ಎ.ಪಿ ಅರ್ಜುನ್ ನಿರ್ದೇಶನದ, ಧ್ರುವ ಸರ್ಜಾ ನಟನೆಯ ಮಾರ್ಟಿನ್ ಸಿನಿಮಾ ರಿಲೀಸ್ಗೂ ಮೊದಲೇ ಹೊಸ ಹಿಸ್ಟರಿ ಕ್ರಿಯೇಟ್ ಮಾಡಿದೆ. ಭಾರತೀಯ ಚಿತ್ರರಂಗದಿಂದ ಮೊಟ್ಟ ಮೊದಲ ಬಾರಿಗೆ ಗ್ಲೋಬಲ್ ಲೆವೆಲ್ನಲ್ಲಿ ಮಾರ್ಟಿನ್ ಸಿನಿಮಾದ ಪ್ರೇಸ್ ಮೀಟ್ ನಡೆಯಲಿದೆ.
ಆಗಸ್ಟ್ 5ರಂದು ಮುಂಬೈನ ಪಿವಿಆರ್ ಐಕಾನ್ ಮಾಲ್, ಲಿಂಕ್ ರೋಡ್ ಬಾಂದ್ರಾದಲ್ಲಿ ಮಧ್ಯಾಹ್ನ 3-7 ಗಂಟೆಯವರೆಗೆ ಮಾರ್ಟಿನ್ ಸಿನಿಮಾದ ಪ್ರೇಸ್ಮೀಟ್ ನಡೆಯಲಿದೆ. ಮಾರ್ಟಿನ್ನ ಇಂಟರ್ನ್ಯಾಷನಲ್ ಲೆವೆಲ್ ಪ್ರೇಸ್ಮೀಟ್ನಲ್ಲಿ 13 ಭಾಷೆಯಲ್ಲಿ ಮಾರ್ಟಿನ್ ಟ್ರೇಲರ್ ರಿಲೀಸ್ ಆಗಲಿದೆ. ವಿಶೇಷ ಏನಂದ್ರೆ ಭಾರತೀಯ ಚಿತ್ರರಂಗದಲ್ಲಿ ಇದೇ ಮೊದಲ ಬಾರಿಗೆ ಮಾರ್ಟಿನ್ ಸಿನಿಮಾದ ಪ್ರೇಸ್ಮೀಟ್ಗೆ 21 ದೇಶದಿಂದ 30 ಪತ್ರಕರ್ತರು ಆಗಮಿಸಲಿದ್ದಾರೆ.
ಇಂಡಿಯಾ, ಈಜಿಪ್ಟ್, ದುಬೈ, ಓಮನ್, ಯುನೈಟೆಡ್ ಕಿಂಗ್ಡಮ್, ಕೆನಾಡ, ಸೌತ್ ಆಫ್ರಿಕಾ, ಜಪಾನ್, ಕೊರಿಯಾ, ನೈಜಿರಿಯಾ, USA, ಚೈನಾ, ರಷ್ಯಾ, ಸುಡನ್, ಹಾಂಗ್ಕಾಂಗ್, ಮಲೇಶಿಯಾ, ಸಿಂಗಪುರ, ವಿಯಟ್ನಾಂ, ಥೈಲ್ಯಾಂಡ್, ಇಂಡೋನೇಷ್ಯಾ, ಬಾಂಗ್ಲಾದೇಶ, ಕ್ಯಾಂಬೋಡಿಯಾ ದೇಶಗಳಿಂದ ಬರೋಬರಿ 30 ಪತ್ರಕರ್ತರು ಮಾರ್ಟಿನ್ ಗ್ಲೋಬಲ್ ಪ್ರೇಸ್ಮೀಟ್ಗೆ ಭಾಗಿಯಾಗಲಿದ್ದಾರೆ. ಈ ಹಿಂದೆ ಬಾಲಿವುಡ್ನಲ್ಲಿ ನಟ ಅಕ್ಷಯ್ ಕುಮಾರ್ ಸಿನಿಮಾ ಪ್ರೇಸ್ಮೀಟ್ಗೆ 3 ದೇಶಗಳಿಂದ ಕರೆಸಿದ್ರು. ಆದ್ರೆ ಮಾರ್ಟಿನ್ ಇದೀಗ ಯಾವ ಸಿನಿಮಾನೂ ಮಾಡದೇ ಇರುವಂತಹ ಸಾಹಸವನ್ನ ಮಾಡ್ತಿದೆ.
ಇನ್ನೊಂದು ವಿಶೇಷ ಅಂದ್ರೆ ಮುಂಬೈಗೂ ಮೊದಲೇ ಆಗಸ್ಟ್ 4ರಂದು ಬೆಂಗಳೂರಿನ ವಿರೇಶ್ ಚಿತ್ರಮಂದಿರದಲ್ಲಿ ಧ್ರುವ ಅಭಿಮಾನಿಗಳ ಮಧ್ಯದಲ್ಲಿ ಮತ್ತೊಂದು ಮಾರ್ಟಿನ್ ಟ್ರೇಲರ್ ರಿಲೀಸ್ ಆಗಲಿದೆ. ಮಾರ್ಟಿನ್ ಸಿನಿಮಾ ರಿಲೀಸ್ಗೂ ಮೊದಲೇ ಡಿಫರೆಂಟ್ ಆಗಿ ಸುದ್ದಿಗೋಷ್ಠಿ ಮಾಡುವ ಮೂಲಕ ಸಖತ್ ಕ್ರೇಜ್ ಕ್ರಿಯೇಟ್ ಮಾಡಲಿದೆ.
