ಹುಬ್ಬಳ್ಳಿ : ನಗರದಲ್ಲಿ ಮತ್ತೆ ಪೊಲೀಸ್ ರಿವಾಲ್ವರ್ ಸದ್ದು ಮಾಡಿದೆ. ತಪ್ಪಿಸಿಕೊಂಡು ಓಡಲು ಯತ್ನಿಸಿದ ಸರಗಳ್ಳನ ಕಾಲಿಗೆ ಪೊಲೀಸರು ಗುಂಡೇಟು ಹಾರಿಸಿ ಬಂಧಿಸಿದ್ದಾರೆ. ನಗರದ ಹಲವು ಕಡೆ ಸರಗಳವು ಮಾಡಿದ್ದ ಆರೋಪಿ ಸೋನು ಅಲಿಯಾಸ್ ಅರುಣ ರಾಮು ನಾಯಕ್ ಗುಂಡೇಟು ತಿಂದು ಗಾಯಗೊಂಡವನು.
ರಾಣಿ ಚೆನ್ನಮ್ಮ ಸರ್ಕಲ್ ಸೇರಿ ಹಲವು ಕಡೆ ಈತ ಸರಗಳ್ಳತನ ಮಾಡಿದ್ದ. ಈತ ಎಂಟಿಎಸ್ ಕಾಲೋನಿ ಬಳಿ ಹೆಡ್ ಕಾನ್ಸ್ಟೇಬಲ್ ಡಿ.ಆರ್.ಪಮ್ಮಾರ್, ಪ್ರವೀಣ್ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾನೆ.
ಈ ವೇಳೆ ಹುಬ್ಬಳ್ಳಿ ಉಪನಗರದ ಠಾಣೆ ಇನ್ಸ್ಪೆಕ್ಟರ್ ಎಂ.ಎಸ್. ಹೂಗಾರ್ ಅವರು ಫೈರಿಂಗ್ ನಡೆಸಿದ್ದಾರೆ. ಸದ್ಯ ಗಾಯಾಳು ಆರೋಪಿಯನ್ನು ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆರೋಪಿ ಸೋನು ನಾಯಕ್ ಮೇಲೆ ಇವರೆಗೆ ಒಟ್ಟು 12 ಪ್ರಕರಣಗಳು ದಾಖಲಾಗಿವೆ. ಘಟನಾ ಸ್ಥಳಕ್ಕೆ ಕಮಿಷನರ್ ಎನ್.ಶಶಿಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ : ಜೆಡಿಎಸ್-ಬಿಜೆಪಿಯವರಿಗೆ 1400ಕ್ಕೂ ಹೆಚ್ಚು ಮುಡಾ ಸೈಟ್ ಹಂಚಿಕೆಯಾಗಿವೆ – ಡಿ.ಕೆ ಸುರೇಶ್ ಗುಡುಗು..!