ಪರಸ್ಪರ ಪ್ರೀತಿಸಿ ಮದುವೆ ಆದ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಅವರ ಬಾಳಿನಲ್ಲಿ ಹೊಸ ಅಧ್ಯಾಯ ಆರಂಭ ಆಗಲಿದೆ. ದೀಪಿಕಾ ಪಡುಕೋಣೆ ಸೆಪ್ಟೆಂಬರ್‌ನಲ್ಲಿ ಮಗುವಿಗೆ ಜನ್ಮ ನೀಡಲಿದ್ದಾರೆ. ಈ ಬಗ್ಗೆ ಖುದ್ದು ದೀಪಿಕಾ-ರಣವೀರ್ ದಂಪತಿ ಪೋಸ್ಟ್ ಮೂಲಕ ತಿಳಿಸಿದ್ದರು. ಆದರೆ ಇದೀಗ ದೀಪಿಕಾ ಪಡುಕೋಣೆ ಮಗುವಿನೊಂದಿಗೆ ಆಸ್ಪತ್ರೆಯಲ್ಲಿರುವ ಫೋಟೋ ವೈರಲ್ ಆಗಿದೆ. ಈ ವೈರಲ್ ಫೋಟೋ ನೋಡಿ ಜನರು ಶಾಕ್ ಆಗಿದ್ದಾರೆ.
ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಅವರಿಗೆ ಗಂಡು ಮಗು ಜನಿಸಿದೆ ಎಂದು ಹೇಳಲಾಗುತ್ತಿದೆ. ದೀಪಿಕಾ ಮತ್ತು ರಣವೀರ್ ಮಗುವಿನ ಜೊತೆಗಿರುವ ಈ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ವೈರಲ್ ಆದ ಈ ಫೋಟೋದಲ್ಲಿ ದೀಪಿಕಾ ಪಡುಕೋಣೆ ಹಾಸಿಗೆ ಮೇಲೆ ಮಲಗಿದ್ದು ಅವರ ಪಕ್ಕದಲ್ಲಿ ರಣವೀರ್ ಮಗು ಹಿಡಿದು ನಿಂತಿದ್ದಾರೆ. ಆದರೆ ಇದು ನಕಲಿ ಫೋಟೋ ಆಗಿದ್ದು, ಅದನ್ನು ಚೆನ್ನಾಗಿ ಎಡಿಟ್ ಮಾಡಲಾಗಿದೆ. ಸರಿಯಾಗಿ ಗಮನಿಸಿದರೆ ಇದು ನಕಲಿ ಫೋಟೋ ಎಂಬುದು ಗೊತ್ತಾಗುತ್ತದೆ. ಹಾಗಾಗಿ ದೀಪಿಕಾ ಪಡುಕೋಣೆ ಅವರ ಅಭಿಮಾನಿಗಳಿಗೆ ಈ ಬಗ್ಗೆ ಸ್ಪಷ್ಟನೆ ಸಿಕ್ಕಿದೆ. ದೀಪಿಕಾ ಪಡುಕೋಣೆ ಮಗುವಿಗೆ ಜನ್ಮ ನೀಡಿಲ್ಲ. ದೀಪಿಕಾ ಸೆಪ್ಟೆಂಬರ್ 2024 ರಲ್ಲಿ ತಮ್ಮ ಪುಟ್ಟ ಮಗುವನ್ನು ಸ್ವಾಗತಿಸಲಿದ್ದಾರೆ.
ಇದನ್ನೂ ಓದಿ : ಕೋಲಾರದಲ್ಲಿ ಬೈಕ್ಗೆ KSRTC ಬಸ್ ಡಿಕ್ಕಿ – ಕಾಲೇಜು ವಿದ್ಯಾರ್ಥಿ ಸಾವು..!