ಮಾರ್ಟಿನ್ ಚಿತ್ರ ಬರೋಬರಿ 130 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದ್ದು, ಸ್ಟಾರ್ ಡೈರೆಕ್ಟರ್ ಎ.ಪಿ ಅರ್ಜುನ್ ಹಾಗೂ ಧ್ರುವ ಸರ್ಜಾ ಕಾಂಬಿನೇಷನ್ನಲ್ಲಿ ಮೂಡಿಬರ್ತಿರೋ ಎರಡನೇ ಸಿನಿಮಾ ಇದಾಗಿದೆ. ಈ ಚಿತ್ರವನ್ನು ಸ್ಟಾರ್ ನಿರ್ಮಾಪಕ ಉದಯ್ ಮೆಹ್ತಾ ನಿರ್ಮಾಣ ಮಾಡಿದ್ದು, ಆ್ಯಕ್ಷನ್ ಜೊತೆಗೆ ದೇಶ ಪ್ರೇಮ ಸಾರುವ ಕಥೆಯೊಂದಿಗೆ ಇದೇ ಅಕ್ಟೋಬರ್ 11ಕ್ಕೆ ತೆರೆ ಮೇಲೆ ಮ್ಯಾಜಿಕ್ ಮಾಡೋಕೆ ರೆಡಿಯಾಗಿದೆ.
ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಜೊತೆ ಪರಭಾಷಾ ನಟಿ ವೈಭವಿ ಶಾಂಡಿಲ್ಯಾ ತೆರೆ ಹಂಚಿಕೊಂಡಿದ್ದಾರೆ. ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ, ತಮ್ಮ ಅಕ್ಕನ ಮಗ ಧ್ರುವನಿಗಾಗಿ ಬರೆದಿರೋ ಕಥೆಯೇ ಮಾರ್ಟಿನ್. ಸಿನಿಮಾದ ಪ್ರಮುಖ ಪಾತ್ರದಲ್ಲಿ ಅನ್ವೇಶಿ ಜೈನ್, ನಿಕಿತನ್ ಧೀರ್ ಸೇರಿದಂತೆ ದೊಡ್ಡ ದೊಡ್ಡ ಕಲಾವಿದರು ನಟಿಸಿದ್ದಾರೆ. 240 ದಿನ ಮಾರ್ಟಿನ್ ಶೂಟಿಂಗ್ ನಡೆದಿದ್ದು, ಇದ್ರಲ್ಲಿ 50 ದಿನ ಕ್ಲೈಮ್ಯಾಕ್ಸ್ ಶೂಟಿಂಗ್ ಮಾಡೋ ಮೂಲಕ ಶೂಟಿಂಗ್ನಲ್ಲಿಯೇ ಸೆನ್ಸೇಷನ್ ಕ್ರಿಯೇಟ್ ಮಾಡಿದೆ.
ಸಾಹಸ ನಿರ್ದೇಶಕರಾದ ರವಿವರ್ಮ ಹಾಗೂ ರಾಮ್ ಲಕ್ಷ್ಮಣ್ ಕೈಚಳಕದಲ್ಲಿ ಮಾರ್ಟಿನ್ ಆ್ಯಕ್ಷನ್ ಸೀನ್ಗಳು ಮೂಡಿಬಂದಿದೆ. ತೆಲುಗಿನ ಹೆಸರಾಂತ ಮ್ಯೂಸಿಕ್ ಡೈರೆಕ್ಟರ್ ಮಣಿಶರ್ಮಾ ಮ್ಯೂಸಿಕ್ ಜೊತೆಗೆ ಕನ್ನಡದ ರವಿ ಬಸ್ರೂರ್ ಸಹ ಚಿತ್ರತಂಡದ ಜೊತೆ ಕೈ ಜೋಡಿಸಿದ್ದಾರೆ. ಸತ್ಯ ಹೆಗಡೆ ಛಾಯಾಗ್ರಹಣ, ಮಹೇಶ್‌ರೆಡ್ಡಿ ಸಂಕಲನ ಈ ಚಿತ್ರಕ್ಕಿದೆ.
ಇದನ್ನೂ ಓದಿ : ಚಿಕ್ಕಬಳ್ಳಾಪುರ ಪೊಲೀಸರ ಭರ್ಜರಿ ಕಾರ್ಯಾಚರಣೆ – ಉದ್ಯಮಿಗಳನ್ನ ಕಿಡ್ನಾಪ್ ಮಾಡಿದ್ದ ನಟೋರಿಯಸ್ ಗ್ಯಾಂಗ್ ಅರೆಸ್ಟ್..!