ಬೆಂಗಳೂರು : ಮುಡಾ ಹಗರಣ ಆಗಿದ್ದೇ ಬಿಜೆಪಿ ಅವಧಿಯಲ್ಲಿ, JDS-BJPಯವರಿಗೇ 1400ಕ್ಕೂ ಹೆಚ್ಚು ಸೈಟ್ ಹಂಚಿಕೆ ಆಗಿವೆ. ಬಿಜೆಪಿ ಅವಧಿಯಲ್ಲಾದ ಭ್ರಷ್ಟಾಚಾರವನ್ನು ನಾವೂ ಹೇಳ್ತೇವೆ ಎಂದು ಡಿ.ಕೆ ಸುರೇಶ್ ಹೇಳಿದ್ದಾರೆ.
ಈ ಬಗ್ಗೆ ಬೆಂಗಳೂರಿನಲ್ಲಿ ಮಾಜಿ ಸಂಸದ ಡಿ.ಕೆ ಸುರೇಶ್ ಮಾತನಾಡಿ, ಬಿಜೆಪಿ-ಜೆಡಿಎಸ್ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡ್ತಿವೆ. ಸಿಎಂ ಪತ್ನಿ ಸೈಟ್ನಲ್ಲಿ ಯಾವುದೇ ನಿಯಮ ಉಲ್ಲಂಘನೆ ಆಗಿಲ್ಲ, ಕೇಂದ್ರದ ಅನುದಾನದಲ್ಲೂ ಅನ್ಯಾಯ ಆಗ್ತಾ ಇದೆ. ನಮ್ಮ ತೆರಿಗೆಯ ಪಾಲು ಸರಿಯಾಗಿ ಕೊಡ್ತಾ ಇಲ್ಲ, ಇದನ್ನೆಲ್ಲಾ ಮರೆ ಮಾಚಲು ಈ ಪಾದಯಾತ್ರೆ ನಾಟಕ ಎಂದಿದ್ದಾರೆ.
ಬಿಜೆಪಿ-ಜೆಡಿಎಸ್ ಪಾದಯಾತ್ರೆಗೆ ಪ್ರತಿ ದಿನವೂ ತಕ್ಕ ಉತ್ತರ ಕೊಡ್ತೇವೆ. ನಮ್ಮ ಪ್ರಶ್ನೆಗಳಿಗೆ ಉತ್ತರ ಕೊಟ್ಟು ಬಿಜೆಪಿಯವರು ಪಾದಯಾತ್ರೆ ಮಾಡಲಿ ಎಂದು ಬಿಜೆಪಿ-ಜೆಡಿಎಸ್ ವಿರುದ್ಧ ಡಿ.ಕೆ.ಸುರೇಶ್ಗುಡುಗಿದ್ದಾರೆ.
ಇದನ್ನೂ ಓದಿ : ಅಕ್ಷರಶಃ ನರಕವಾದ ದೇವರನಾಡು – ಮೃತರ ಸಂಖ್ಯೆ 300ಕ್ಕೆ ಏರಿಕೆ..!
Post Views: 54