೊತ್ತಾಗದಂತೆ ಆಕೆಯ ಬಳಿ ತನ್ನ ವಿಕೃತಿ ತೋರಿದ್ದಾನೆ. ನಂತರ ಆಕೆ ತಪ್ಪಿಸಿಕೊಂಡು ಬಂದರೂ ಸಹ ನಡುರಸ್ತೆಯಲ್ಲೇ ಮಹಿಳೆ ಜೊತೆ ಅಸಭ್ಯ ವರ್ತನೆ ತೋರಿದ್ದಾನೆ. ಈ ವೇಳೆ ಕಾಮುಕನ ಕೈಯಿಂದ ತಪ್ಪಿಸಿಕೊಂಡ ಮಹಿಳೆ ರಕ್ಷಣೆಗಾಗಿ ಕಿರುಚಾಡಿದ್ದಾಳೆ. ಆಗ ಸ್ಥಳದಿಂದ ಕಾಮುಕ ಎಸ್ಕೇಪ್ ಆಗಿದ್ದಾನೆ.
ಈ ಘಟನೆ ಆಗಸ್ಟ್ 02ರ ಬೆಳಗಿನ ಜಾವ ಬೆಂಗಳೂರಿನ ಕೋಣನಕುಂಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಕಾಮುಕನ ಅಟ್ಟಹಾಸ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಘಟನೆ ಸಂಬಂಧ ಯಾವುದೇ ದೂರು ದಾಖಲಾಗಿಲ್ಲ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ.
ಇದನ್ನೂ ಓದಿ : ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಕೇಸ್ – ಐದು ತಿಂಗಳ ಬಳಿಕ ಆರೋಪಿಗಳನ್ನು ಕರೆತಂದು ಸ್ಥಳ ಮಹಜರು..!